ಚನ್ನರಾಯಪಟ್ಟಣ: ನಗರದ ಬೈರಾಪಟ್ಟಣ ಗ್ರಾಮದಲ್ಲಿ ಸರ್ಕಾರದಿಂದ ನೀಡಲಾಗುತ್ತಿದ್ದಂತ ಚುಚ್ಚುಮದ್ದು ಪಡೆದಂತ ಒಂದೇ ಗಂಟೆಯಲ್ಲಿ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ಸ್ಪೂರ್ತಿ ಹಾಗೂ ಮೋಹನ್ ಎಂಬುವರ ದಂಪತಿಯ ಒಂದೂವರೆ ತಿಂಗಳ ಮಗುವನ್ನು ಜಸ್ಟಿಂಕ್ ಪೆಂಟಾ ಎಂಬಂತ ವ್ಯಾಕ್ಸಿನ್ ಕೊಡಿಸೋದಕ್ಕೆ ಕರೆದೊಯ್ಯಲಾಗಿತ್ತು.
ಸರ್ಕಾರಿ ಆಸ್ಪತ್ರೆಗೆ ತೆರಳಿ ಜಸ್ಟಿಂಕ್ ಪೆಂಟಾ ವ್ಯಾಕ್ಸಿನ್ ಪಡೆದು ಮನೆಗೆ ಮರಳಿದಾಗ, ಮನೆಗೆ ಮಗು ಮರಳಿದಂತ ಒಂದೇ ಗಂಟೆಯಲ್ಲಿ ಮಗು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಒಂದು ತಿಂಗಳ ಗಂಡು ಮಗು ವ್ಯಾಕ್ಸಿನ್ ಪಡೆದ ನಂತ್ರ ಸಾವನ್ಪಪ್ಪಿದ್ದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BREAKING: ರೈತರಿಗೆ ಬೆಳೆಗಳ ಮೇಲೆ ‘MSP’ಯ ಕಾನೂನು ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ- ರಾಹುಲ್ ಗಾಂಧಿ ಘೋಷಣೆ
BIG NEWS: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’11 DYSP, 51 PI’ ವರ್ಗಾವಣೆ