ಚಿತ್ರದುರ್ಗ: ಮಾತ್ರಗಳನ್ನು ಮಕ್ಕಳಿಂದ ದೂರವಿಡಿ ಅಂತ ವೈದ್ಯರು ಸೇರಿದಂತೆ ಎಲ್ಲರೂ ಹೇಳುತ್ತಾರೆ. ಹಾಗೇ ಮಾತ್ರೆಗಳನ್ನು ಮಕ್ಕಳಿಂದ ದೂರ ಕೂಡ ಇಡುತ್ತಾರೆ. ಒಂದು ವೇಳೆ ಪೋಷಕರಾದಂತ ನೀವು ಮಾತ್ರೆಗಳ್ನು ಎಲ್ಲೆಂದರಲ್ಲಿ ಇಡ್ತಾ ಇದ್ದರೇ, ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ.
ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದ ಪವಿತ್ರಾ ಎಂಬುವರಿಗೆ ಹುಷಾರ್ ಇಲ್ಲದ ಕಾರಣ ವೈದ್ಯರ ಬಳಿ ತೆರಳಿ ತೋರಿಸಿಕೊಂಡು ಬಂದಿದ್ದರು. ವೈದ್ಯರು ನೀಡಿದಂತ ಮಾತ್ರೆಗಳನ್ನು ಮನೆಯಲ್ಲಿ ಇರಿಸಿದ್ದರು. ಹೀಗೆ ಇರಿಸಿದ್ದಂತ ಮಾತ್ರೆಗಳನ್ನೇ ಅವರ 5 ವರ್ಷದ ಋತ್ವಿಕ್ ಮಮಗು ಚಾಕೋಲೇಟ್ ಎಂಬುದಾಗಿ ಭಾವಿಸಿ ತಿಂದಿದೆ. ಕೂಡಲೇ ಅನಾರೋಗ್ಯಕ್ಕೆ ಒಳಗಾಗಿದೆ.
ಮಗ ಅನಾರೋಗ್ಯಕ್ಕೆ ಒಳಗಾಗಿದ್ದನ್ನು ಗಮನಿಸಿದಂತ ವಸಂತ್ ಹಾಗೂ ಪವಿತ್ರಾ ದಂಪತಿಗಳು ಕೂಡಲೇ ಚಿತ್ರದುರ್ಗ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದ್ರೇ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ವೈದ್ಯರ ಸೂಚನೆಯ ಮೇರೆಗೆ ಮಗುವನ್ನು ಬೆಂಗಳೂರಿಗೆ ಕೊಂಡೊಯ್ದಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಮಾತ್ರೆಯನ್ನು ಚಾಕೋಲೇಟ್ ಎಂದು ತಿಂದು ಚಿಕಿತ್ಸೆ ಪಡೆಯುತ್ತಿದ್ದಂತ 5 ವರ್ಷದ ಋತ್ವಿಕ್ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ. ಈ ಸಂಬಂಧ ಚಿತ್ರದುರ್ಗದ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮೇಶ್ವರ ‘ಕಫೆ ಬಾಂಬ್ ಸ್ಫೋಟ’ ಪ್ರಕರಣ: ‘ಆರೋಪಿ’ಯ ಸುಳಿವು ದೊರೆತಿದೆ – ಸಿಎಂ ಸಿದ್ಧರಾಮಯ್ಯ
‘ಪುನೀತ್ ರಾಜಕುಮಾರ್’ ಹೆಸರಲ್ಲಿ ರಾಜ್ಯಾದ್ಯಂತ ‘ಹೃದಯ ಜ್ಯೋತಿ’ ಯೋಜನೆ ಪ್ರಾರಂಭ : ದಿನೇಶ್ ಗುಂಡೂರಾವ್