ಬೆಂಗಳೂರು: ನಗರದ ಚಿಕ್ಕಪೇಟೆ ಸಂಚಾರ ಠಾಣೆಯ ಹೆಸರನ್ನು ರಾಜ್ಯ ಸರ್ಕಾರ ಬದಲಾಯಿಸಿ, ಚಾಮರಾಜಪೇಟೆ ಸಂಚಾರ ಠಾಣೆಯೆಂದು ಮರುನಾಮಕರಣಗೊಳಿಸಿತ್ತು. ಈ ಹಿನ್ನಲೆಯಲ್ಲಿ ಇದೀಗ ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆಯೆಂದು ಮರುನಾಮಕರಣಗೊಳಿಸಿ, ಹೊಸ ಬೋರ್ಡ್ ಹಾಕಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅನಿತಾ ಅವರು ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅವರಿಗೆ ರಾಜ್ಯ ಸರ್ಕಾರದ ಆದೇಶವನ್ನು ಕೂಡಲೇ ಪಾಲಿಸುವಂತೆ ಸೂಚಿಸಿದ್ದರು. ಡಿಸಿಪಿ ಸೂಚನೆ ಕಾರಣ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆ ಎಂಬುದಾಗಿ ಹಾಕಲಾಗಿದ್ದಂತ ಬೋರ್ಡ್ ಬದಲಿಸಿ, ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆ ಎಂಬುದಾಗಿ ಹೊಸ ಬೋರ್ಡ್ ಅಳವಡಿಸಲಾಗಿದೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್: ಅ.7ರಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ‘ಇ-ಖಾತಾ’ ವ್ಯವಸ್ಥೆ ಜಾರಿ