ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡದ ಯುವತಿ ಬಸ್​ನಿಂದ ಕೆಳಗೆ ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಹೀಗಾಗಿ ಪೋಷಕರು ತಮ್ಮ ಮಗಳ ಅಂಗಾಗ ದಾನಕ್ಕೆ ಮುಂದಾಗಿದ್ದ ವಿಚಾರ ನಿಮಗೆ ಗೊತ್ತಿದೆ.

ಇದರ ನಡುವೆ ರಕ್ಷಿತಾ ಪೋಷಕರು ಅಂತ್ಯಕ್ರಿಯೆ ನಡೆಸಿದ್ದಾರೆ. ಇಂದು ಮೃತ ವಿದ್ಯಾರ್ಥಿನಿ ರಕ್ಷಿತಾಳ ಮೃತದೇಹವನ್ನು ನಗರದ ಬಸವನಹಳ್ಳಿ ಕಾಲೇಜಿನಲ್ಲಿ ಮೃತದೇಹ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಆಕೆಯ ಅಣ್ಣ , ತಂಗಿ ಸಾವಿನ ದುಃಖದಲ್ಲಿ ಪುನೀತ್ ರಾಜ್ ಕುಮಾರ್ ಅವರ ಗೊಂಬೆ ಹೇಳುತೈತೆ ಹಾಡು ಹೇಳಿ ಕಣ್ಣೀರಿಟ್ಟಿದ್ದಾನೆ. ಇಡೀ ಕಾಲೇಜಿಗೆ ಕಾಲೇಜು, ಗ್ರಾಮಸ್ಥರು ರಕ್ಷಿತಾ ಅಣ್ಣನ ಹಾಡು ಕೇಳಿ ಕಣ್ಣೀರಿಟ್ಟಿದ್ದಾರೆ. ಹೌದು, ಕಾಫಿನಾಡಿನಲ್ಲಿ ಇಂತಹದ್ದೊಂದು ಮನಕಲುಕುವ ಘಟನೆ ನಡೆದಿದೆ. ಬದುಕಿ ಬಾಳಬೇಕಾಗಿದ್ದ ಚಿಕ್ಕ ವಯಸ್ಸಿನಲ್ಲೇ ಅಗಲಿ ಹೋಗಿದ್ದಾಳೆ.

ಇನ್ನೂ, ಅಪ್ಪು ನಿಧನರಾದ ಬಳಿಕವ ಅವರ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. ಪುನೀತ್ ಅವರನ್ನೇ ಸ್ಪೂರ್ತಿಯಾಗಿಸಿಕೊಂಡ ರಕ್ಷಿತಾ ಕುಟುಂಬಸ್ಥರು ಯುವತಿ ಅಂಗಾಂಗಗಳ ನ್ನು ದಾನ ಮಾಡಲು ನಿರ್ಧರಿಸಿದ್ದರು.

ಇಂದು ರಕ್ಷಿತಾಳ ಹೃದಯ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಯಿತು. ಹೃದಯವನ್ನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಗಿದೆ. ಈ ಮೂಲಕ ಮಗಳ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ  ತಾಂಡ್ಯದ ರಕ್ಷಿತಾ ಎಂಬ ಯುವತಿ. ಚಿಕ್ಕಮಗಳೂರು ನಗರದ ಬಸವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ವ್ಯಾಸಂಗ ಮಾಡ್ತಿದ್ದ ಯುವತಿ, ಮನೆಗೆ ಹಿಂದಿರುವಾಗ ಬಸ್ಸಿನಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡಿದ್ದ ರಕ್ಷಿತಾಳನ್ನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ರು. ಆದರೆ ರಕ್ಷಿತಾಳ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಬದಕಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ರಕ್ಷಿತಾಳ ಬೇರೆಲ್ಲಾ ಅಂಗಾಂಗಗಳಿಗೆ ಯಾವುದೇ ತೊಂದರೆಯಾಗದ ಹಿನ್ನೆಲೆಯಲ್ಲಿ ಅವುಗಳ ದಾನಕ್ಕೆ ಮುಂದಾಗಬಹುದು ಎಂದು ವೈದ್ಯರು ರಕ್ಷಿತ ಕುಟುಂಬಕ್ಕೆ ಮಾಹಿತಿ ನೀಡಿದ್ದರು.

ರಕ್ಷಿತಾಳ ಪೋಷಕರಾದ ಲಕ್ಷ್ಮಿ ಬಾಯಿ, ಶೇಖರ್ ನಾಯ್ಕ್ ಮಗಳ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ ಎರಡು ಕಣ್ಣುಗಳು, ಹೃದಯ, ಎರಡು ಕಿಡ್ನಿಗಳು, ಎರಡು ಶ್ವಾಸಕೋಶಗಳು ಸೇರಿ ಒಟ್ಟು ಒಂಭತ್ತು ಮಂದಿಗೆ ರಕ್ಷಿತಾಳ ಅಂಗಾಂಗಗಳನ್ನ ಜೋಡಿಸಲು ತೀರ್ಮಾನಿಸಿದ್ದರು.

”ನಿಮ್ಮ ಮಾತುಗಳಿಂದ ಯಾರೂ ಪ್ರಭಾವಿತರಾಗೋಲ್ಲ” ; ‘ಟ್ರೋಲಿಗ’ರಿಗೆ ‘ಭುವನೇಶ್ವರ್’ ಪತ್ನಿ ತರಾಟೆ

BIGG NEWS : ‘ಪಿಎಫ್ಐ’ ವಿರುದ್ಧ ದೇಶಾದ್ಯಂತ 97 ಕಡೆ NIA ದಾಳಿ : ಸೆ.23ಕ್ಕೆ ಕೇರಳ ಬಂದ್ ಗೆ ಸಂಘಟನೆ ಕರೆ | Kerala Bandh On Friday

Share.
Exit mobile version