ವರ್ಲ್ಡ್ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಮತ್ತು ಅವರ ಗೆಳತಿ ಎಲಾ ವಿಕ್ಟೋರಿಯಾ ಮಲೋನ್ ಓಸ್ಲೋದಲ್ಲಿ ವಿವಾಹವಾದರು
ಮ್ಯಾಗ್ನಸ್ ಕಾರ್ಲ್ಸನ್-ಎಲಾ ವಿಕ್ಟೋರಿಯಾ ಮಲೋನ್ ವಿವಾಹ ಸಮಾರಂಭವು ಓಸ್ಲೋದ ಹೋಲ್ಮೆನ್ಕೊಲ್ಲನ್ ಚಾಪೆಲ್ನಲ್ಲಿ ನಡೆಯಿತು ಎಂದು ನಾರ್ವೇಜಿಯನ್ ಮಾಧ್ಯಮ ಸಂಸ್ಥೆ ಎನ್ಆರ್ಕೆ ವರದಿ ಮಾಡಿದೆ. ಕಳೆದ ವರ್ಷ ಜರ್ಮನಿಯಲ್ಲಿ ನಡೆದ ಫ್ರೀಸ್ಟೈಲ್ ಚೆಸ್ ಚಾಲೆಂಜರ್ನಲ್ಲಿ ಇಬ್ಬರೂ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದರು. ಅಂದಿನಿಂದ ಅವರಿಬ್ಬರು ಪ್ರತಿ ಕಾರ್ಯಕ್ರಮದಲ್ಲೂ ಒಟ್ಟಿಗೆ ಕಾಣಿಸಿಕೊಂಡರು. ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಇತ್ತೀಚೆಗೆ ಫಿಡೆ ವರ್ಲ್ಡ್ ಬ್ಲಿಟ್ಜ್ ಚಾಂಪಿಯನ್ಶಿಪ್ 2024 ಪ್ರಶಸ್ತಿಯನ್ನು ಇಯಾನ್ ನೆಪೊಮ್ನಿಯಾಚ್ಚಿ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಗೆಳತಿ ಎಲಾ ವಿಕ್ಟೋರಿಯಾ ಮಲೋನ್ ಅವರನ್ನು ವಿವಾಹವಾದರು