ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಒಂದು ಪ್ರಕರಣದಲ್ಲಿ ದೋಷಾರೋಪವನ್ನು ಕೋರ್ಟ್ ನಿಗದಿ ಪಡಿಸಿದೆ. ಈ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ಬಿಗ್ ಶಾಕ್ ನೀಡಲಾಗಿದೆ.
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ, ಅಶ್ಲೀಲ ದೃಶ್ಯ ಸೆರೆ ಸಂಬಂಧದ ಪ್ರಕರಣದ ವಿಚಾರಣೆ ನಡೆಯಿತು. ಪ್ರಜ್ವಲ್ ರೇವಣ್ಣ ಮೇಲಿನ 8 ಆರೋಪಗಳ ಬಗ್ಗೆ ನ್ಯಾಯಾಧೀಶರು ಪ್ರಶ್ನಿಸಿದರು. ಎರಡೂ ದೋಷಾರೋಪಣೆ ಒಪ್ಪಲು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನಿರಾಕರಿಸಿದರು. ಅತ್ಯಾಚಾರ, ಅಶ್ಲೀಲ ದೃಶ್ಯ ಸೆರೆಗೆ ಸಂಬಂಧಿಸಿದಂತ ದೋಷಾರೋಪಗಳು.
ನಾನು ಯಾವುದೇ ತಪ್ಪಿ ಮಾಡಿಲ್ಲವೆಂದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಾರೋಪಗಳನ್ನು ನಿರಾಕರಿಸಿದರು. ಆದರೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ 2/2024ರ ಪ್ರಕರಣದಲ್ಲಿ ದೋಷಾರೋಪವನ್ನು ನಿಗದಿ ಪಡಿಸಿತು. ಆ ಬಳಿಕ ಏಪ್ರಿಲ್ 9ಕ್ಕೆ ಕೇಸ್ ಟ್ರಯಲ್ ಗೆ ದಿನಾಂಕ ನಿಗದಿಯನ್ನು ಕೋರ್ಟ್ ಮಾಡಿದೆ.
Good News: ‘PPF ಖಾತೆ’ಗಳ ನಾಮಿನಿ ನವೀಕರಣಕ್ಕೆ ಯಾವುದೇ ಶುಲ್ಕವಿಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್