ನವದೆಹಲಿ: ಚಾರ್ ಧಾಮ್ ದೇವಾಲಯಗಳ ಆವರಣದಲ್ಲಿ ‘ವಿಐಪಿ ದರ್ಶನ’, ವಿಡಿಯೋಗ್ರಫಿ ರೀಲ್ ಮಾಡುವುದನ್ನು ಉತ್ತರಾಖಂಡ ನಿಷೇಧಿಸಿದೆ. ಚಾರ್ ಧಾಮ್ ಯಾತ್ರೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಉತ್ತರಾಖಂಡ ಸರ್ಕಾರವು ಈ ವರ್ಷದ ಮೇ 31 ರವರೆಗೆ “ವಿಐಪಿ ದರ್ಶನ” ನಿಷೇಧವನ್ನು ವಿಸ್ತರಿಸಲು ನಿರ್ಧರಿಸಿದೆ.
ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರತುರಿ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ, “ಈ ವರ್ಷ, ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ ಎಂದು ನಾನು ತಿಳಿಸಲು ಬಯಸುತ್ತೇನೆ. ಉತ್ತಮ ನಿರ್ವಹಣೆಗಾಗಿ, ಮೇ 31, 2024 ರವರೆಗೆ ಯಾವುದೇ “ವಿಐಪಿ ದರ್ಶನ” ನಡೆಸದಿರಲು ನಾವು ನಿರ್ಧರಿಸಿದ್ದೇವೆ. ಧಾಮಗಳಲ್ಲಿ ದರ್ಶನ ಪ್ರಕ್ರಿಯೆಯನ್ನು ಸುಗಮಗೊಳಿಸುವ ಸಲುವಾಗಿ, ರಾಜ್ಯ ಸರ್ಕಾರವು ಚಾರ್ಧಾಮ್ ಯಾತ್ರೆಗೆ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಹೇಳಿದರು.