ಬೆಂಗಳೂರು: ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಪಿಟ್ ಲೈನ್ ಪುನರ್ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಅವುಗಳ ಮುಂದೆ ನೀಡಿರುವ ವಿವರದಂತೆ ಬದಲಾವಣೆಯನ್ನು ಮಾಡಲಾಗಿದೆ.
1) ದಿನಾಂಕ 16.01.2026 ರಿಂದ 10.03.2026 ರವರೆಗೆ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ ಜಂಕ್ಷನ್ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಅನ್ನು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಕೆಎಸ್ಆರ್ ಬೆಂಗಳೂರಿಗೆ ಬದಲಾಗಿ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.
2) ದಿನಾಂಕ 17.01.2026 ರಿಂದ 11.03.2026 ರವರೆಗೆ ಹೊರಡುವ ರೈಲು ಸಂಖ್ಯೆ 12677 ಕೆಎಸ್ಆರ್ ಬೆಂಗಳೂರು – ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು ಈ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಬದಲಾಗಿ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಬೆಳಿಗ್ಗೆ 06:20 ಕ್ಕೆ ಹೊರಡುತ್ತದೆ.
3) ದಿನಾಂಕ 16.01.2026 ರಿಂದ 10.03.2026 ರವರೆಗೆ ಹೊರಡುವ ರೈಲು ಸಂಖ್ಯೆ 16594 ಹಜೂರ್ ಸಾಹಿಬ್ ನಾಂದೇಡ್ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರವು ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಯಶವಂತಪುರ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ. ಈ ರೈಲು ಯಲಹಂಕ, ಲೊಟ್ಟೆಗೊಲ್ಲಹಳ್ಳಿ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್‌ಆರ್ ಬೆಂಗಳೂರಿನ ನಿಲುಗಡೆಗಳು ಇರುವುದಿಲ್ಲ.
4) ದಿನಾಂಕ 17.01.2026 ರಿಂದ 11.03.2026 ರವರೆಗೆ ಹೊರಡುವ ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು – ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಯಶವಂತಪುರದಿಂದ ರಾತ್ರಿ 11:55 ಕ್ಕೆ ಹೊರಡಲಿದೆ. ಈ ರೈಲು ಯಶವಂತಪುರ, ಲೊಟ್ಟೆ ಗೊಲ್ಲಹಳ್ಳಿ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದ್ದು ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಿಲುಗಡೆಗಳು ಇರುವುದಿಲ್ಲ.
5) ದಿನಾಂಕ 16.01.2026 ರಿಂದ 10.03.2026 ರವರೆಗೆ ಹೊರಡುವ ರೈಲು ಸಂಖ್ಯೆ 16512 ಕಣ್ಣೂರು – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರವು ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ. ಈ ರೈಲು ಯಶವಂತಪುರ, ಹೆಬ್ಬಾಳ, ಬಾಣಸವಾಡಿ ಮತ್ತು ಎಸ್‌ಎಂವಿಟಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ.
6) ದಿನಾಂಕ 17.01.2026 ರಿಂದ 11.03.2026 ರವರೆಗೆ ಹೊರಡುವ ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಿಂದ ರಾತ್ರಿ 8:00 ಗಂಟೆಗೆ ಹೊರಡಲಿದೆ. ಈ ರೈಲು ಎಸ್‌ಎಂವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.
ಪ್ರಯಾಣಿಕರು ಹೆಚ್ಚಿನ ವಿವರಗಳಿಗಾಗಿ, 139 ಅನ್ನು ಡಯಲ್ ಮಾಡಬಹುದು, NTES ಅಪ್ಲಿಕೇಶನ್ ಅನ್ನು ಪರಿಶೀಲಿಸಬಹುದು ಅಥವಾ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.indianrailways.gov.in ಗೆ ಭೇಟಿ ನೀಡಬಹುದು








