Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ಏಕಾಂತದ ಸಮಯದಲ್ಲಿ ನಡೆದ ಜಗಳ; ಪತ್ನಿಯನ್ನೇ ಇರಿದು ಕೊಂದ ಪತಿ ಅರೆಸ್ಟ್!

09/04/2026 8:25 AM

ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

09/04/2026 8:22 AM

ಐಪಿಎಲ್ 2026ರಲ್ಲಿ ಹೊಸ ರೂಲ್ಸ್: ಸಬ್‌ಸ್ಟಿಟ್ಯೂಟ್ ಆಟಗಾರರು ಮತ್ತು ಡ್ರಿಂಕ್ಸ್ ಬ್ರೇಕ್‌ಗೆ ಬ್ರೇಕ್ ಹಾಕಿದ ಬಿಸಿಸಿಐ!

09/04/2026 8:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಭೂಪರಿವರ್ತನೆಯಾದ ಜಮೀನುಗಳ ಪಹಣಿಯಲ್ಲಿ ಖಾತಾ ಬದಲಾವಣೆ : ಸರ್ಕಾರದಿಂದ ಮಹತ್ವದ ಆದೇಶ !
KARNATAKA

ರಾಜ್ಯದಲ್ಲಿ ಭೂಪರಿವರ್ತನೆಯಾದ ಜಮೀನುಗಳ ಪಹಣಿಯಲ್ಲಿ ಖಾತಾ ಬದಲಾವಣೆ : ಸರ್ಕಾರದಿಂದ ಮಹತ್ವದ ಆದೇಶ !

By kannadanewsnow5701/03/2026 5:20 AM

ಬೆಂಗಳೂರು: ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ (NA) ಗೊಂಡಿದ್ದರೂ, ಇನ್ನೂ ಅಭಿವೃದ್ಧಿಯಾಗದ (Converted but Un-developed) ಜಮೀನುಗಳ ಮಾಲೀಕರಿಗೆ ರಾಜ್ಯ ಸರ್ಕಾರವು ಮಹತ್ವದ ಸೌಲಭ್ಯವೊಂದನ್ನು ಕಲ್ಪಿಸಿದೆ. ಇಂತಹ ಜಮೀನುಗಳ ಪಹಣಿಗಳಲ್ಲಿ ಖಾತಾ ಬದಲಾವಣೆ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕಂದಾಯ ಇಲಾಖೆಯ ಆಯುಕ್ತರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಏನಿದೆ ರಾಜ್ಯ ಸರ್ಕಾರದ ಆದೇಶದಲ್ಲಿ?

ಈ ಮೊದಲು ಭೂಪರಿವರ್ತನೆಗೊಂಡ ಪಹಣಿಗಳಲ್ಲಿ ‘NA’ ಎಂದು ಫ್ಲಾಗ್ ಆದ ನಂತರ, ಆಸ್ತಿ ಗುರುತಿನ ಸಂಖ್ಯೆ (ಇ-ಖಾತಾ) ಇಲ್ಲದೆ ನೋಂದಣಿ ಪ್ರಕ್ರಿಯೆಗೆ ಅಡಚಣೆಯಾಗುತ್ತಿತ್ತು. ಈಗ ‘ಭೂಮಿ’ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ.

ಅಭಿವೃದ್ಧಿಯಾಗದ ಜಮೀನುಗಳಿಗೆ ಅವಕಾಶ: ಕೃಷಿಯೇತರ ಉದ್ದೇಶಕ್ಕೆ ಬದಲಾಗಿದ್ದರೂ, ಲೇಔಟ್ ಅಥವಾ ಇನ್ಯಾವುದೇ ಅಭಿವೃದ್ಧಿ ಕಾಣದ ಜಮೀನುಗಳನ್ನು ‘ಅಭಿವೃದ್ಧಿಯಾಗದ ಜಮೀನು’ ಎಂದು ಪರಿಗಣಿಸಿ, ಅವುಗಳ ಪಹಣಿ ಆಧಾರದ ಮೇಲೆ ನೋಂದಣಿ ಮತ್ತು ಖಾತಾ ಬದಲಾವಣೆಗೆ ಅವಕಾಶ ನೀಡಲಾಗಿದೆ.

ಮಾರುಕಟ್ಟೆ ಮೌಲ್ಯದ ಅನ್ವಯ: ಇಂತಹ ಜಮೀನುಗಳ ನೋಂದಣಿ ಸಂದರ್ಭದಲ್ಲಿ ಇವುಗಳನ್ನು ಕೃಷಿ ಜಮೀನು ಎಂದು ಪರಿಗಣಿಸದೆ, ಪ್ರಚಲಿತದಲ್ಲಿರುವ ಕೃಷಿಯೇತರ ಅಭಿವೃದ್ಧಿಯಾಗದ ಜಮೀನುಗಳ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಮುದ್ರಾಂಕ ಶುಲ್ಕ ಪಾವತಿಸಿಕೊಳ್ಳಲು ಸೂಚಿಸಲಾಗಿದೆ.

ಮ್ಯುಟೇಷನ್ ತಿರಸ್ಕರಿಸುವಂತಿಲ್ಲ: ಕೇವಲ ಭೂಪರಿವರ್ತನೆಯಾಗಿದೆ ಎಂಬ ಕಾರಣ ನೀಡಿ ಯಾವುದೇ ಮ್ಯುಟೇಷನ್ (ಖಾತಾ ಬದಲಾವಣೆ) ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ತಹಶೀಲ್ದಾರ್ ಮತ್ತು ರಾಜಸ್ವ ನಿರೀಕ್ಷಕರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ಇ-ಸ್ವತ್ತು ಮತ್ತು ಇ-ಆಸ್ತಿ ಸಂಯೋಜನೆ: ಒಂದು ವೇಳೆ ಜಮೀನಿಗೆ ಈಗಾಗಲೇ ಇ-ಸ್ವತ್ತು ಅಥವಾ ಇ-ಆಸ್ತಿ ಗುರುತಿನ ಸಂಖ್ಯೆ ಸೃಜನೆಯಾಗಿದ್ದರೆ, ಅದರ ಮಾಹಿತಿಯನ್ನು ‘ಭೂಮಿ’ ತಂತ್ರಾಂಶಕ್ಕೆ ವರ್ಗಾಯಿಸಿ ಅದರ ಆಧಾರದ ಮೇಲೆ ವಹಿವಾಟು ನಡೆಸಲು ಕ್ರಮ ಕೈಗೊಳ್ಳಲಾಗಿದೆ.

ಯಾರಿಗೆ ಅನುಕೂಲ?

ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬದಲಿಸಿಕೊಂಡು, ಇನ್ನೂ ಸೈಟುಗಳನ್ನಾಗಿ ಮಾಡದ ಅಥವಾ ಅಭಿವೃದ್ಧಿ ಪಡಿಸದ ಮಾಲೀಕರಿಗೆ ಈ ನಿರ್ಧಾರದಿಂದ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಇದರಿಂದ ಮ್ಯುಟೇಷನ್ ಪ್ರಕ್ರಿಯೆ ವೇಗಗೊಳ್ಳಲಿದ್ದು, ಅನಗತ್ಯ ವಿಳಂಬಕ್ಕೆ ಬ್ರೇಕ್ ಬೀಳಲಿದೆ.

Change in the account of land conversion in the state: Important order from the government!
Share. Facebook Twitter LinkedIn WhatsApp Email

Related Posts

ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

09/04/2026 8:22 AM1 Min Read

SHOCKING : ಬೆಂಗಳೂರಲ್ಲಿ ಘೋರ ಘಟನೆ : ಆಟವಾಡುತ್ತಿದ್ದಾಗ 3ನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮಗು ಗಂಭೀರ.!

09/04/2026 8:07 AM1 Min Read

BREAKING : ರಾಜ್ಯದಲ್ಲಿ ‘ಮಂಗನ ಕಾಯಿಲೆʼಗೆ ಮತ್ತೊಂದು ಬಲಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ವೃದ್ಧ ಸಾವು.!

09/04/2026 7:56 AM1 Min Read
Recent News

Shocking: ಏಕಾಂತದ ಸಮಯದಲ್ಲಿ ನಡೆದ ಜಗಳ; ಪತ್ನಿಯನ್ನೇ ಇರಿದು ಕೊಂದ ಪತಿ ಅರೆಸ್ಟ್!

09/04/2026 8:25 AM

ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

09/04/2026 8:22 AM

ಐಪಿಎಲ್ 2026ರಲ್ಲಿ ಹೊಸ ರೂಲ್ಸ್: ಸಬ್‌ಸ್ಟಿಟ್ಯೂಟ್ ಆಟಗಾರರು ಮತ್ತು ಡ್ರಿಂಕ್ಸ್ ಬ್ರೇಕ್‌ಗೆ ಬ್ರೇಕ್ ಹಾಕಿದ ಬಿಸಿಸಿಐ!

09/04/2026 8:21 AM

ಮನುಷ್ಯನ ದುರಾಸೆಗೆ ಬಲಿಯಾಗುತ್ತಿದೆಯೇ ಪ್ರಕೃತಿ? ನಮ್ಮ ಈಗಿನ ಜೀವನಶೈಲಿಗೆ ಬೇಕು ‘ಎರಡು ಭೂಮಿ’: ವಿಜ್ಞಾನಿಗಳ ಎಚ್ಚರಿಕೆ!

09/04/2026 8:08 AM
State News
KARNATAKA

ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

By kannadanewsnow5709/04/2026 8:22 AM KARNATAKA 1 Min Read

ದೈನಂದಿನ ಜೀವನದಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವ ಉಪಕರಣಗಳಲ್ಲಿ ಇಸ್ತ್ರಿ ಪೆಟ್ಟಿಗೆ (Electric Iron) ಕೂಡ ಒಂದು. ಸರಿಯಾದ ಕ್ರಮ…

SHOCKING : ಬೆಂಗಳೂರಲ್ಲಿ ಘೋರ ಘಟನೆ : ಆಟವಾಡುತ್ತಿದ್ದಾಗ 3ನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮಗು ಗಂಭೀರ.!

09/04/2026 8:07 AM

BREAKING : ರಾಜ್ಯದಲ್ಲಿ ‘ಮಂಗನ ಕಾಯಿಲೆʼಗೆ ಮತ್ತೊಂದು ಬಲಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ವೃದ್ಧ ಸಾವು.!

09/04/2026 7:56 AM

ಇಂದು `ದ್ವಿತೀಯ ಪಿಯುಸಿ ಫಲಿತಾಂಶ’ ಪ್ರಕಟ: ಅಂಕ ಕಡಿಮೆ ಬಂದರೆ ಚಿಂತೆ ಬೇಡ, ವಿದ್ಯಾರ್ಥಿಗಳಿಗಿದೆ ಸುವರ್ಣ ಅವಕಾಶ!

09/04/2026 7:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.