ಬೆಂಗಳೂರು: ಜೈಲಿಗೆ ಹೋಗಬಹುದು ಎಂಬ ಭಯಕ್ಕೆ ಬಿದ್ದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಲೆಕ್ಕ ಪರಿಶೋಧಕ ಚಂದ್ರಶೇಖರ್ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದಕ್ಕೆ ಕಾರಣ ಲೆಕ್ಕಾಧಿಕಾರಿ ಪರುಶರಾಮ್ ಕಾರಣ ವಿಶೇಷ ತನಿಖಾ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ.
ಜಿಲ್ಲಾಸತ್ರ ನ್ಯಾಯಾಲಯಕ್ಕೆ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದು, ಅದರಲ್ಲಿ ಆರೋಪ ಪಟ್ಟಿಯಲ್ಲಿ ನಿಗಮದ ಹಗರಣದಲ್ಲಿ ಒಂದಷ್ಟು ಹಣವನ್ನು ಚಂದ್ರಶೇಖರ್ ಪಡೆದಿದ್ದಾರೆ ಎಂದು ಎನ್ನುವ ಅಂಶವನ್ನು ಕೂಡ ತನಿಖಾ ತಂಡ ಉಲ್ಲೇಖ ಮಾಡಿದೆ ಎನ್ನಲಾಗಿದೆ. ಚಂದ್ರಶೇಖರ್ ಅವರನ್ನು ಗೋವಾ ಮತ್ತು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಪದ್ಮನಾಭ್ ಮತ್ತು ಪರಶುರಾಮ್ ಒತ್ತಡ ಹಾಕಿದ್ದು, ಈ ವೇಳೆ ನೀನು ಹಣವನ್ನು ಪಡೆದುಕೊಂಡಿದ್ದಿ. ಪ್ರಕರಣ ಬೆಳಕಿಗೆ ಬಂದರೆ ನೀನೊಬ್ಬನೇ ಜೈಲಿಗೆ ಹೋಗುವೆ ನಿನ್ನ ವಿರುದ್ಧ ನಾವೇ ದೂರು ಕೊಡುತ್ತೇನೆ ಅಂಥ ಹೆದರಿಸಿದ್ದರು ಎನ್ನಲಾಗಿದೆ. ಈ ನಡುವೆ ಜೈಲಿಗೆ ಹೋಗಬಹುದು ಎಂಬ ಭಯಕ್ಕೆ ಬಿದ್ದು ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ಚಾರ್ಚ್ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.