ಮಂಡ್ಯ: ಸ್ಯಾಂಡಲ್ ವುಡ್ ರ್ಯಾಪ್ ಹಾಡುಗಾರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿವಾಹ ವಿಚ್ಛೇದನ ಪಡೆದಿದ್ದಾರೆ. ದಾಂಪತ್ಯ ಜೀವನದಲ್ಲಿ ಕೇವಲ 4 ವರ್ಷಗಳಲ್ಲೇ ಬಿರುಕುಗೊಂಡಿದೆ. ಆದ್ರೇ ಅವರಿಬ್ಬರನ್ನು ನಟ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಿದ್ರೇ ಒಂದಾಗಿಸಬಹುದು ಅಂತ ಬಿಗ್ ಬಾಸ್ ವಿನ್ನರ್ ಪ್ರಥಮ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿವೋರ್ಸ್ ಆದ ಮಾತ್ರಕ್ಕೆ ಅವರೇನು ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಆಗಲ್ಲ. ಒಂದು ಶೋ ಮುಖ್ಯವಲ್ಲ. ಜೀವನ ಮುಖ್ಯ. ಚೆನ್ನಾಗಿ ಬದುಕಬೇಕು. ಕೇರಿಯರ್ ಬಗ್ಗೆ ಯೋಚಿಸಿ ಯಾರೂ ಮದುವೆ ಆಗಲ್ಲ. ಎಲ್ಲವನ್ನು ಯೋಚಿಸೇ ಮದುವೆ ಆಗ್ತಾರೆ. ಚೆಂದನ್ ಶೆಟ್ಟಿ-ನಿವೇದಿತಾದು ಸುಂದರವಾದ ಬದುಕು. ಇಬ್ಬರು ಚೆನ್ನಾಗಿ ಬದುಕಬೇಕು ಅಂತ ಹೇಳಿದ್ರು.
ನಟ ಧ್ರುವ ಸರ್ಜಾ ಮಾತನ್ನು ಚಂದನ್ ಶೆಟ್ಟಿ ಕೇಳುತ್ತಾರೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಬೇಕು. ಅವರ ದಾಂಪತ್ಯವನ್ನು ಮತ್ತೆ ಒಂದಾಗಿಸೋ ಕೆಲಸವನ್ನು ಮಾಡಬೇಕು. ಧ್ರುವ ಸರ್ಜಾ ಚಂದನ್ ಗೆ ಒಳ್ಳೇದಾಗಲಿ ಅಂತ ಪೊಗರು ಚಿತ್ರದಲ್ಲಿ ಅವಕಾಶ ಕೊಟ್ರು. ಮಿಲನಾ ಚಿತ್ರದಲ್ಲಿ ವಿಚ್ಛೇದನದ ಬಳಿಕವೂ ಒಂದಾಗಲ್ವ ಹಾಗೇ ಚಂದನ್ ಶೆಟ್ಟಿ, ನಿವೇದಿತಾ ಒಂದು ಮಾಡುವ ಕೆಲಸ ಆಗಲಿ ಅಂತ ತಿಳಿಸಿದ್ರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಾನು ಯಾವುದೇ ತನಿಖೆಗೂ ಸಿದ್ದ: ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್