ಚಾಮರಾಜನಗರ :  ಸೆಪ್ಟೆಂಬರ್ 27  ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ದಸರಾ ಸಂಜೆಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಉದ್ಛಾಟಿಸುವ ಮೂಲಕ  ಚಾಮರಾಜನಗರ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.    ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಮುಖ್ಯ ವೇದಿಕೆಯಲ್ಲಿಂದು ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಸಹಯೋಗದಲ್ಲಿ ಚಾಮರಾಜನಗರ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ನಗಾರಿ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು.

 ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ದಸರಾ ಐತಿಹಾಸಿಕ ಹಾಗೂ ಪಾರಂಪರಿಕ ಹಬ್ಬವಾಗಿದೆ. ನಮ್ಮ ಪೂರ್ವಜರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ದಸರಾ ಆಚರಣೆ ಅವಶ್ಯವಾಗಿದೆ. ನಾಡಹಬ್ಬ ದಸರಾ ಕರ್ನಾಟಕದ ಮೈಸೂರಿನಲ್ಲಿ ಮಾತ್ರವಲ್ಲ. ದೇಶದ ಅನೇಕ ಭಾಗಗಳಲ್ಲಿ ಆಚರಣೆಯಾಗುತ್ತಿದೆ. ಜನರಲ್ಲಿ ನಾವೆಲ್ಲಾ ಒಂದೇ ಎನ್ನುವ ಐಕ್ಯತಾ ಭಾವನೆ ಮೂಡಿಸುವುದೇ ಆಚರಣೆಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.

    ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ತುಂಬಿದ ಸಂದರ್ಭದಲ್ಲಿ ದಸರಾ ಸಆಚರಣೆ ವಿಶೇಷವಾಗಿದೆ. ಚಾಮರಾಜನಗರ ಜಿಲ್ಲೆ ಅರ್ಥಿಕವಾಗಿ ಹಿಂದುಳಿದ್ದರೂ ಸಾಂಸ್ಕøತಿಕವಾಗಿ ಶ್ರೀಮಂತವಾಗಿದೆ. ಗ್ರಾಮೀಣ ಭಾಗಗಳಲ್ಲಿ ಜಾನಪದ ಸಾಂಸ್ಕøತಿಕ ಕಲೆಗಳನ್ನು ಮೈಗೂಡಿಸಿಕೊಂಡಿದೆ. ಎಲ್ಲರೂ ಸೇರಿ ಜಿಲ್ಲೆಯನ್ನು  ಅಭಿವೃದ್ಧಿಪಥದತ್ತ ಕೊಂಡೊಯ್ಯಬೇಕಾಗಿದೆ ಎಂದರು.

 ಜಿಲ್ಲೆಯ ಸರ್ವಾಂಗೀಣ ಪ್ರಗತಿಗಾಗಿ ಸರ್ಕಾರ ಹತ್ತು-ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ರೈತರ ಹಿತಕಾಯುವ ನಿಟ್ಟಿನಲ್ಲಿ ಕಾವೇರಿ ಮತ್ತು ಕಪಿಲಾ ನದಿಗಳಿಂದ ಲಿಫ್ಟ್ ಮೂಲಕ ಜಿಲ್ಲೆಯ ಎಲ್ಲಾ ಕೆರೆ-ಕಟ್ಟೆಗಳನ್ನು ತುಂಬಿಸಲು ಡಿ.ಪಿ.ಎ.ಆರ್. ಸಿದ್ದಪಡಿಸಲಾಗಿದೆ. ನಗರದಲ್ಲಿ ಕೆ.ಎ.ಎಸ್, ಐ.ಎ.ಎಸ್ ಹಾಗೂ ಐ.ಪಿ.ಎಸ್ ತರಬೇತಿ ಕೇಂದ್ರ ಆರಂಭಿಸಲು ಸುಸಜ್ಜಿತ ಗ್ರಂಥಾಲಯ ಕಟ್ಟಡ ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.

  ಜಿಲ್ಲೆಯಲ್ಲಿ ಶೇ 48ರಷ್ಟು ಅರಣ್ಯ ಪ್ರದೇಶವಿದ್ದು, ಈ ಪೈಕಿ ಶೇ. 26ರಷ್ಟು ಸಾಗುವಳಿಯಾಗಿದೆ. ಶೇ.37ರಷ್ಟು ನೀರಾವರಿ ಪ್ರದೇಶವಿದ್ದು, 63ರಷ್ಟು ಭೂಭಾಗ ಮಳೆ ಆಶ್ರಿತ ಪ್ರದೇಶದ ಅತೀ ಸಣ್ಣ ರೈತರಿದ್ದಾರೆ. ರೈತರು ಬೆಳೆದ ಬೆಳೆ ನಷ್ಟ ಭರಿಸಲು ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಮಳೆ, ಬೆಳೆ ಹಾನಿಗೂ ಪರಿಹಾರ ಜೊತೆಗೆ 3415 ಸಂತ್ರಸ್ಥರಿಗೆ ಆಹಾರದ ಕಿಟ್ ವಿತರಿಸಲಾಗಿದೆ. ಕೈಗಾರಿಕೆಗಳ ಬೆಳವಣಿಗೆ ಹಾಗೂ ಜನಸಾಮಾನ್ಯರಿಗೆ ಉದ್ಯೀಗವಕಾಶ ಸೃಷ್ಠಿಸುವ ಸಲುವಾಗಿ ಇಂಡಸ್ಟ್ರೀಯಲ್ ಹಬ್ ಸ್ಥಾಪಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ ಚಾಮರಾಜನಗರ ಮೈಸೂರಿನ ಅವಿಭಾಜ್ಯ ಅಂಗವಾಗಿದೆ. ನಾವೆಲ್ಲರೂ ಮೈಸೂರಿನ ಪರಂಪರೆಗೆ ಸೇರಿದವರು. ದಸರಾ ಪಾರಂಪರಿಕ ಹಬ್ಬವನ್ನು ಎಲ್ಲಾ ತಾಲೂಕುಗಳಲ್ಲಿಯೂ ಆಚರಿಸಲಾಗುತ್ತಿದೆ. ಮೈಸೂರಿನ ಅರಸರ ಪರಂಪರೆಯಾಗಿರುವ ನಾಡಹಬ್ಬ ದಸರಾವನ್ನು ಎಲ್ಲರೂ ಗೌರವಿಸಬೇಕು ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ನಾಡಹಬ್ಬ ದಸರಾವನ್ನು ಜಾನಪದ ಕಲೆಗಳ ನೆಲೆವೀಡು. ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 7 ವರ್ಷಗಳಿಂದ ದಸರಾ ಆಚರಿಸಲಾಗುತ್ತಿದೆ. ಮೈಸೂರು ದಸರಾವನ್ನು ಪ್ರತಿಯೊಬ್ಬರು ನೋಡಲು ಸಾಧ್ಯವಾಗುವಂತೆ ಈ ಭಾಗಕ್ಕೂ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿಯವರು ಪ್ರತಿಯೊಬ್ಬ ನಾಗರಿಕನಿಗೆ ಆರೋಗ್ಯದ ಹಕ್ಕನ್ನು ನೀಡಿದ್ದಾರೆ : ಅಮಿತ್ ಶಾ

BREAKING NEWS : ಮದ್ಯ ನೀತಿ ಹಗರಣ ; ದೆಹಲಿ ಡೆಪ್ಯೂಟಿ ಸಿಎಂ ‘ಮನೀಶ್ ಸಿಸೋಡಿಯಾ’ ಆಪ್ತ ‘ವಿಜಯ್ ನಾಯರ್’ ಅರೆಸ್ಟ್ |Delhi Liquor Policy Case

Share.
Exit mobile version