ಚಾಮರಾಜನಗರ: ಮತದಾನ ಬಹಿಷ್ಕಾರ ಹಾಕಿದ್ದ ಮತದಾರರನ್ನು ಮನ ವೊಲಿಸಲು ಯತ್ನಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್, ತಹಸೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಮಾತಿಗೆ ಕೆರಳಿದ ಗುಂಪೊಂದು ಮಾತಿನ ಚಕಮಕಿಯಿಂದಾಗಿ ಮತಗಟ್ಟೆ ದ್ವಂಸ ಮಾಡಿ ಸಿಬ್ಬಂದಿಗಳ ಕೂಡಿ ಹಾಕಿ ಬೆಂಕಿ ಹಚ್ಚಿರೊ ಘಟನೆ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ನಡೆದಿತ್ತು. ಈ ಗಲಾಟೆಯಲ್ಲಿ ತಹಶೀಲ್ದಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆ ಹಿನ್ನಲೆಯಲ್ಲಿ ಮತ ಬಹಿಷ್ಕಾರಕ್ಕೆ ಮುಂದಾಗಿದ್ದರು. ಇದನ್ನು ಅರಿತ ತಹಸೀಲ್ದಾರ್ ಗುರುಪ್ರಸಾದ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ರವರು ಮತದಾರರನ್ನು ಮನವೊಲಿಸಲು ಮುಂದಾದರು. ಮತ ಚಲಾವಣೆಗೆ ಬಂದ ಮತದಾರರನ್ನು ಕಂಡು ಕೆರಳಿದ ಮತ್ತೊಂದು ಗುಂಪಿನವರು ಮಾತಿನ ಚಕಮಕಿ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮತಗಟ್ಟೆ ಗೆ ನುಗ್ಗಿದ ಪ್ರತಿಭಟನಾಕಾರರು ವಿದ್ಯುನ್ಮಾನ ಯಂತ್ರ ನಾಶ ಪಡಿಸಿ ಮತಗಟ್ಟೆ ದ್ವಂಸ ಮಾಡಿದ್ದರು.
ಇಂಡಿಗನತ್ತ ವಲಯದಲ್ಲಿ ವಿದ್ಯುತ್ ಸೌಲಭ್ಯವಿಲ್ಲ..ಕಾಡುಪ್ರಾಣಿಗಳ ಕಾಟ..ಇತ್ತಿಚೆಗೆ ಕೊಟ್ಟ ಆರೋಗ್ಯ ವಾಹನವನ್ನ ವಾಪಸ್ ಪಡೆದಿದ್ದಾರೆ. ಹೀಗೆ ಇವರ ಜೀವನವೆ ದುಸ್ಥರವಾಗಿದ್ದು ಬದುಕೆ ಆತಂತ್ರವಾಗಿದೆ .ಇಂತಹ ಕನಿಷ್ಟ ಸೌಲಭ್ಯಗಳನ್ನು ಒದಗಿಸದ ಆಡಳಿತ ವಿರುದ್ದ ಸಿಡಿದೆದ್ದು ಮತ ಬಹಿಷ್ಕಾರದ ಯೋಚನೆ ಯೋಜನೆ ರೂಪಿಸಿದ್ದರು. ಆದರೆ ಇಂದು ಅದಿಕಾರಿಗಳ ಓಲೈಕೆ ಕಸರತ್ತು ಈಸಲ ವಿಫಲವಾಗಿ ಈ ಘಟನೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಈ ನಡುವೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ನಡೆದಂತ ಗಲಾಟೆಯಲ್ಲಿ ಹನೂರು ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ಗಾಯವಾಗಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಕೆಲ ಪೊಲೀಸರು ಗಾಯಗೊಂಡಿದ್ದಾರೆ. ಅವರನ್ನು ಮಲೆಮಹದೇಶ್ವರ ಬೆಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ, ಚಾಮರಾಜನಗರ
‘SC, ST, OBC’ ಹಕ್ಕುಗಳನ್ನ ಕಸಿದುಕೊಳ್ಳಲು ಕಾಂಗ್ರೆಸ್ ಪಿತೂರಿ : ಪ್ರಧಾನಿ ಮೋದಿ