Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಪರಾಧಿಗಳಿಗೂ ಇದೆ ವಕೀಲರನ್ನು ಆಯ್ಕೆ ಮಾಡುವ ಹಕ್ಕು: ‘ಅಮಿಬಸ್ ಕ್ಯೂರಿ’ ನೇಮಕಕ್ಕೂ ಮುನ್ನ ಮಾಹಿತಿ ನೀಡಿ : ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

19/03/2026 10:54 AM

ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ : ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಜಾತ್ರೆಗೆ ಬಂದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ!

19/03/2026 10:45 AM

BIG NEWS : ಪತ್ನಿ ಸ್ವಇಚ್ಛೆಯಿಂದ ಮನೆ ಬಿಟ್ಟರೆ ‘ಹೆಬಿಯಸ್ ಕಾರ್ಪಸ್’ ಅರ್ಜಿ ಸಲ್ಲಿಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

19/03/2026 10:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿತ್ತಾಪುರದ ಪಥಸಂಚಲನಕ್ಕೆ ಅನುಮತಿ ನಿರಾಕರಣೆಗೆ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
KARNATAKA

ಚಿತ್ತಾಪುರದ ಪಥಸಂಚಲನಕ್ಕೆ ಅನುಮತಿ ನಿರಾಕರಣೆಗೆ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ

By kannadanewsnow0918/10/2025 6:23 PM

ಬೆಂಗಳೂರು: ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನಕ್ಕೆ ಮತ್ತು ಬಂಟಿಂಗ್, ಬ್ಯಾನರ್ ಹಾಕಲು ಹಾಗೂ ಅನುಮತಿಗೆ ಸಂಬಂಧಿಸಿ ಸುಮಾರು 6 ಸಾವಿರ ಹಣ ಕಟ್ಟಿಸಿಕೊಂಡ ಬಳಿಕ ಅನುಮತಿ ನಿರಾಕರಿಸಿದ್ದು ಮತ್ತು ಬ್ಯಾನರ್, ಬಂಟಿಂಗ್ ತೆರವು ಮಾಡಿದ್ದು ಸರಿಯಲ್ಲ; ಇದು ಸ್ಥಳೀಯ ಆಡಳಿತದ ದುಂಡಾವರ್ತಿ ಕ್ರಮ ಮತ್ತು ಪ್ರಿಯಾಂಕ್ ಖರ್ಗೆಯವರ ದುರ್ನಡತೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಶ್ನೆಗಳಿಗೆ ಉತ್ತರಿಸಿದರು. ಆರೆಸ್ಸೆಸ್ ಪಥ ಸಂಚಲನಕ್ಕೆ ಸಂಬಂಧಿಸಿ ಪಿಡಿಒ ಒಬ್ಬರ ಅಮಾನತಿನ ಕುರಿತು ಪ್ರಶ್ನಿಸಿದಾಗ, ಆರೆಸ್ಸೆಸ್ ಎಂಬುದು ಒಂದು ರಾಜಕೀಯ ಪಕ್ಷವಲ್ಲ; ಎಲ್ಲ ಸಾರ್ವಜನಿಕ ಸಂಘಟನೆಯಂತೆ ಆರೆಸ್ಸೆಸ್ ಒಂದು ಸಂಘಟನೆ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕೇಂದ್ರ ಸರಕಾರದ ಆದೇಶವೂ ಇದೆ ಎಂದು ನುಡಿದರು.

ಇಷ್ಟೆಲ್ಲ ಮಾತನಾಡುವ ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಅವರೇ, ಎಐಸಿಸಿಯಲ್ಲಿ ಅಲೆಮಾರಿ ಸಮುದಾಯಗಳ ಒಂದು ಘಟಕ ಇದೆ. ಈ ಘಟಕಕ್ಕೆ ಕರ್ನಾಟಕದಿಂದ ಡಾ.ಎ.ಎಸ್. ಪ್ರಭಾಕರ್ ಅವರನ್ನು ರಾಷ್ಟ್ರೀಯ ಸಂಚಾಲಕ ಎಂದು ನೇಮಿಸಿದ್ದಾರೆ. ಇವರು ಹಂಪಿ ವಿವಿಯ ಪ್ರೊಫೆಸರ್. ನೀವು ಎಐಸಿಸಿ ಪದಾಧಿಕಾರಿಯನ್ನಾಗಿ ಅವರನ್ನು ನೇಮಿಸಿದ್ದೀರಿ. ಇದು ಕಾನೂನುಬಾಹಿರವೇ? ಅಥವಾ ಸಾಮಾಜಿಕ ಸಂಘಟನೆಯಲ್ಲಿ ಭಾಗಿ ಆಗುವುದು ತಪ್ಪೇ ಎಂದು ಕೇಳಿದರು.

ಎಐಸಿಸಿ ಅಧ್ಯಕ್ಷರು ಇದಕ್ಕೆ ಉತ್ತರ ಕೊಡಲಿ 

ಕಾಂಗ್ರೆಸ್ಸಿನಲ್ಲಿ ಕೆಲಸ ಮಾಡಲು ಯಾರನ್ನಾದರೂ ನೇಮಿಸಬಹುದು; ಆದರೆ, ಸಂಘಟನೆಗಳಲ್ಲಿ ಕೆಲಸ ಮಾಡಬಾರದೆಂಬ ಯಾವ ನೀತಿ ಇದು ಎಂದು ಟೀಕಿಸಿದರು. ರಾಜ್ಯದಲ್ಲಿ ಆಗುವ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ತರುತ್ತಿದ್ದಾರೆ ಎಂದು ದೂರಿದರು. ಆರೆಸ್ಸೆಸ್ ವಿಚಾರ ಪ್ರಶ್ನೆ ಕೇಳಿದ ಕಾರಣಕ್ಕೆ ಈ ಉತ್ತರ ನೀಡುತ್ತಿರುವುದಾಗಿ ಹೇಳಿದರು. ಆರೆಸ್ಸೆಸ್ ದೇಶದ ಪರವಾಗಿ ಕೆಲಸ ಮಾಡುವ ಸಂಘಟನೆ. ದೇಶಭಕ್ತರ ಕೂಟ ಎಂದರು.

ಬಡವರ ಮೇಲೆ ಕರುಣೆ ಇದೆಯೇ..

ಪ್ರಿಯಾಂಕ್ ಖರ್ಗೆಯವರೇ, ಮೈಸೂರಿನಲ್ಲಿ ಗುಲ್ಬರ್ಗ ಮೂಲದ ಬಾಲಕಿ ಮೇಲೆ ಅತ್ಯಾಚಾರ ಆಗಿದೆ. ನೀವು ಗುಲ್ಬರ್ಗದ ಸಚಿವರಲ್ಲವೇ? ನೀವು ಅಲ್ಲಿ ಹೋಗಿ ಏನಾಗಿದೆ ಎಂದು ಪರಿಶೀಲನೆ ಮಾಡಿದ್ದೀರಾ? ನಿಮಗೆ ಆ ಅಲೆಮಾರಿಗಳು, ಬಡವರ ಮೇಲೆ ಕರುಣೆ ಇದೆಯೇ ಎಂದು ಕೇಳಿದರು.

ಬಿಜಾಪುರದಲ್ಲಿ 9-10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ಸಾಯಿಸಿದ್ದಾರೆ. ಅದರ ಬಗ್ಗೆ ನೀವು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮ ಊರಿನಲ್ಲಿ ವಾಡಿಯ ಶಾಲೆಯ ಮೇಲ್ಛಾವಣಿ ಬಿದ್ದು ಹೋಗಿದೆ. ರಜೆ ಇರುವ ಕಾರಣ ಮಕ್ಕಳು ಬಚಾವ್ ಆಗಿದ್ದಾರೆ. ಅದರ ಬಗ್ಗೆ ನೀವೇನಾದರೂ ತಲೆ ಕೆಡಿಸಿಕೊಂಡಿದ್ದೀರಾ? ನೀವು ಅಲ್ಲೇ ಲೈಬ್ರೆರಿಯನ್ ತಮಗೆ ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಕುರಿತು ನೀವು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮದೇ ಇಲಾಖೆ ನೀರಘಂಟಿ 23 ತಿಂಗಳುಗಳಿಂದ ವೇತನ ಸಿಕ್ಕಿಲ್ಲ ಎಂದಿದ್ದಾರೆ. ಇಂಥವನ್ನು ಮರೆಮಾಚಲು, ನಿಮ್ಮನ್ನು ಎಲ್ಲರೂ ಅಯೋಗ್ಯರು ಎನ್ನುವುದನ್ನು ತಪ್ಪಿಸಿಕೊಳ್ಳಲು ನೀವು ಆರೆಸ್ಸೆಸ್, ಆರೆಸ್ಸೆಸ್ ಎನ್ನುತ್ತೀರಿ ಎಂದು ವಾಗ್ದಾಳಿ ನಡೆಸಿದರು.

ನೀವು ಅಧಿಕಾರ ನಡೆಸಲು ಯೋಗ್ಯರಲ್ಲ..

ನಿಮಗ್ಯಾಕೆ ಸಚಿವ ಸ್ಥಾನ ಎಂದು ಕೇಳಿದರು. ನೀವು ಸಚಿವ ಸ್ಥಾನ ನಿಭಾಯಿಸುವಲ್ಲಿ ವಿಫಲವಾಗಿದ್ದೀರಿ. ಜನರನ್ನು ದಾರಿ ತಪ್ಪಿಸಿ ಅವರ ಜೀವನದಲ್ಲಿ ಆಟ ಆಡುವ ಕೆಲಸ ಮಾಡುತ್ತಿದ್ದೀರಿ ಎಂದು ದೂರಿದರು. ಅತಿವೃಷ್ಟಿ, ಅನಾವೃಷ್ಟಿಗೆ ಹಣ ಕೊಟ್ಟಿಲ್ಲ; ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ; ಶೇ 80 ಕಮಿಷನ್ ಎಂದು ಅವರು ಹೇಳುತ್ತಿದ್ದಾರೆ. ಇವುಗಳನ್ನು ಪರಿಹರಿಸದೆ ನೀವು ಕ್ಷುಲ್ಲಕ ಕಾರಣ ಇಟ್ಟುಕೊಂಡು ಇದನ್ನೆಲ್ಲ ಮಾಡುತ್ತ ಇದ್ದೀರಲ್ಲವೇ? ನೀವು ಅಧಿಕಾರ ನಡೆಸಲು ಯೋಗ್ಯರಲ್ಲ ಎಂದು ಆಕ್ಷೇಪಿಸಿದರು.

ಪ್ರಿಯಾಂಕ್ ಖರ್ಗೆ ಹೊಣೆಗೇಡಿ; ದುರಹಂಕಾರದ ಕಣಜ ಎಂದು ದೂರಿದರು. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡು ಕೆರಕೊಂಡ ಪರಿಸ್ಥಿತಿ ಇವರದು ಎಂದು ಟೀಕಿಸಿದರು.

ನೀವು ದಲಿತ ಸಮುದಾಯದಿಂದ ಬಂದವರು. ದಲಿತರಿಗೆ ಈ ಸಮಾಜದಲ್ಲಿ ಯಾವ ಪರಿಸ್ಥಿತಿ ಇದೆ ಎಂದು ನಿಮಗೂ ಗೊತ್ತಿದೆ. ಯಾವತ್ತಾದರೂ ಒಂದು ದಿನ ಇಷ್ಟೊಂದು ದಲಿತ ಸಂಘಟನೆಗಳಲ್ಲಿ ಪ್ರಿಯಾಂಕ್ ಖರ್ಗೆ ಕೆಲಸ ಮಾಡಿದ್ದಾರಾ ಎಂದು ಕೇಳಿದರು.

ರಾಜ್ಯದ ‘ಅಗ್ನಿಶಾಮಕ ಇಲಾಖೆ’ಯ ಸಿಬ್ಬಂದಿಗಳಿಗೆ ಅಪಘಾತ ವಿಮಾ ಪರಿಹಾರದ ಮೊತ್ತ ’50 ಲಕ್ಷ’ಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ

ರಿಲಯನ್ಸ್ ಇಂಡಸ್ಟ್ರೀಸ್ ಎರಡನೇ ತ್ರೈಮಾಸಿಕ ಲಾಭ 22,146 ಕೋಟಿ ರೂಪಾಯಿ

Share. Facebook Twitter LinkedIn WhatsApp Email

Related Posts

ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ : ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಜಾತ್ರೆಗೆ ಬಂದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ!

19/03/2026 10:45 AM1 Min Read

BIG NEWS : ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ, ಹಾಡು ಹಾಡಿದಕ್ಕೆ ಯುವತಿಯರ ವಿರುದ್ಧ NCR ದಾಖಲು!

19/03/2026 10:26 AM1 Min Read

BREAKING : ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 15.50 ಲಕ್ಷ ಹಣ ಜಪ್ತಿ ಮಾಡಿದ ಚುನಾವಣಾ ಅಧಿಕಾರಿಗಳು

19/03/2026 10:15 AM1 Min Read
Recent News

ಅಪರಾಧಿಗಳಿಗೂ ಇದೆ ವಕೀಲರನ್ನು ಆಯ್ಕೆ ಮಾಡುವ ಹಕ್ಕು: ‘ಅಮಿಬಸ್ ಕ್ಯೂರಿ’ ನೇಮಕಕ್ಕೂ ಮುನ್ನ ಮಾಹಿತಿ ನೀಡಿ : ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

19/03/2026 10:54 AM

ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ : ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಜಾತ್ರೆಗೆ ಬಂದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ!

19/03/2026 10:45 AM

BIG NEWS : ಪತ್ನಿ ಸ್ವಇಚ್ಛೆಯಿಂದ ಮನೆ ಬಿಟ್ಟರೆ ‘ಹೆಬಿಯಸ್ ಕಾರ್ಪಸ್’ ಅರ್ಜಿ ಸಲ್ಲಿಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

19/03/2026 10:29 AM

ರಷ್ಯಾ ನೀಡಿದ ರಹಸ್ಯ ಸುಳಿವು: ಅಮೆರಿಕ ಪ್ರಜೆ ವ್ಯಾನ್‌ಡೈಕ್ ಹಾಗೂ 6 ಉಕ್ರೇನಿಯನ್ನರನ್ನು ಬಂಧಿಸಿದ NIA!

19/03/2026 10:26 AM
State News
KARNATAKA

ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ : ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಜಾತ್ರೆಗೆ ಬಂದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ!

By kannadanewsnow0519/03/2026 10:45 AM KARNATAKA 1 Min Read

ದಕ್ಷಿಣಕನ್ನಡ : ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ.ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಇದ್ದ ಮುಸ್ಲಿಂ ವಿದ್ಯಾರ್ಥಿಗೆ…

BIG NEWS : ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ, ಹಾಡು ಹಾಡಿದಕ್ಕೆ ಯುವತಿಯರ ವಿರುದ್ಧ NCR ದಾಖಲು!

19/03/2026 10:26 AM

BREAKING : ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 15.50 ಲಕ್ಷ ಹಣ ಜಪ್ತಿ ಮಾಡಿದ ಚುನಾವಣಾ ಅಧಿಕಾರಿಗಳು

19/03/2026 10:15 AM

BREAKING : ಬಾಗಲಕೋಟೆಗೆ ಚರಂತಿಮಠ, ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ ಟಿ ದಾಸಕರಿಯಪ್ಪ ಹೆಸರು ಘೋಷಿಸಿದ ಬಿಜೆಪಿ!

19/03/2026 10:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.