ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು ಮತ್ತೊಂದು ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅದೇನು ಅಂತ ಮುಂದೆ ಓದಿ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಅವರು ದಿನಾಂಕ: 15-04-2025 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು, ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳ ಜೊತೆ ವೇತನ ಪ್ಯಾಕೇಜ್ ಖಾತೆಗೆ ಸಂಬಂಧಿಸಿದಂತೆ ಈ ಕೆಳಕಂಡ ವಿಷಯಗಳ ಕುರಿತು ಸಭೆ ನಡೆಸಲಾಯಿತು.
• ಕಡಿಮೆ ಬಡ್ಡಿ ದರದಲ್ಲಿ ಗೃಹ ನಿರ್ಮಾಣ ಸಾಲ
• ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ • ಕಡಿಮೆ ಬಡ್ಡಿ ದರದಲ್ಲಿ ವಾಹನ ಸಾಲ • ಕಡಿಮೆ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ
• ಓವರ್ ಡ್ರಾಫ್ಟ್ ಸೌಲಭ್ಯ ಆರೋಗ್ಯ ವಿಮೆ
ಗೃಹ ಸಾಲ ವರ್ಗಾವಣೆ ಬಗ್ಗೆ
ಸ್ವೀಪ್ ಇನ್-ಸ್ವೀಪ್ ಓಟ್ ಅಕೌಂಟ್
> ಮೇಲ್ಕಂಡ ಸಾಲ ಸೌಲಭ್ಯಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲು ಮತ್ತು 1.00 ಕೋಟಿ ಅಪಘಾತ ವಿಮಾ ಯೋಜನೆ ಹಾಗೂ ವೈದ್ಯಕೀಯ ವಿಮೆ, ವಾರ್ಷಿಕ ಆರೋಗ್ಯ ತಪಾಸಣೆ ಹಾಗೂ ಇನ್ನಿತರೆ ಉಚಿತ ಸೇವಾ ಸೌಲಭ್ಯಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಹಾಗೂ ಉಚಿತವಾಗಿ ಸೇವಾ ಸೌಲಭ್ಯ ನೀಡುವ ಸಂಬಂಧ ಮಾಹಿತಿ ನೀಡಲು ಕೆಲವು ಬ್ಯಾಂಕುಗಳು ಒಂದು ವಾರಗಳ ಸಮಯಾವಕಾಶವನ್ನು ಕೋರಿರುತ್ತಾರೆ.
> ವೇತನ ಪ್ಯಾಕೇಜ್ ಖಾತೆಗೆ ಯಾವ ಬ್ಯಾಂಕ್‌ಗಳು ಉತ್ತಮ ಸೌಲಭ್ಯಗಳನ್ನು ನೀಡುತ್ತವೆ ಎಂಬ ಬಗ್ಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಮತ್ತೊಮ್ಮೆ ಸಂಬಂಧಿಸಿದ ಬ್ಯಾಂಕ್‌ಗಳ ಜೊತೆ ಸಮಾಲೋಚಿಸಲಾಗುವುದು.
> ತದನಂತರ ಯಾವ ಬ್ಯಾಂಕ್‌ಗಳು ಉತ್ತಮ ಸೌಲಭ್ಯ ನೀಡುತ್ತವೆ ಎಂಬುದರ ಬಗ್ಗೆ ತಮಗೆ ತಿಳಿಸಲಾಗುವುದು.ಆನಂತರ ತಾವು ಉತ್ತಮ ಸೌಲಭ್ಯ ನೀಡುವ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ.
> ವೇತನ ಪ್ಯಾಕೇಜ್ ಖಾತೆ ಬದಲಾವಣೆ ಮಾಡಿಕೊಳ್ಳಲು ಸರ್ಕಾರದ ಸುತ್ತೋಲೆಯಂತೆ ಜೂನ್-2025ರವರೆಗೆ ಕಾಲಾವಕಾಶವಿರುತ್ತದೆ.
> ಮೇ-2025ರ ಮಾಹೆಯೊಳಗಾಗಿ ಎಲ್ಲಾ ಕಚೇರಿಗಳ ಡಿ.ಡಿ.ಓ. ಗಳು, ಸರ್ಕಾರಿ ನೌಕರರು ತಮ್ಮ ವೇತನ ಜಮೆಗೊಳಿಸುತ್ತಿರುವ ಖಾತೆಯನ್ನು ವೇತನ ಪ್ಯಾಕೇಜ್ ಖಾತೆಗೆ ಬದಲಾವಣೆ ಮಾಡಿಕೊಳ್ಳುವುದು.
> PMJJY & PMSBY ವಿಮಾ ಪಾಲಿಸಿಗಳನ್ನು ಕಡ್ಡಾಯವಾಗಿ ಮಾಡಿಸುವುದು. > ಯಾವುದೇ ಇಲಾಖೆಗಳಲ್ಲಿ ವೇತನ ಸ್ಥಗಿತಗೊಳಿಸಲು ಅವಕಾಶವಿರುವುದಿಲ್ಲ ಎಂದಿದ್ದಾರೆ.
ಬೆಂಗಳೂರು-ಮುರುಡೇಶ್ವರ, ಬೆಂಗಳೂರು-ಕಣ್ಣೂರು ಎಕ್ಸ್ ಪ್ರೆಸ್’ಗೆ ಆಧುನಿಕ ಎಲ್‌ಎಚ್‌ಬಿ ಬೋಗಿ ಜೋಡಣೆ
BREAKING: ರಾಜ್ಯಾಧ್ಯಂತ ಹಮ್ಮಿಕೊಂಡಿದ್ದ ಲಾರಿ ಮುಷ್ಕರ ವಾಪಾಸ್: ಅಧ್ಯಕ್ಷ ಷಣ್ಮುಗಪ್ಪ ಘೋಷಣೆ