ಬೆಂಗಳೂರು : ಸಿಇಟಿ -2024ರ ಸಿಬಿಎಸ್ಇ, ಸಿ.ಐ.ಎಸ್.ಸಿ.ಇ., ಐಜಿಸಿಎಸ್ಇ ಅಂಕಗಳನ್ನು ಮೇ 28ರ ಸಂಜೆ 5:30 ರೊಳಗೆ ದಾಖಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
12ನೇ ತರಗತಿಯನ್ನು ಸಿಬಿಎಸ್ ಇ, (ಜಮ್ಮು ಮತ್ತು ಕಾಶ್ಮೀರ ಸೇರಿ) ಸಿಐಎಸ್ಸಿಇ, 10+2, ಐಜಿಸಿಎಸ್ಇ ಮತ್ತಿತರ ಬೋರ್ಡುಗಳಲ್ಲಿ 2024 ರಲ್ಲಿ ಪೂರೈಸಿದವರು ಮತ್ತು ಕರ್ನಾಟಕ ದ್ವಿತೀಯ ಪಿಯುಸಿ / 12ನೇ ತರಗತಿಯನ್ನು 2024 ಕ್ಕಿಂತ ಮೊದಲೇ ಉತ್ತೀರ್ಣರಾಗಿರುವ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳ ವಿವರಗಳನ್ನು ದಿನಾಂಕ 28-05-2024 (ಇಲ್ಲಿಯವರೆಗೆ ದಾಖಲಿಸದೇ ಇರುವವರು) ಸಂ.5.30 ರ ವರೆಗೆ ದಾಖಲಿಸುವುದು.
ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024 ರ ನಾಟಾ ಪರೀಕ್ಷೆಯ ಅಂಕಗಳನ್ನು ಅರ್ಹತೆಯ ಅನುಗುಣವಾಗಿ ಈ ಮೇಲೆ ತಿಳಿಸಿರುವ ದಿನಾಂಕದೊಳಗೆ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಗೆ ಭೇಟಿ ನೀಡಲು ಕೋರಿದೆ.