ನವದೆಹಲಿ: ಚಲನಚಿತ್ರಗಳು, ವೆಬ್ ಸರಣಿಗಳು, ಹಾಡುಗಳು ಮತ್ತು ಪಾಡ್ಕಾಸ್ಟ್ಗಳು ಸೇರಿದಂತೆ ಪಾಕಿಸ್ತಾನ ಮೂಲದ ವಿಷಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಭಾರತದ ಎಲ್ಲಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಸೂಚಿಸಲಾಗಿದೆ.
ಈಗಾಗಲೇ ಪಾಕಿಸ್ತಾನ ತನ್ನ ದೇಶದಲ್ಲಿ ಭಾರತದ ಹಾಡುಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಈ ಬೆಳವಣಿಗೆಯ ಕೆಲ ದಿನಗಳ ನಂತ್ರ ಭಾರತವು, ಚಲನಚಿತ್ರಗಳು, ವೆಬ್ ಸರಣಿಗಳು, ಹಾಡುಗಳು ಮತ್ತು ಪಾಡ್ಕಾಸ್ಟ್ಗಳು ಸೇರಿದಂತೆ ಪಾಕಿಸ್ತಾನ ಮೂಲದ ವಿಷಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಭಾರತದ ಎಲ್ಲಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಸೂಚಿಸಿದೆ.
ಈ ಮೂಲಕರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಒಟಿಟಿ ಪ್ಲಾಟ್ಫಾರ್ಮ್ಗಳು, ಮಾಧ್ಯಮ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು ಮತ್ತು ಮಧ್ಯವರ್ತಿಗಳಿಗೆ ವೆಬ್-ಸರಣಿಗಳು, ಚಲನಚಿತ್ರಗಳು, ಹಾಡುಗಳು, ಪಾಡ್ಕಾಸ್ಟ್ಗಳು ಮತ್ತು ಇತರ ಸ್ಟ್ರೀಮಿಂಗ್ ಮಾಧ್ಯಮ ವಿಷಯವನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ.
In the interest of national security, all OTT platforms, media streaming platforms and intermediaries operating in India are advised to discontinue the web-series, films, songs, podcasts and other streaming media content, whether made available on a subscription based model or… pic.twitter.com/8yjP6ULNEU
— ANI (@ANI) May 8, 2025
ಆಕಾಶ್ ಕ್ಷಿಪಣಿ ಬಳಸಿ ಲಾಹೋರ್ ವಾಯು ರಕ್ಷಣಾ ವ್ಯವಸ್ಥೆಯ ಮೇಲೆ ಭಾರತ ದಾಳಿ: ಮೂಲಗಳು