ನವದೆಹಲಿ: ಇತ್ತೀಚೆಗೆ ತಿದ್ದುಪಡಿ ಮಾಡಲಾದ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ತನ್ನ ವ್ಯವಹಾರಕ್ಕೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮಗಳಲ್ಲಿನ ವಿಷಯವನ್ನು ಮೇಲ್ವಿಚಾರಣೆ ಮಾಡಲು ಸತ್ಯಶೋಧನಾ ಘಟಕವನ್ನು (fact-checking unit -FCU) ಸ್ಥಾಪಿಸಲು ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರದಿಂದ ಐಟಿ ನಿಯಮಗಳ ಅಡಿಯಲ್ಲಿ ಪಿಐಪಿ ಫ್ಯಾಕ್ಟ್ ಚೆಕ್ ಘಟಕವನ್ನು ಸ್ಥಾಪಿಸಿ, ಅಧಿಕೃತವಾಗಿ ಇಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ದೇಶದಲ್ಲಿ ಫ್ಯಾಕ್ ಚೆಕ್ ಘಟಕ ಸ್ಥಾಪನೆಯಾದಂತೆ ಆಗಿದೆ.
Centre notifies Fact Check Unit under PIB of Ministry of Information and Broadcasting as the fact check unit of the Central government pic.twitter.com/w2eqNd0k7R
— ANI (@ANI) March 20, 2024
ಅಂದಹಾಗೇ ಐಟಿ ನಿಯಮದ ಅಡಿಯಲ್ಲಿ ಪಿಐಬಿ ಫ್ಯಾಕ್ಟ್ ಚೆಕ್ ಘಟಕ ಕೆಲಸ ಮಾಡಲಿದೆ. ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುವಂತ ಸುದ್ದಿ, ವೀಡಿಯೋಗಳ ಸತ್ಯಾಸತ್ಯತೆಯನ್ನು ಚೆಕ್ ಮಾಡಿ ನೈಜತೆಯನ್ನು ಜನರ ಮುಂದೆ ತೆರೆದಿಡುವಂತ ಕೆಲಸವನ್ನು ಇದು ಮಾಡಲಿದೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪಿಐಬಿ ಅಡಿಯಲ್ಲಿ ಫ್ಯಾಕ್ಟ್ ಚೆಕ್ ಘಟಕವನ್ನು ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ಘಟಕವಾಗಿ ಕೇಂದ್ರವು ಅಧಿಸೂಚನೆ ಹೊರಡಿಸಿದೆ
ಚುನಾವಣಾ ಆಯೋಗಕ್ಕೆ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಸುರೇಶ್ ಕುಮಾರ್ ವಿರುದ್ಧ ದೂರು
ಸಾರ್ವಜನಿಕರೇ ಎಚ್ಚರ.! ‘ನೀತಿ ಸಂಹಿತೆ’ ವೇಳೆ ಈ ಎಲ್ಲವೂ ನಿಷೇಧ, ಉಲ್ಲಂಘಿಸಿದ್ರೆ ‘ಕೇಸ್ ಫಿಕ್ಸ್’