ಬೆಂಗಳೂರು: ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ಹೋಗಲು ವೀಸಾ ನೀಡಿದ್ದು ಯಾರು? ವೀಸಾ ನೀಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಕೇಂದ್ರ ಸರ್ಕಾರವೇ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಕ್ಕೆ ಹಾರಿ ಹೋಗಲು ವೀಸಾ ನೀಡಿದೆ ಎಂಬುದಾಗಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಲೈಂಗಿಕ ಹಗರಣ ಕರ್ನಾಟಕದ ಹಾಸನದಲ್ಲಿ ನಡೆದಿರುವುದು ಇಡೀ ಮನುಕುಲವೇ ತಲೆ ತಗ್ಗಿಸುವ ಘಟನೆ. ಹೊಳೆನರಸಿಪುರದ ಬಿಜೆಪಿ ಅಭ್ಯರ್ಥಿಯಾಗಿದ್ದ ದೇವರಾಜೇಗೌಡ ಅವರು ಸುಮಾರು ನಾಲ್ಕು ತಿಂಗಳ ಹಿಂದೆ ಮಾಧ್ಯಮ ಗೋಷ್ಠಿ ನಡೆಸಿ ಪ್ರಜ್ವಲ್ ರೇವಣ್ಣ ಅವರ ಸಿಡಿಗಳು ಇವೆ ಎಂದು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುವುದು ಎಂದು ಹೇಳಿದ್ದರು ಎಂದರು.
ಐಪಿಸಿ ಸೆಕ್ಷನ್ 202 ಪ್ರಕಾರ ಕಾನೂನು ವಿರುದ್ದ ನಡೆದುಕೊಂಡಿದ್ದರೆ ಹಾಗೂ ಅದನ್ನು ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ನೀಡದೆ ಇದ್ದರೆ ಅಪರಾಧವಾಗುತ್ತದೆ. ಕಾರು ಚಾಲಕ ಕಾರ್ತಿಕ್ ನಾನೇ ದೇವರಾಜೇಗೌಡ ಅವರಿಗೆ ವಿಡಿಯೋಗಳನ್ನು ನೀಡಿದೆ ಎಂದು ಸ್ವತಃ ಒಪ್ಪಿಕೊಂಡಿದ್ದಾನೆ. ದೇವರಾಜೇಗೌಡ ಅವರಿಗೆ ಮಾಹಿತಿ ಇದ್ದರೂ ಸಹ ಈ ಕೃತ್ಯದ ಬಗ್ಗೆ ಸ್ಥಳೀಯ ಪೊಲೀಸ್ ಸ್ಟೇಷನ್ ಗೆ ಏಕೆ ತಿಳಿಸಿಲ್ಲ. ಇದು ಕಾನೂನಿನ ಉಲ್ಲಂಘನೆ. ಈ ವಿಚಾರದ ಬಗ್ಗೆ ಬಿಜೆಪಿ- ಜೆಡಿಎಸ್ ನಾಯಕರಿಗೆ ಮಾಹಿತಿ ಇದ್ದರೂ ತಿಳಿಸದೇ ಇರುವುದು ಕೂಡ ಕಾನೂನು ಉಲ್ಲಂಘನೆ ಎಂದಿದ್ದಾರೆ.
ಮಹಿಳಾ ದೌರ್ಜನ್ಯ ಕುರಿತು ಎರಡು ವರದಿಗಳಿವೆ ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಮಾಡಿದ ಜಸ್ಟೀಸ್ ವರ್ಮಾ ಸಮಿತಿ ಹಾಗೂ ನಾನು ಅಧ್ಯಕ್ಷನಾಗಿದ್ದಾಗ ನೀಡಿದ ವರದಿಗಳು ಈ ದೇಶದಲ್ಲಿ ಇವೆ. ನಿರ್ಭಯಾ ಪ್ರಕರಣದಲ್ಲಿ ಬಿಜೆಪಿಯವರು ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಅಪವಾದ ಮಾಡಿದರು. ಈ ರೀತಿಯ ಶೋಷಣೆಗೆ ಒಳಗಾದ ಮಹಿಳೆಯರಿಗೆ ಪರಿಹಾರ ನೀಡಬೇಕು ಹಾಗೂ ಈ ರೀತಿಯ ಘಟನೆಗಳನ್ನು ತಡೆಯಲು ಇಡಿ ದೇಶದಾದ್ಯಂತ ಜಾಗೃತಿ ಕಾರ್ಯಕ್ರಮಗಳ ನಡೆಸಬೇಕು ಎಂದು ವರ್ಮಾ ಸಮಿತಿ ಶಿಫಾರಸ್ಸು ಮಾಡಿತ್ತು ಎಂದರು.
ಬಿಜೆಪಿ ಮತ್ತು ಜೆಡಿಎಸ್ ಅವರು ಈ ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತವಾದ ಸಂಚು ನಡೆಯುತ್ತಿದೆ. ನಡೆಸಿದೆ. ತೂಗುವ ಕತ್ತಿಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವಂತೆ. ಈ ಪ್ರಕರಣದ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಕೆಸರು ಎರಚುವಂತಹ ಕೆಲಸ ಮಾಡಲಾಗುತ್ತಿದ ಬಿಜೆಪಿಯವರು ವರ್ಮಾ ಆಯೋಗದ ಶಿಫಾರಸ್ಸುಗಳನ್ನು ಓದಿ ಆನಂತರ ಕಾಂಗ್ರೆಸ್ ವಿಚಾರ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುವ ಬಿಜೆಪಿಯವರೇ ದೇಶದ ಆಡಳಿತ ನಿಮ್ಮ ಕೈಯಲ್ಲಿ ಇರುವಾಗ ನೀವು ತೆಗೆದುಕೊಂಡಿರುವ ಕ್ರಮವೇನು? ಎಂದು ಪ್ರಶ್ನಿಸಿದ್ದಾರೆ.
ದೇವರಾಜೇಗೌಡ ಹಲವಾರು ಬಾರಿ ವಿಡಿಯೋ ಇದೆ ಎಂದಾಗಲೂ ಬಿಜೆಪಿ- ಜೆಡಿಎಸ್ ಅವರು ಏನು ಮಾಡಿದರು. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಪಟ್ಟ ಬಿಜೆಪಿ ವಿರುದ್ದವೂ ಎಸ್ ಐಟಿ ತನಿಖೆಯಾಗಬೇಕು. ಸಂತ್ರಸ್ತ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ವಿಕೃತಿ ಮೆರೆದಿರುವ ತಪ್ಪಿತಸ್ಥನಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಯಾದಗಿರಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ನಾಲ್ಕು ಗುಡಿಸಲು ಸುಟ್ಟು ಭಸ್ಮ
BREAKING: ಕರ್ನಾಟದ 6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3ರಂದು ಮತದಾನ, ಜೂ.6ಕ್ಕೆ ಫಲಿತಾಂಶ ಪ್ರಕಟ