ಮಂಗಳೂರು : ಕರ್ನಾಟಕದ ಸಿಆರ್ ಝೆಡ್ ಮಾಸ್ಟರ್ ಪ್ಲಾನ್ನ್ನು ಕೇಂದ್ರ ಸರ್ಕಾರ ( Union Government ) ಅನುಮೋದನೆ ನೀಡಿ ಆದೇಶ ಮಾಡಿದೆ. ಕರ್ನಾಟಕದ 30 ವರ್ಷದ ಹೋರಾಟಕ್ಕೆ ಜಯ ದೊರೆತಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.

ಇಂದು ಮಂಗಳೂರಿನ ಗೋಲ್ಡ್ಫಿಂಚ್ ಸಿಟಿ ಇಲ್ಲಿ ಆಯೋಜಿಸಿರುವ ರೂ. 3,800 ಕೋಟಿ ಮೊತ್ತದ ವಿವಿಧ ಯೋಜನೆಗಳ ಶಿಲಾನ್ಯಾಸ , ಭೂಮಿ ಪೂಜೆ ಕಾರ್ಯಕ್ರಮ ದಲ್ಲಿ ಗೌರವಾನಿತ್ವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಕರಾವಳಿ ಭಾಗದ ಆರ್ಥಿಕತೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ಈ ಯೋಜನೆ ಪೂರಕವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.

ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂದನೆ – ಪ್ರಧಾನಿ ನರೇಂದ್ರ ಮೋದಿ

ಕರ್ನಾಟಕ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದು, ಇಂದು ಸಾಗರ್ ಮಾಲಾ ಯೋಜನೆಯಲ್ಲಿ 18 ಯೋಜನೆಗಳನ್ನು ಪೂರ್ಣಗೊಳಿಸಿ, 14 ಯೋಜನೆಗಳನ್ನು ಇದೇ ವರ್ಷ 950 ಕೋಟಿ ರೂ.ಗಳ ಯೋಜನೆಗೆ ಜಲಸಾರಿಗೆ ಮತ್ತು ಬಂದರು ಇಲಾಖೆ ಅನುಮೋದನೆ ನೀಡಿ, ಮೋದಿಯವರ ನೇತೃತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಕರಾವಳಿ ಪ್ರದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಯವರ ಆಶೀರ್ವಾದವೇ ಕಾರಣ ಎಂದರು.

ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ಅನುಮೋದನೆ ನೀಡಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾರವಾರದ ಮಾಜಾಳಿ ಬಂದರು ಅಭಿವೃದ್ಧಿಯ 350 ಕೋಟಿ ರೂ. ಗಳ ಯೋಜನೆಗೆ ಅನುಮೋದನೆ ದೊರೆತಿದೆ. ಇದು ಡಬಲ್ ಇಂಜಿನ್ ಸರ್ಕಾರದ ಸಾಧನೆ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮೀನುಗಾರರಿಗೆ ಅನುಕೂಲವಾಗಲು ಆಳಸಮುದ್ರ ಮೀನುಗಾರಿಕೆಗಾಗಿ 100 ಹೈಸ್ಪೀಡ್ ದೋಣಿಗಳನ್ನು ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಎಲ್ಲ ಯೋಜನೆಗಳಿಂದ ಕರಾವಳಿ ಭಾಗದ ಸಮಗ್ರ ಅಭಿವೃಧ್ಧಿ ಆಗುತ್ತದೆ ಎಂದರು.

BREAKING NEWS : ಗಾಯದ ಸಮಸ್ಯೆ ; ಏಷ್ಯಾಕಪ್‌ನಿಂದ ‘ಜಡೇಜಾ’ ಔಟ್, ‘ಅಕ್ಷರ್ ಪಟೇಲ್’ಗೆ ಸ್ಥಾನ |Asia Cup

ನವಕರ್ನಾಟಕದಿಂದ ನವಭಾರತದ ಅಭಿವೃದ್ಧಿ ಸಾಧ್ಯವಾಗಲಿದೆ

ಸರ್ಕಾರದಿಂದ 2 ಬಂದರುಗಳ ಅಭಿವೃದ್ಧಿ ಜೊತೆಗೆ ನವ ಮಂಗಳೂರು ಬಂದರು, ಕಾರವಾರ ಬಂದರುಗಳ ವಿಸ್ತರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಧಾನಿಯವರ ಆತ್ಮನಿರ್ಭರ ಭಾರತಕ್ಕೆ ಶಕ್ತಿ ತುಂಬಲು ಈ ಬಂದರುಗಳು ಸಹಕರಿಸಲಿದೆ ಎಂದು ನುಡಿದರು.

ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. 2 ಲಕ್ಷ ಮೀನುಗಾರರ ಮಕ್ಕಳಿಗೆ ಅನುಕೂಲವಾಗಲಿದೆ. 5 ಸಾವಿರ ಮನೆಗಳನ್ನು 64 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿದೆ. ಕಾರವಾರದಲ್ಲಿ ಜಲಸಾರಿಗೆ ಮತ್ತು ಮೀನುಗಾರಿಕಾ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕವನ್ನಷ್ಟೇ ಅಲ್ಲ, ಭಾರತವನ್ನೂ ಮುನ್ನಡೆಸುತ್ತಿದೆ. ನವಕರ್ನಾಟಕದಿಂದ ನವಭಾರತದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: KSRTCಯಿಂದ ‘ಬಸ್ ಪಾಸ್’ ಅವಧಿ, ‘ಹೊಸ ಪಾಸ್ ಅರ್ಜಿಗೆ ಸಲ್ಲಿಕೆ’ ದಿನಾಂಕ ವಿಸ್ತರಣೆ

ಕರಾವಳಿ ಅಭಿವೃದ್ಧಿಯ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ದಿ

ಇಂದು ಕರಾವಳಿ ಅಭಿವೃದ್ಧಿಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ಇದು ಸಾಧ್ಯವಾಗಿದೆ. ವಿದೇಶ ವಿನಿಮಯ ಹೆಚ್ಚಾಗಬೇಕಾದರೆ ಆಮದು, ರಫ್ತು ಹೆಚ್ಚಾಗಲು ನಮ್ಮ ಬಂದರುಗಳ ನಿರ್ವಹಣಾ ಸಾಮಥ್ರ್ಯ ಹೆಚ್ಚಾಗಬೇಕು. ಇಷ್ಟು ವರ್ಷದ ಯೋಜನೆ ಇಂದು ಪ್ರತಿಫಲ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ 3800 ಕೋಟಿ ರೂ.ಗಳ ವೆಚ್ಚದಲ್ಲಿ ನವ ಮಂಗಳೂರು ಬಂದರಿನ ದೊಡ್ಡ ಅನುಕೂಲ ಕಲ್ಪಿಸಲಿದ್ದು, 8 ವರ್ಷದ ಯೋಜನೆ ಇಂದು ಫಲಪ್ರದವಾಗಿದೆ. ನವ ಮಂಗಳೂರು ಬಂದರು ಅಭಿವೃದ್ಧಿ ಆಗುತ್ತಿದೆ. ಇದರ ಸರಕು ನಿರ್ವಹಣೆ 4 ಪಟ್ಟು ಹೆಚ್ಚಾಗಿದೆ. ಎಲ್.ಪಿ.ಜಿ ಟರ್ಮಿನಲ್ ಸ್ಥಾಪನೆಯಾಗುತ್ತಿದೆ. ತೈಲ ಸಂಸ್ಕರಣಾಗಾರವೂ ನಿರ್ಮಾಣವಾಗುತ್ತಿದ್ದು, ಬರುವ ದಿನಗಳಲ್ಲಿ ಈ ಕರಾವಳಿ ಪ್ರದೇಶದ ಅಭಿವೃದ್ಧಿಯ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗುತ್ತದೆ ಎಂದರು.

Share.
Exit mobile version