ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ದೇಶಾದ್ಯಂತ ಅಡುಗೆ ಇಂಧನವಾಗಿ ವ್ಯಾಪಕವಾಗಿ ಬಳಸಲಾಗುವ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಉತ್ಪಾದನೆಯನ್ನು ಹೆಚ್ಚಿಸುವಂತೆ ಭಾರತ ಸರ್ಕಾರವು ಸಾರ್ವಜನಿಕ ಮತ್ತು ಖಾಸಗಿ ತೈಲ ಸಂಸ್ಕರಣಾಗಾರಗಳನ್ನು ಕೇಳಿದೆ.
ಮೂಲಗಳ ಪ್ರಕಾರ, LPG ಉತ್ಪಾದನೆಗೆ ಆದ್ಯತೆ ನೀಡಲು ಮತ್ತು ಇತರ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಪ್ರಮುಖ ಕಚ್ಚಾ ವಸ್ತುಗಳನ್ನ ಬೇರೆಡೆಗೆ ತಿರುಗಿಸುವುದನ್ನ ತಪ್ಪಿಸಲು ಸಂಸ್ಕರಣಾಗಾರಗಳಿಗೆ ಸೂಚನೆ ನೀಡಲಾಗಿದೆ.
“ಭಾರತ ಸರ್ಕಾರವು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಸಂಸ್ಕರಣಾಗಾರಗಳಿಗೆ ಹೆಚ್ಚಿನ LPG ಉತ್ಪಾದಿಸುವಂತೆ ಮತ್ತು ಇತರ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಪ್ರೋಪೇನ್ ಮತ್ತು ಬ್ಯುಟೇನ್ ಅನ್ನು ಬೇರೆಡೆಗೆ ತಿರುಗಿಸದಂತೆ ಅಥವಾ ಬಳಸದಂತೆ ಆದೇಶವನ್ನು ರವಾನಿಸಿದೆ” ಎಂದು ಮೂಲಗಳು ತಿಳಿಸಿವೆ.
1955ರ ಅಗತ್ಯ ಸರಕುಗಳ ಕಾಯ್ದೆಯ ಅಡಿಯಲ್ಲಿ ತುರ್ತು ಅಧಿಕಾರಗಳನ್ನ ಬಳಸಿಕೊಂಡು ಈ ನಿರ್ದೇಶನವನ್ನ ಹೊರಡಿಸಲಾಗಿದೆ, ಇದು ಸಂಭಾವ್ಯ ಪೂರೈಕೆ ಕೊರತೆಯ ಸಮಯದಲ್ಲಿ ಅಗತ್ಯ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಗಳಿಗೆ ನಿರ್ದೇಶಿಸಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ.
ಆದೇಶದಡಿಯಲ್ಲಿ, ತೈಲ ಸಂಸ್ಕರಣಾ ಕಂಪನಿಗಳು LPG ಉತ್ಪಾದಿಸಲು ಬಳಸುವ ಮುಖ್ಯ ಘಟಕಗಳಾದ ಪ್ರೋಪೇನ್ ಮತ್ತು ಬ್ಯುಟೇನ್’ನ್ನ ಸಂಪೂರ್ಣವಾಗಿ LPG ಉತ್ಪಾದನೆಗೆ ಬಳಸುವುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಉತ್ಪಾದಿಸಿದ ಇಂಧನವನ್ನು ಮೂರು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಮಾತ್ರ ಪೂರೈಸಬೇಕು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL).
2,000 ವರ್ಷಗಳ ಬಳಿಕ ಇಸ್ರೇಲ್’ನಲ್ಲಿ ಮೊದಲ ‘ಕೆಂಪು ಹಸು’ ಜನನ ; ಇದು ಅಂತ್ಯದ ಸಂಕೇತವೇ.?
“ಯುದ್ಧಗಳಲ್ಲಿ ನಾಗರಿಕ ಸಾಯಬಾರದು” : ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಶ್ರೀಲಂಕಾ ಅಧ್ಯಕ್ಷ ಶಾಂತಿಯ ಕರೆ








