ಬೆಂಗಳೂರು: ಬೆಂಗಳೂರು ಹಾಗೂ ಮುಂಬೈ ನಡುವೆ ಸೂಪರ್ ಫಾಸ್ಟ್ ಹೊಸ ರೈಲಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಸಂಬಂಧ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಹ್ಲಾದ್ ಜೋಶಿಯವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಅದರಲ್ಲಿ ದಿನಾಂಕ 16-10-2025ರಂದು ಬೆಂಗಳೂರು ಮತ್ತು ಮುಂಬೈಗೆ ವಯಾ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ರೈಲು ಬಿಡುವಂತೆ ಮನವಿ ಮಾಡಿದ್ದೀರಿ ಎಂದಿದ್ದಾರೆ.
ನಿಮ್ಮ ಮನವಿಯನ್ನು ಪರಿಗಣಿಸಿ, ಬೆಂಗಳೂರು ಟು ಮುಂಬೈ ವಯಾ ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ ನಡುವೆ ನೂತನ ರೈಲು ಸಂಚಾರಕ್ಕೆ ಅನುಮೋದನೆ ನೀಡಿರುವುದಾಗಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಬೆಂಗಳೂರು ಮುಂಬಯಿ ನೂತನ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮೋದನೆಯನ್ನು ನೀಡಲಾಗಿದೆ. ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಧಾರವಾಡ ಹಾಗೂ ಬೆಳಗಾವಿ ಮೂಲಕ ಮುಂಬಯಿಗೆ ನೂತನ ರೈಲು ತಲುಪಲಿದೆ. ಹೊಸ ರೈಲು ಸಂಚಾರದ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯನ್ನು ರೈಲ್ವೆ ಇಲಾಖೆ ಮಾಡಲಿದೆ.
ಈ ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಮಾರಕ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ
ಸಾಗರದಲ್ಲಿ ‘ಶರಾವತಿ ಪಂಪ್ ಸ್ಟೋರೇಜ್’ ಬೇಡ: ‘ಜಾನುವಾರು’ಗಳ ಮೇಲೆ ‘ವಿರೋಧಿ ಬರವಣಿಗೆ’








