ನವದೆಹಲಿ : ಕೇಂದ್ರ ಸರ್ಕಾರದ ಇತ್ತೀಚಿನ ಜನಗಣತಿ ಅಧಿಸೂಚನೆಯ ಸುತ್ತಲಿನ ಹೇಳಿಕೆಗಳಿಗೆ ಗೃಹ ಸಚಿವಾಲಯ (MHA) ಪ್ರತಿಕ್ರಿಯಿಸಿದ್ದು, ಜಾತಿ ಗಣತಿಯು ಮುಂಬರುವ ಜನಸಂಖ್ಯಾ ಸಮೀಕ್ಷೆಯ ಭಾಗವಾಗಿದೆ ಎಂದು ಪುನರುಚ್ಚರಿಸಿದೆ. ಜಾತಿ ಆಧಾರಿತ ಜನಗಣತಿ ನಡೆಸುವ ಬಗ್ಗೆ ಸರ್ಕಾರ ಮೌನವಾಗಿದೆ ಎಂಬ ಕಾಂಗ್ರೆಸ್ ಪಕ್ಷದ ತೀಕ್ಷ್ಣ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಈ ಸ್ಪಷ್ಟೀಕರಣ ಬಂದಿದೆ.
“ಜಾತಿ ಗಣತಿಯು ಮುಂಬರುವ ಜನಗಣತಿಯ ಒಂದು ಭಾಗವಾಗಿದೆ” ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದು, ಏಪ್ರಿಲ್ 30, ಜೂನ್ 4 ಮತ್ತು ಜೂನ್ 15, 2025ರ ದಿನಾಂಕದ ಮೂರು ಅಧಿಕೃತ ಪತ್ರಿಕಾ ಪ್ರಕಟಣೆಗಳನ್ನ ಉಲ್ಲೇಖಿಸಿದ್ದಾರೆ – ಸಚಿವಾಲಯದ ಪ್ರಕಾರ, ಈ ಸೇರ್ಪಡೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಜನಗಣತಿ ನಡೆಸುವ ಅಧಿಸೂಚನೆಯನ್ನ ಇಂದು ಅಧಿಕೃತ ಗೆಜೆಟ್’ನಲ್ಲಿ ಪ್ರಕಟಿಸಲಾಗಿದೆ. ಜನಗಣತಿಯಲ್ಲಿ ಜಾತಿ ಗಣತಿಯೂ ಸೇರಿರುತ್ತದೆ. ಆದಾಗ್ಯೂ, ಅಧಿಸೂಚನೆಯಲ್ಲಿ ಜಾತಿ ಗಣತಿಯ ಉಲ್ಲೇಖವಿಲ್ಲ ಎಂದು ಕೆಲವು ದಾರಿತಪ್ಪಿಸುವ ಮಾಹಿತಿಯನ್ನ ಹರಡಲಾಗುತ್ತಿದೆ. ಇದನ್ನು ಈಗಾಗಲೇ ಉಲ್ಲೇಖಿಸಲಾಗಿದೆ ಎಂದಿದ್ದಾರೆ.
The notification to conduct Census has been published in the Official Gazette today. The Census will include Caste enumeration as well. However, some misleading information is being spread that there is no mention of caste census in the notification. It has already been mentioned… pic.twitter.com/LPj3ocxxyt
— Press Trust of India (@PTI_News) June 16, 2025
ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ಸಂಚಾಲಕರಾಗಿ ರುದ್ರಣ್ಣ ಹರ್ತಿಕೋಟೆ ಮರು ಆಯ್ಕೆ
ಸ್ವೀಡನ್‌ನಲ್ಲಿ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿನ ಕರ್ನಾಟಕದ ಉನ್ನತ ಮಟ್ಟದ ನಿಯೋಗವು ರೋಡ್‌ಷೋ