ನವದೆಹಲಿ: ಕಾಂತಾರ ದೈವದ ಕೂಗಿನ ಅನುಕರಣೆಯನ್ನು ರಾಹುಕೇತು ಚಿತ್ರದಲ್ಲಿ ಮಾಡದಂತೆ ಸೆನ್ಸಾರ್ ಮಂಡಳಿ ಬ್ರೇಕ್ ಹಾಕಿದೆ.
ರಾಹುಕೇತು ಚಿತ್ರದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆ ಮಾಡಲಾಗಿತ್ತು. ಈ ಸಿನಿಮಾದಲ್ಲಿ ದೈವದ ಧ್ವನಿಗೆ ಸೆನ್ಸಾರ್ ಮಂಡಳಿಯು ಬಳಕೆ ಮಾಡದಂತೆ ಬ್ರೇಕ್ ಹಾಕಲಾಗಿದೆ.
ಪುಲ್ಕಿತ್ ಸಾಮ್ರಾಟ್, ವರುಣ್ ಶರ್ಮಾ ಅಭಿನಯದ ರಾಹುಕೇತು ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಕಾಂತಾರ ಚಿತ್ರದ ದೈವದ ಕೂಗನ್ನು ರಾಹುಕೇತು ಚಿತ್ರದಲ್ಲಿ ಬಳಸಲಾಗಿತ್ತು. ಈ ಶಬ್ದವನ್ನು ಬದಲಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ.
ಇನ್ನೂ ಚಿತ್ರದಲ್ಲಿ ತೋರಿಸಲಾಗಿದ್ದ ಮಧ್ಯದ ಬೆರಳಿನ ಸನ್ನೆ ಬದಲಿಸಲು ಸೂಚಿಸಲಾಗಿದೆ. ಚಿತ್ರದಲ್ಲಿ ಬಳಸಿದ ಸಂಸ್ಕೃತ ಶ್ಲೋಕಕಕ್ಕೆ ದೃಢೀಕರಣ ಪತ್ರಸಲ್ಲಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಮದ್ಯದ ಬ್ರ್ಯಾಂಡ್ ಗಳ ಹೆಸರು ತೆಗೆದು ಹಾಕಲು ನಿರ್ದೇಶಿಸಲಾಗಿದೆ.
ಅಂದಹಾಗೇ ಇದೇ ಜನವರಿ.16ರಂದು ರಾಹುಕೇತು ಸಿನಿಮಾ ತೆರೆ ಕಾಣಲಿದೆ. ಇಂತಹ ಚಿತ್ರದಲ್ಲಿ ಬಳಸಿರುವಂತ ಕಾಂತಾರ ದೈವದ ಕೂಗು, ಮಧ್ಯದ ಬೆರಳು ಪ್ರದರ್ಶನಕ್ಕೆ ಕತ್ತರಿ ಹಾಕೋದಕ್ಕೆ ಸೆನ್ಸಾರ್ ಮಂಡಳಿ ಖಡಕ್ ಸೂಚನೆ ನೀಡಿದೆ.
BREAKING: ಜ.22ರ ಬೆಳಗ್ಗೆ 11 ಗಂಟೆಯಿಂದ ‘ವಿಶೇಷ ಅಧಿವೇಶನ’: ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರ
BREAKING NEWS: ರಾಜ್ಯ ವಿಧಾನಮಂಡಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಜ.22ರಿಂದ ಆರಂಭ








