ಬೆಂಗಳೂರು: ಸರಳೀಕೃತ ಜಿಎಸ್‍ಟಿಯನ್ನು ಸ್ವಾಗತಿಸಿ ಬಿಜೆಪಿ ವತಿಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯು ನಾಳೆ (ಸೆ.22) ನಡೆಯಲಿದೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.
ಸ್ವಾತಂತ್ರ್ಯ ಪಡೆದ ನಂತರ ದೇಶ ಕಂಡ ಕ್ರಾಂತಿಕಾರಿ ಆರ್ಥಿಕ ಸುಧಾರಣೆ ಇದಾಗಿದೆ. ದೀಪಾವಳಿ ಹಬ್ಬಕ್ಕೆ ಮರೆಯಲಾಗದ ಬೋನಸ್ ಎಂದು ಬಣ್ಣಿಸಲಾದ ಕ್ರಾಂತಿಕಾರಕ ಜಿ.ಎಸ್.ಟಿ ಸುಧಾರಣೆಗಳು ನಾಡಹಬ್ಬ ನವರಾತ್ರಿಯ ಮೊದಲನೇ ದಿನ ಸೆಂಪ್ಟೆಂಬರ್ 22ರಂದು ಜಾರಿಗೆ ಬರಲಿದೆ. ಇಲ್ಲಿಯವರೆಗೆ ಚಾಲ್ತಿಯಲ್ಲಿದ್ದ 5%, 12%, 18% ಮತ್ತು 28% ಎಂಬ 4 ಶ್ರೇಣಿಗಳ ತೆರಿಗೆ ನೀತಿಯನ್ನು 5% ಮತ್ತು 18% ಎಂಬ ಎರಡು ಶ್ರೇಣಿಗಳಿಗೆ ಇಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ 12% ತೆರಿಗೆ ದರದಲ್ಲಿದ್ದ 99% ಸರಕುಗಳಿಗೆ 5% ತೆರಿಗೆ ಅನ್ವಯವಾಗುತ್ತದೆ. ಅಂತೆಯೇ ಈ ಹಿಂದೆ 28% ತೆರಿಗೆ ದರದಲ್ಲಿದ್ದ 90% ಸರಕುಗಳಿಗೆ 18% ತೆರಿಗೆ ಅನ್ವಯವಾಗುತ್ತದೆ. ತೆರಿಗೆ ದರದಲ್ಲಿನ ಇಳಿಕೆ ಎಷ್ಟು ಗೊತ್ತೇ? 1%-2% ಅಲ್ಲ; 18%, 13%, 12%, 10%, ಅಥವಾ 7% ಆಗಿರುತ್ತದೆ ಎಂದಿದ್ದಾರೆ.
#ಜನಸಾಮಾನ್ಯರ ಪರವಾದ ಜಿ.ಎಸ್.ಟಿ 2.0 ಸುಧಾರಣೆ:
i) ಅತ್ಯಗತ್ಯವಾದ ಸರಕುಗಳು: 0%-5%.
ii) ದೈನಂದಿನ ಬಳಕೆಯ ಅಗತ್ಯ ವಸ್ತುಗಳು: 5%.
iii) ಉಳಿದೆಲ್ಲ ಸರಕುಗಳ ಮೇಲಿನ ಜಿ.ಎಸ್.ಟಿ ದರ: 18%.
#2017ರಲ್ಲಿ ಜಿ.ಎಸ್.ಟಿ ಪಾವತಿದಾರರು: 65 ಲಕ್ಷ.
2024-25. : 1.51 ಕೋಟಿ, 132% ಏರಿಕೆ!
#ತೆರಿಗೆ ಸಂಗ್ರಹಣೆ:
2018: 7.19 ಲಕ್ಷ ಕೋಟಿ ರೂ.
2024-25: 22.08 ಲಕ್ಷ ಕೋಟಿ ರೂ, 207% ಏರಿಕೆ.
#ಹಾಲು ಮೊಸರು
ಪನ್ನೀರ್ ಇತ್ಯಾದಿ: 5% ನಿಂದ 0%ಗೆ.
ದಿನಸಿ ಪದಾರ್ಥಗಳ ಮೇಲಿನ ಜಿಎಸ್‍ಟಿ: 5%
ಶಾಂಪು, ಸೋಪ್, ಟೂತ್ ಪೇಸ್ಟ್, ಬ್ರμï, ಪೌಡರ್, ಕೂದಲ ಎಣ್ಣೆ ಮುಂತಾದ ದಿನಬಳಕೆ ಅಗತ್ಯ ವಸ್ತುಗಳು:18% ನಿಂದ 5%ಗೆ.
ಮಹತ್ವಾಕಾಂಕ್ಷೆಯ ಸರಕುಗಳು: ಕಾರು, ಎಸಿ, ಫ್ರಿಡ್ಜ್ ಇತ್ಯಾದಿ: 28% ನಿಂದ 18%ಗೆ.
ಕಾರು ಉತ್ಪಾದನಾ ಕಂಪನಿಗಳಿಂದ 75000 ರೂ ನಿಂದ 2.4 ಲಕ್ಷ ರೂ ತನಕ ಬೆಲೆಯಲ್ಲಿ ಕಡಿತ! ಇನ್ನು ಮುಂದೆ ಜನಸಾಮಾನ್ಯರು ತಮ್ಮ ಮಹತ್ವಾಕಾಂಕ್ಷೆಯನ್ನು ಪಡೆಯಬಹುದು, ಅಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
#ಅನ್ನದಾತರ ಸಬಲೀಕರಣ: ಟ್ರ್ಯಾಕ್ಟರ್ ಗಳು, ಹನಿ ನೀರಾವರಿಯ ಸ್ಪ್ರಿಂಕ್ಲರ್ ಗಳು, ಕೊಯ್ಲು ಮಾಡುವಿಕೆಗೆ ಬಳಸುವ ಸೂಕ್ತ ಯಂತ್ರಗಳು, ಉತ್ತಮ ಬೀಜಗಳು ಮತ್ತು ರಸಗೊಬ್ಬರಗಳ ಮೇಲಿನ ಜಿಎಸ್‍ಟಿ: 18% ಮತ್ತು 12% ನಿಂದ 5% ಗೆ.
#ಆರೋಗ್ಯ ಮತ್ತು ಫಿಟ್‍ನೆಸ್‍ನಲ್ಲಿ ಕ್ರಾಂತಿ: 33 ಜೀವ ಉಳಿಸುವ ಔಷಧಿಗಳ ಮೇಲಿನ ಜಿಎಸ್‍ಟಿ: 12% ನಿಂದು 0%ಗೆ.
ಉಳಿದೆಲ್ಲ ಔಷಧಿಗಳು:12% ನಿಂದ 5%ಗೆ.
“ವೈಯುಕ್ತಿಕ ಆರೋಗ್ಯ ವಿಮೆ ಮತ್ತು ಜೀವ ವಿಮೆ: ಪೂರ್ಣ ತೆರಿಗೆ ವಿನಾಯಿತಿ, ..18% ನಿಂದ 0%ಗೆ.
#ಎಲ್ಲರಿಗೂ ಶಿಕ್ಷಣ: ನೋಟ್ ಬುಕ್, ಪೆನ್ಸಿಲ್, ಕ್ರೇಯಾನ್ಸ್, ಕೌಶಲ್ಯ ತರಬೇತಿ ವೃತ್ತಿಪರ ತರಬೇತಿ ಮತ್ತು 10+2 ಶಿಕ್ಷಣದ ತನಕ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಶುಲ್ಕ: 0%
#ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‍ಎಂಇ): ಯಾರ ಹತ್ತಕ್ಷೇಪವೂ ಇಲ್ಲದೆ ಮೂರು ದಿನಗಳಲ್ಲಿ ಎಂಎಸ್‍ಎಂಇ ನೊಂದಣಿಗೆ ಸ್ವಯಂ ಚಾಲಿತ ಅನುಮೋದನೆ. ಇನ್‍ವರ್ಟಡ್ ಡ್ಯೂಟಿ ಸ್ಟ್ರಕ್ಚರನ್ನು ಸರಿಪಡಿಸುವುದು.
ತೆರಿಗೆ ಮರುಪಾವತಿಯ 90% ಭಾಗವನ್ನು ಮುಂಗಡವಾಗಿ ನೀಡುವ ಮೂಲಕ ಎಂಎಸ್‍ಎಂಇ ಗಳಿಗೆ ನಗದು ಹರಿವಿನ ಸೌಲಭ್ಯ.
ಎನ್‍ಡಿಎ ಇಂದು. ಯುಪಿಎ (2004-14)
ಸಬಲೀಕರಣ ಸುಲಿಗೆ
ಜನಪರ, ಕಡಿಮೆ ತೆರಿಗೆ ಭಯೋ
0% ನಿಂದ 18% 30%+ತೆರಿಗೆ
ಪ್ರಗತಿಪರ ತೆರಿಗೆ ಪ್ರತಿಗಾಮಿ ತೆರಿಗೆ
ಉದಾಹರಣೆ:
ಹಾಲು: 0%. ಹಾಲು: 18%
ಕಾರ್: 18% ಕಾರು: 18%
ಹೋಟೆಲ್: 5% ಹೋಟೆಲ್: 21%
ಪಾದ ರಕ್ಷೆ: 5% ಪಾದ ರಕ್ಷೆ: 18%
ಟೂತ್ ಪೇಸ್ಟ್, ಶಾಂಪೂ, ಕಾಫಿ: 5%. ಟೂತ್ ಪೇಸ್ಟ್, ಶಾಂಪೂ, ಕಾಫಿ: 30%.
ಮಿನರಲ್ ವಾಟರ್: 5% ಮಿನರಲ್ ವಾಟರ್: 28%
ಸ್ಯಾನಿಟರಿ ಪ್ಯಾಡ್ಸ್: 0% ಸ್ಯಾನಿಟರಿ ಪ್ಯಾಡ್ಸ್: 13%
ಎನ್‍ಡಿಎ ಎಂದರೆ, ಸುಲಭ ಜೀವನ ಸುಖೀ ಜೀವನದತ್ತ ದಾಪುಗಾಲು. ಇನ್ನೊಂದೆಡೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತದಿಂದಾಗಿ ಆರ್ಥಿಕವಾಗಿ ನೆಲಕಚ್ಚಿದ ಭಾರತ ಎಂದು ಅವರು ಹೋಲಿಸಿ ಹೇಳಿಕೆ ಕೊಟ್ಟಿದ್ದಾರೆ.
ಬಸವ ಜಯಮೃತ್ಯುಂಜಯಶ್ರೀಗಳ ವಿರುದ್ಧ ಸಿಡಿ ಬಾಂಬ್ ಸಿಡಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್
BREAKING: ಹಾಸನದಲ್ಲಿ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದ ಮುಸುಕುಧಾರಿ ಮಹಿಳೆ ಅರೆಸ್ಟ್