ಬೆಂಗಳೂರು: ಇಂದು ನಗರದಲ್ಲಿ ಕನ್ನಡ ತಂತ್ರಾಂಶ ಬಳಗದ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹಾಸ್ಯ ಚಟಾಕಿಯ ಮೂಲಕ ನೆರೆದಿದ್ದವರನ್ನು ಮಿಮಿಕ್ರಿಯ ಮೂಲಕ ನಗಿಸಿ 2ನೇ ಬಹುಮಾನವನ್ನು ಚಿತ್ರದುರ್ಗದ ಚಿತ್ರಲಿಂಗಯ್ಯ ತಮ್ಮದಾಗಿಸಿಕೊಂಡರು.
ಇಂದು ಬೆಂಗಳೂರಿನ ವಿಜಯನಗರದಲ್ಲಿರುವಂತ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಕನ್ನಡ ತಂತ್ರಾಂಶ ಬಳಗದ 10ನೇ ವಾರ್ಷಿಕೋತ್ಸವ ನಡೆಯಿತು. ಈ ವೇಳೆ ಜ್ಞಾಪಕ ಶಕ್ತಿ ಪರೀಕ್ಷೆ, ಮಿಮಿಕ್ರಿ, ಕ್ವಿಜ್ ನಡೆಸಲಾಯಿತು. ಇದರಲ್ಲಿ ಭಾಗವಹಿಸಿದಂತ ಚಿತ್ರದುರ್ಗದ ತಾಲ್ಲೂಕು ಪರಿಶಿಷ್ಟ ವರ್ಗಗಗಳ ಕಲ್ಯಾಣಾಧಿಕಾರಿಗಳ ಇಲಾಖೆಯ ಕಚೇರಿ ಅಧೀಕ್ಷಕರಾದಂತ ಚಿತ್ರಲಿಂಗಪ್ಪ ಮಿಮಿಕ್ರಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ಬಹುಮಾನ ಪಡೆದರು.
ಏನಿದು ಕನ್ನಡ ತಂತ್ರಾಂಶ ಬಳಗ?
ಕಳೆದ 10 ವರ್ಷಗಳ ಹಿಂದೆ ಅಂದರಿಗೆ ತಂತ್ರಾಂಶದ ಅರಿವು, ಜಾಗೃತಿಗಾಗಿ ಹುಟ್ಟಿಕೊಂಡಿದ್ದು ಕನ್ನಡ ತಂತ್ರಾಂಶ ಎನ್ನುವಂತ ಸಂಸ್ಥೆ. ಈ ಸಂಸ್ಥೆಯ ಮೂಲಕ ಅಂದರಿಗೆ ಹೊಸ ಹೊಸ ತಂತ್ರಾಂಶಗಳ ಬಳಕೆ ಸೇರಿದಂತೆ ವಿವಿಧ ಮಾಹಿತಿಯನ್ನು ನೀಡಲಾಗುತ್ತಿದೆ.
ಅಂದರಿಗಾಗಿ ತಂತ್ರಜ್ಞಾನದ ಸಬಲೀಕರ ಎನ್ನುವಂತ ಮಹತ್ವದ ಉದ್ದೇಶವು ಕನ್ನಡ ತಂತ್ರಾಂಶ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶವಾಗಿದೆ. ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡಿದ್ದು, 600 ರಿಂದ 700 ವಿವಿಧ ಅಂಗವೈಕಲ್ಯ ಹೊಂದಿದವರಿಗೆ ವಿಭಿನ್ನ ತಂತ್ರಜ್ಞಾನದ ಬಳಕೆಯನ್ನು ಸರಳ ರೀತಿಯಲ್ಲಿ ಕಲಿಸಿಕೊಡುವಂತ ಕೆಲಸ ಮಾಡಲಾಗುತ್ತಿದೆ.
ಮೊಬೈಲ್ ಆಪ್ ಬಳಸಿ ಪುಟ್ ಆರ್ಡರ್ ಮಾಡೋದು ಹೇಗೆ.? ಶಾಪಿಂಗ್ ಮಾಡುವ ವಿಧಾನ ಹೇಗೆ? ರೈಲು ಬುಕ್ಕಿಂಗ್ ಮಾಡುವುದು ಹೇಗೆ ಎನ್ನುವುದು ಸೇರಿದಂತೆ ವಿವಿಧ ಮಾಹಿತಿಯನ್ನು ಕನ್ನಡ ತಂತ್ರಾಂಶ ಸಂಸ್ಥೆ, ಅಂದರಿಗೆ ಟ್ಯೂಟೋರಿಯಲ್ ಮೂಲಕ ಮಾಹಿತಿ ನೀಡುತ್ತಿದೆ.
ಇದಲ್ಲದೇ ಸಮಾಜ ಮುಖಿಯಾಗಿಯೂ ತೊಡಗಿಸಿಕೊಂಡಿದ್ದು, ಕೋವಿಡ್ ಸಮಯದಲ್ಲಿ ಐವರು ಅಂದ ದಂಪತಿಗಳಿಗೆ ಈ ಸಂಸ್ಥೆಯಿಂದ ಆರ್ಥಿಕ ನೆರವನ್ನು ನೀಡಲಾಗಿದೆ. ಅಲ್ಲದೇ ಪ್ರವಾಹ ಸಂತ್ರಸ್ತರಾದವರಿಗೆ ಪುಡ್ ಕಿಟ್ ವಿತರಣೆಗೂ ಕೈಜೋಡಿಸಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ತಂತ್ರಾಂಶದ ನಿರ್ವಾಹಕ ಅರವಿಂದ್ ವಹಿಸಿದ್ದರು. ಈ ವೇಳೆ ಆಕಾಶವಾಣಿಯ ಉದ್ಘೋಷಕಿ ಬಿ.ಕೆ ಸುಮತಿ, ಸಾವಿರಕ್ಕೂ ಹೆಚ್ಚು ಪುಸ್ತಕಗಳಿಗೆ ಧ್ವನಿ ಮುದ್ರಕರಾಗಿರುವಂತ ಎಂ ನಿತ್ಯಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಶಶಿ ಬಿ ಈಶ್ವರಗೆರೆ, ಬೆಂಗಳೂರು
2024ನೇ ಸಾಲಿನ ಪುಸ್ತಕ ಬಹುಮಾನಕ್ಕೆ ‘ಕರ್ನಾಟಕ ಲೇಖಕಿಯರ ಸಂಘ’ದಿಂದ ಕೃತಿಗಳ ಆಹ್ವಾನ
ಆ.1ರಿಂದ ‘UPI ನಿಯಮ’ಗಳಲ್ಲಿ ಏನೆಲ್ಲ ಬದಲಾವಣೆ? ಇಲ್ಲಿದೆ ಮಾಹಿತಿ | UPI rule changes