ಸಂಕ್ರಾಂತಿ ಪರ್ವಪುಣ್ಯಕಾಲದ ಆಚರಣೆಯನ್ನು ಮಾಡಬೇಕು. ಈ ಸಮಯದಲ್ಲಿ ಸ್ನಾನ,ದಾನ,ಪಿತೃತರ್ಪಣ ಮುಂತಾದ ಕಾರ್ಯವನ್ನು ಮಾಡಬೇಕು.
ಸಂಕ್ರಾಂತಿ ಸ್ವರೂಪ : ಯೌವನಾವಸ್ಥೆಯ ಪಕ್ಷಿಜಾತಿಯ ಸಂಕ್ರಾಂತಿ ದೇವಿಯು ಪೂರ್ವದಿಂದ ಬಂದು, ದಕ್ಷಿಣಕ್ಕೆ ಮುಖಮಾಡಿ, ವಾಯವ್ಯಕ್ಕೆ ದೃಷ್ಟಿನೆಟ್ಟು, ಪಶ್ಚಿಮದೆಡೆಗೆ ಹೊರಟಿದ್ದಾಳೆ. ಶ್ವೇತ ಬಣ್ಣದ ಹತ್ತಿ ಬಟ್ಟೆ ತೊಟ್ಟು, ದಂಡ ಆಯುಧ ಧರಿಸಿ, ಬೆಳ್ಳಿ ಪಾತ್ರೆಯಲ್ಲಿ ಅಪೂಪ (ಕರಿದ ಸಿಹಿ) ಉಂಡು, ವಜ್ರ, ಹವಳ, ಕೇದಿಗೆ ಪುಷ್ಪ, ಗೋಪಿಚಂದನದಿಂದ ಅಲಂಕೃತಳಾಗಿ ಕುಳಿತಿದ್ದಾಳೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಶ್ಲೋಕ :
ತೀಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತೀಲತರ್ಪಣ: |
ತಿಲಭುಕ್ ತಿಲದಾತಾಚ ಷಟ್‍ತಿಲಾಃ ಪಾಪನಾಶನಾ: ||
ಈ ಪರ್ವ ಕಾಲದಲ್ಲಿ ಯಾರು ಆರು ವಿಧದಲ್ಲಿ ಎಳ್ಳಿನ ಉಪಯೋಗವನ್ನು ಮಾಡುತ್ತಾರೋ ಅಂಥವರ ಪಾಪ ನಾಶವಾಗಿ ಪುಣ್ಯವನ್ನು ಸಂಪಾದಿಸುತ್ತಾರೆ.
1) ಎಳ್ಳು ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು
2) ಎಳ್ಳಿನ ಕಲ್ಕದಿಂದ ಮೈ-ಕೈ ತಿಕ್ಕಿಕೊಳ್ಳುವದು
3) ಎಳ್ಳಿನ ಹೋಮ
4) ಎಳ್ಳು ಮಿಶ್ರಿತ ನೀರಿನ ಸೇವನೆ
5) ಎಳ್ಳನ್ನು ಗುರುಗಳಿಗೆ ಇಲ್ಲವೇ ಬ್ರಾಹ್ಮಣರಿಗೆ ದಾನ ಕೊಡುವದು.
6) ಎಳ್ಳನ್ನು ಸೇವಿಸುವದು, ಹೀಗೆ ಆರು ರೀತಿಯಲ್ಲಿ ಎಳ್ಳನ್ನು ಉಪಯೋಗಿಸಿದರೆ ಅವರಿಗೆ ಪುಣ್ಯ ಪ್ರಾಪ್ತಿ ಆಗುತ್ತದೆ.
ಮಕರ ಸಂಕ್ರಮಣ – #ಸೂರ್ಯಆರಾಧನೆ
ಆದಿತ್ಯೋ ಹ ವೈ ಪ್ರಾಣೋ ರಯಿರೇವ ಚಂದ್ರಮಾಃ
ರಯಿರ್ವಾ ಏತತ್ಸರ್ವಂ ಯಃ ಮೂರ್ತಂ ಚ ಅಮೂರ್ತಂ ಚ
ತಸ್ಮಾತ್ ಮೂರ್ತಿರೇವ ರಯಿಃ ||
ವಿಶ್ವರೂಪಂ ಹರಿಣಂ ಜಾತವೇದಸಂ ಪರಾಯಣಂ
ಜ್ಯೋತಿರೇಕಂ ತಪನ್ತಂ ಸಹಸ್ರರಷ್ಮಿಃ ಶತಧಾ ವರ್ತಮಾನಃ
ಪ್ರಾಣಃ ಪ್ರಜಾನಾಂ ಉದಯತಿ ಏಷಃ ಸೂರ್ಯಃ || ( ಪ್ರಶ್ನೋಪನಿಷತ್ )
ವೇದೋಪನಿಷತ್ತುಗಳಲ್ಲಿ ವರ್ಣಿಸಿದಂತೆ ಸೂರ್ಯನೇ ಪ್ರಾಣ , ರಯಿ ಎಂದರೆ ಮೂರ್ತ-ಅಮೂರ್ತರೂಪವಾದ ಜೀವ ಜಗತ್ತು. ಜಗತ್ತಿನ ಚಲನೆಗೆ ಸೂರ್ಯನೇ ಕಾರಣ. ಅದ್ವಿತೀಯ ಶಕ್ತಿಸ್ವರೂಪಿ, ವಿಶ್ವರೂಪಿಯಾದ ಸೂರ್ಯನಾರಾಯಣನು ಸಹಸ್ರ ಕಿರಣ ಪ್ರಕಾಶದಿಂದ ಉದಯಿಸಿ ಸಕಲ ಜೀವರಾಶಿಗೆ ಚೇತನಾಶಕ್ತಿಯನ್ನು ತುಂಬುತ್ತಾನೆ.
ಖಗೋಳಶಾಸ್ರಜ್ಞ ಶ್ರೀಭಾಸ್ಕರಾಚಾರ್ಯರು,
ಯಸ್ಯೋದಯಾಸ್ತ ಸಮಯೇ ಸುರಮುಕುಟ ನಿಘೃಷ್ಠ ಚರಣ ಕಮಲೋಪಿ |
ಕುರುತೇಂಜಲಿಂ ತ್ರಿನೇತ್ರಃ ಸಜಯತಿ ಧಾಮ್ನಾಂ ನಿಧಿ ಸೂರ್ಯಃ ||
ಯಾವ ಸೂರ್ಯನ ಉದಯಾಸ್ತ ಕಾಲಕ್ಕೆ ದೇವತೆಗಳೂ ತಲೆಬಾಗಿ ನಮಿಸುತ್ತಾರೋ ಅಂತಹ ಸರ್ವಶಕ್ತನಾದ, ಮಹಾನಿಧಿಯಾದ ಸೂರ್ಯನು ವಿಶ್ವಕ್ಕೆ ಜಯವನ್ನು ತಂದು ಕೊಡಲಿ ಎಂದು ಕೊಂಡಾಡಿದ್ದಾರೆ.
ಗೋಚಾರದಿಂದ ಸೂರ್ಯನು ಪ್ರತಿ ತಿಂಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೆ ಈ ಸೂರ್ಯ ಪರಿಭ್ರಮಣೆ ಗೆ ಸಂಕ್ರಮಣ ಎಂದು ಕರೆಯುತ್ತಾರೆ. ಕರ್ಕರಾಶಿ ಪ್ರವೇಶದಿಂದ ದಕ್ಷಿಣಾಯನ ಮತ್ತು ಮಕರ ರಾಶಿ ಪ್ರವೇಶದಿಂದ ಉತ್ತರಾಯಣ ಆರಂಭವಾಗುತ್ತದೆ.
ಇದು ದೇವತೆಗಳಿಗೆ ಹಗಲು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಶ್ರೀಭೀಷ್ಮಾಚಾರ್ಯರು ಶರಶಯ್ಯೆಯ ಮೇಲೆ ಮಲಗಿ ಧರ್ಮೋಪದೇಶ ಮಾಡಲು ಹಾಗೂ ದೇಹತ್ಯಾಗ ಮಾಡಲು ಉತ್ತರಾಯಣಕ್ಕಾಗಿ ಕಾದಿದ್ದರು ಎಂಬ ಉಲ್ಲೇಖಗಳಿವೆ.
ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ
ಶ್ರೀ ಕೃಷ್ಣನು ಗೀತೆಯಲ್ಲಿ ಅಯನದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರು ಧಕ್ಷಿಣಾಯಣದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೇ
ಉತ್ತರಾಯಣ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರಮಾಡಿಕೊಳ್ಳುತಾನೆ
ಕೃತಕಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ ಬ್ರಹ್ಮದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು
ಇಂದ್ರನಿಗೆ ಗೌತಮರು ಶಾಪ ವಿಮೋಚನೆಯನ್ನು ಮಾಡಿದ್ದು
ನಾರಾಯಣನು ವರಾಹ ಅವತಾರದಿಂದ ಭೂಮಿಯಮೇಲೆ ಪಾದ ಸ್ಪರ್ಶಮಾಡಿದ್ದು ಸಮುದ್ರಮಂಥನ ಸಮಯದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು
ಹಾಗು ಋಷಿಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ ಈ ಎಲ್ಲಾ ಕಾರಣಕ್ಕಾಗಿ ಜ್ಯೋತಿಷ್ ಶಾಸ್ತ್ರದಲ್ಲಿ ಶಾಸ್ತ್ರದ ಪ್ರಕಾರ ವಿವಾಹ ನಾಮಕರಣ ಗೃಹಪ್ರವೇಶ ಇಂತ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ
ಪುಣ್ಯತೀರ್ಥದಲ್ಲಿ ಅಂದರೆ ನದಿ ಸಂಗಮ ಸಮುದ್ರದಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿ ಉತ್ತರಾಯಣ ಕಾಲದಲ್ಲಿ ಮಾಡುತ್ತಾರೆ ಶರೀರದ ಕೊಳೆ ನಿವಾರಿಸುವ ಜೊತೆ ಮಾನಸಿಕ ಕೊಳೆ ನಾಶಮಾಡುವುದು ಈ ಸ್ನಾನದ ಉದ್ದೇಶ ಸರ್ವರೋಗ ನಿವೃತ್ತಿಗಾಗಿ ಬೇಡುವವರ ಸಿದ್ದಿಗಾಗಿ ಸ್ನಾನ ಮಾಡುವ ಪದ್ಧತಿ ಇದರ ಜೊತೆಗೆ ಎಳ್ಳಿನ ತರ್ಪಣ ಕೊಡುತ್ತಾರೆ
ಸಂಕ್ರಾಂತಿ ಹಬ್ಬ ವಿಶಿಷ್ಟ ಉಲ್ಲಾಸದಿಂದ ಕೂಡಿದ ಹಬ್ಬ ಎಳ್ಳಿನ ಕಹಿ ಬೆಲ್ಲದ ಸಿಹಿ ಜೀವನದಲ್ಲಿ ಸರಿಯಾಗಿ ಹಂಚಿಕೊಂಡು ಬಾಳುವುದೇ ಜೀವನದ ಅರ್ಥ ಎಳ್ಳು ಬೆಲ್ಲ ಪರಸ್ಪರ ಹಂಚಿ ದ್ವೇಷ ಅಸೂಹೆ ಶತೃತ್ವಗಳನ್ನು ಮರೆತು ಸಾಮರಸ್ಯದಿಂದ ಬದುಕುವ ಪ್ರತಿಜ್ಞೆ ಮಾಡುವ ಹಬ್ಬವಾಗಿದೆ
ಸೂರ್ಯ ತನ್ನ ದಿಕ್ಕನ್ನು ಬದಲಾಯಿಸುವ ಈ ಸಂಕ್ರಮಣದ ಶುಭಸಂದರ್ಭದಲ್ಲಿ, ರೈತರಿಗೆ ಸುಗ್ಗಿ ಹಬ್ಬವೆಂದೇ ಹೇಳುವ ಈ ಹಬ್ಬ, ನಮ್ಮ ಹಿಂದೂಗಳಿಗೆ ಬಹಳ ಶ್ರೇಷ್ಠವಾದದ್ದು, ಎಲ್ಲರಿಗೂ
ಸಂಕ್ರಾಂತಿ ಹಬ್ಬದ ಶುಭಾಶಯಗಳು
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನ್ನಾಡುತ್ತಾ ಒಳ್ಳೆ ಅಲೋಚನೆಗಳನ್ನು ಮಾಡುತ್ತ ಸಂಕ್ರಾಂತಿಗೆ ಮುನ್ನುಡಿ ಬರೆಯೋಣ.
ಆದ್ದರಿಂದ ಸಂಕ್ರಮಣದ ಕಾಲದಲ್ಲಿ ಸ್ನಾನ-ದಾನ ಮತ್ತು ದೇವಋಷಿ-ಪಿತೃ ತರ್ಪಣಕ್ಕೆ ವಿಶೇಷ ಮಹತ್ವವಿದೆ. ದೃಷ್ಟ ಕರ್ಮಗಳನ್ನು ದೃಕ್ ಸಿದ್ಧಾಂತದಂತೆ ಹಾಗೂ ಅದೃಷ್ಟ ಕರ್ಮಗಳಾದ ಹಬ್ಬ,ಹರಿದಿನ,ಪರ್ವಕಾಲ,ವ್ರತಗಳ ಆಚರಣೆ,ಮೊದಲಾದ ಧಾರ್ಮಿಕ ಕಾರ್ಯಗಳನ್ನು ನಿರಯನ ಗಣನೆಯಂತೆ ಆಚರಿಸಬೇಕು.
ಆದ್ದರಿಂದ ಮಕರ ಸಂಕ್ರಮಣವು ಹಬ್ಬ-ಜಾತ್ರೆ-ಉತ್ಸವಗಳ ಕಾಲವಾಗಿದೆ. ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಗೆ ಆಸ್ಸಾಂನಲ್ಲಿ ಮಾಘಬಿಹು ಎನ್ನುತ್ತಾರೆ. ದಕ್ಷಿಣ ಭಾರತದ ಕೇರಳ ಮುಂತಾದ ರಾಜ್ಯದಲ್ಲಿ ಪೊಂಗಲ್, ಮಾಟ್ಟು ಪೊಂಗಲ್, ತೈ ಪೊಂಗಲ್, ಮಕರ ವಾವು ಹಾಗೂ ಪಂಜಾಬನಲ್ಲಿ ಲೊಹರಿ ಎಂದು ಆಚರಿಸುತ್ತಾರೆ.
ಸಂಕ್ರಾಂತಿ ಕೃಷಿಕರ ಹಬ್ಬ ಆದ್ದರಿಂದ ದನಕರುಗಳಿಗೆ, ಹಸಿಧಾನ್ಯಗಳಗೆ, ಕೃಷಿ ಉಪಯುಕ್ತ ಉಪಕರಣಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಜಾತ್ರೆ-ಉತ್ಸವಗಳು, ಸಾಸ್ಕøತಿಕ ಕಾರ್ಯಕ್ರಮಗಳ, ಶಕ್ತಿಪ್ರದರ್ಶನ, ಚಕ್ಕಡಿ ಓಟ, ಜಲ್ಲಿಕಟ್ಟು ಮುಂತಾದ ಆಟಗಳ ಆಯೋಜನೆ ಮಾಡಲಾಗುತ್ತದೆ.
ಹಬ್ಬವನ್ನು ಮೂರುದಿನ ಆಚರಿಸುವದು ರೂಢಿಯಲ್ಲಿದೆ. ಮೊದಲದಿನ ‘ಭೋಗಿ’ ಅಂದು ಬೆಳಗ್ಗೆ ಕಬ್ಬು,ಬಾರಿಹಣ್ಣು,ಬೆಳಸಿ,ಸುಲಗಾಯಿ, ಬದನೆ,ತಪ್ಪಲುಉಳ್ಳಾಗಡ್ಡಿ,ಬೆಣ್ಣೆ,ಬೆಲ್ಲ ಸಹಿತವಾಗಿ ಕಾಯಿ,ಸೀರೆ,ಕಾಡಿಗೆ,ಕನ್ನಡಿ,ಹಣಿಗೆ ಮುಂತಾದ ವಸ್ತುಗಳನ್ನಿಟ್ಟು ಸುಮಂಗಲಿಯರಿಗೆ ಮರದಬಾಗಿನ ಕೊಡುವರು. ಸಾಯಂಕಾಲ ಕಬ್ಬು, ಸಕ್ಕರೆ ಅಚ್ಚು, ಹಣ್ಣುಗಳಿಂದ ಹಣ್ಣೆರೆದು ಆರತಿ ಮಾಡುವರು ಅಲ್ಲದೇ ದಿನಬಳಕೆಯ ವಸ್ತುಗಳಾದ ಲೋಟ, ತಟ್ಟೆ, ಬಟ್ಟಲು, ಮುಂತಾದ ಪಾತ್ರೆಗಳನ್ನು ಹಾಗೂ ಮಕ್ಕಳಿಗೆ ಪೆನ್ನು, ಪುಸ್ತಕ, ಆಟದ ಸಾಮಾನುಗಳನ್ನು ಹಂಚುತ್ತಾರೆ ಇದನ್ನು ‘ಲುಟಾಯಿಸುವದು’ ಅಥವಾ ‘ಬೀರುವದು’ ಎನ್ನುವರು.
ಎರಡನೇ ದಿನ ಸಂಕ್ರಮಣ ಅಂದು ಪರ್ವಪುಣ್ಯಕಾಲ ಇರುತ್ತದೆ. ಸಂಕ್ರಾಂತಿಯ ನಂತರದ 16ತಾಸಿನವರೆಗೆ ಪುಣ್ಯಕಾಲ ಇರುತ್ತದೆ. ಈ ಸಮಯದಲ್ಲಿ ಸುಮುದ್ರ, ನದಿ, ಸಂಗಮ ಸ್ಥಳಗಳಲ್ಲಿ ಸ್ನಾನ ಮಾಡುವದು ವಿಶೇಷ.
‘ತಿಲಸ್ನಾಯೀ ತಿಲೋದ್ವರ್ತಿ ತಿಲಹೋಮಿ ತಿಲೋದಕಿ | ತಿಲಭುಕ್ ತಿಲದಾತಾ ಚ ಷಟ್ ತಿಲಾ ಪಾಪನಾಶನಾಃ ||’
ಪುಣ್ಯಕಾಲದಲ್ಲಿ ಎಳ್ಳಿನ ಚಟ್ಟನ್ನು ಹಚ್ಚಿಕೊಂಡು ಎಳ್ಳು ಮಿಶ್ರಿತ ನೀರಿನಿಂದ ಸ್ನಾನ ಮಾಡುವದು, ಎಳ್ಳಿನಿಂದ ಹೋಮ ಮಾಡುವದು, ಎಳ್ಳಿನಿಂದ ತರ್ಪಣ ಕೊಡುವದು, ಎಳ್ಳನ್ನು ಸೇವಿಸುವದು ಹಾಗೂ ಬಂಧುಮಿತ್ರರಿಗೂ ಕೊಡುವದು ಹೀಗೆ ಎಳ್ಳನ್ನು ಆರುವಿಧದಲ್ಲಿ ಉಪಯೋಗ ಮಾಡುವದರಿಂದ ಪಾಪನಾಶವಾಗುತ್ತದೆ. ಮನೆಮನೆಗೂ ಹೋಗಿ ಎಳ್ಳುಬೆಲ್ಲ ಕೊಟ್ಟು ಮಧುರವಾಗಿ ಮಾತನಾಡಿ ಹಬ್ಬದ ಶುಭಾಶಯ ಕೋರುವದು ಸಂಪ್ರದಾಯ.
ಕೊನೆಯದಿನಕ್ಕೆ ಸಂಕ್ರಮಣ ಕರಿ ಎನ್ನುತ್ತಾರೆ. ಇದನ್ನು ತೊಡಕು ಎನ್ನುವರು. ವಿಘ್ನ ಪರಿಹಾರಕ್ಕೆ ಈ ದಿನ ಶ್ರೇಷ್ಟವಾಗಿದೆ. ಹೊಸದಾಗಿ ಮದವೆಯಾದ ಮೊದಲಗಿತ್ತಿಗೆ ಕಪ್ಪು ಸೀರೆ, ಕಪ್ಪು ಬಳೆ, ಕಪ್ಪು ಬಣ್ಣದ ಆಭರಣದಿಂದ ಅಲಂಕರಿಸಿ ಆರತಿ ಮಾಡಿ ದೃಷ್ಟಿ ತೆಗೆಯುವ ವಿಶಿಷ್ಟ ಸಂಪ್ರದಾಯವಿದೆ. ಅದರಂತೆ ಹೊಸದಾಗಿ ಖರೀದಿಸಿದ ದನಕರುಗಳು, ಯಂತ್ರೋಪಕರಣಗಳು, ಆಸ್ತಿ, ವಸ್ತು, ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದಿನ ಶುಭಕಾರ್ಯ ಅಥವಾ ಮಹತ್ವದ ಕಾರ್ಯಗಳಿಗೆ ವಜ್ರ್ಯವಾಗಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಎಲ್ಲರಿಗೂ ಆ ಭಗವಂತ ಒಳ್ಳೆಯ ಆರೋಗ್ಯ, ಆಯಸ್ಸು, ಐಶ್ವರ್ಯ, ಸಕಲ ಸಂಪತ್ತುನ್ನು ಕೊಟ್ಟು, ಸುಖ ಶಾಂತಿ ನೆಮ್ಮದಿಯ ಜೀವನವನ್ನು ದಯಪಾಲಿಸಲಿ.
ಸರ್ವರಿಗೂ ಉತ್ತರಾಯಣ ಪುಣ್ಯಕಾಲದಲ್ಲಿ ಆಚರಿಸುವ ಧರ್ಮಕಾರ್ಯಗಳು ಶುಭತರಲಿ.
ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು









