ಹೈದ್ರಬಾದ್: ಆಂಧ್ರಪ್ರದೇಶದ ಅನಂತಪುರದ ಸಿಸಿಟಿವಿ ಕ್ಯಾಮೆರಾದಲ್ಲಿ ಧೂಮಪಾನಿಯೊಬ್ಬರ ಬೀಡಿ ಅನಾಹುತ ನಿರ್ಮಾಣ ಮಾಡಿರುವ ಘಟನೆ ನಡೆದಿದೆ.
ಕಲ್ಯಾಣದುರ್ಗಂ ಪಟ್ಟಣದ ಬೀದಿಯಲ್ಲಿ ಈ ಘಟನೆ ನಡೆದಿದೆ. ಈ ರಸ್ತೆಯಲ್ಲೇ ವ್ಯಕ್ತಿಯೊಬ್ಬರು 5 ಲೀಟರ್ ಪೆಟ್ರೋಲ್ನ್ನು ಕ್ಯಾನ್ ಮೂಲಕ ತುಂಬಿ ಸಾಗಿಸುತ್ತಿದ್ದ, ಈ ವೇಳೆ ಬೀದಿಯ ಬದಿಯಲ್ಲಿ ಬೈಕ್ ನಿಲ್ಲಿಸಿ ಬೇರೆ ವಸ್ತುಗಳನ್ನೂ ಖರೀದಿಸಿದ್ದ ಪೆಟ್ರೋಲ್ ರಸ್ತೆಗೆ ಚೆಲ್ಲಿದೆ. ಈ ನಡುವೆ ಇದೇ ಪೆಟ್ರೋಲ್ ಚೆಲ್ಲಿದ ಪಕ್ಕದಲ್ಲೇ ನಿಂತುಕೊಂಡ ವ್ಯಕ್ತಿಗಳಿಬ್ಬರು ಬೀಡಿ ತೆಗೆದು ಬಾಯಿಗಿಟ್ಟು, ಬೆಂಕಿ ಕಡ್ಡಿಯನ್ನು ಪೆಟ್ರೋಲ್ ಚೆಲ್ಲಿದ ಸ್ಥಳದ ಮೇಲೆ ಚೆಲ್ಲಿದೆ. ಈ ನಡುವೆ ಬೆಂಕಿಯ ಕೆನ್ನಾಲ ಧಗಧಗಿಸುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಓಡಿದ್ದಾರೆ. ಇತ್ತ ಬೆಂಕಿಯ ಜ್ವಾಲೆ ಇದೀ ಬೀದಿಗೆ ಆವರಿಸಿದೆ. ಹಲಲು ಅಂಗಡಿಗಳು ಸುಟ್ಟು ಭಸ್ಮವಾಗಿದೆ ತಕ್ಷಣವೇ ಸ್ಥಳೀಯರು ಅಂಗಡಿಯಲ್ಲಿಟ್ಟಿದ್ದ ಬೆಂಕಿ ನಂದಿಸುವ ಅಗ್ನಿಶಾಮಕ ಹಾಗೂ ನೀರು ಬಳಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
A Man Ignites Beedi with Petrol Spill, Sparks Blaze in Anantapur-Kalyanadurgam
A man carrying petrol in a can accidentally dropped it, causing the fuel to spill onto the road. Unaware of the spill, another individual lit a beedi, which ignited the petrol and triggered a fire. pic.twitter.com/vJFm03fpTl
— 4tv News Channel (@4tvhyd) August 21, 2024