ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ವಿವಿಧ ದೇಶಗಳಿಂದ ಇಂಡಿಯನ್ ಪೋಸ್ಟ್ ಮುಖಾಂತರ ತರಿಸಿಕೊಂಡಿದ್ದ 21,17,34,000 ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇಂದು ಬೆಂಗಳೂರು ನಗರ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತೀಯ ಅಂಚೆ ಮೂಲಕ ವಿವಿಧ ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದ ಬೆಂಗಳೂರು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಈ ವರ್ಷದಲ್ಲಿ 12 ಪ್ರಕರಣಗಳನ್ನು ದಾಖಲು ಮಾಡಿ, ಆರೋಪಿಗಳನ್ನು ದಸ್ತಗಿರಿ ಮಾಡಿ ವಿವಿಧ ರೀತಿಯ ನಿಷೇಧಿತ ಮಾಧಕ ವಸ್ತುಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲು ಮಾಡಿರುತ್ತಾರೆ ಎಂದಿದೆ.
ಸೆಪ್ಟೆಂಬರ್ ಮಾಹೆಯಲ್ಲಿ ನಗರದ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಇಂತಹದೇ 2 ಪ್ರಕರಣಗಳು ಮತ್ತು ಸಿಸಿಬಿ ಠಾಣೆಯಲ್ಲಿ 1 ಪ್ರಕರಣ ದಾಖಲಿಸಿದ್ದು, ಈ ಪ್ರಕರಣಗಳಲ್ಲಿ ಮೂವರು ವ್ಯಕ್ತಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದೆ.
ನಿಷೇದಿತ ಮಾದಕ ವಸ್ತುವನ್ನು ಸಂಪೂರ್ಣವಾಗಿ ಬೇರು ಸಮೇತ ಕಿತ್ತೊಗೆಯಲು ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಯು.ಎಸ್, ಯು.ಕೆ. ಬೆಲ್ಲಿಯಂ, ಥೈಲ್ಯಾಂಡ್, ನೇದರ್ ಲ್ಯಾಂಡ್ ಹಾಗು ಇತರೆ ದೇಶಗಳಿಂದ ಬೆಂಗಳೂರಿಗೆ ತರಿಸಿಕೊಂಡಿದ್ದ ಸುಮಾರು 3,500 ಅನುಮಾನಾಸ್ಪದ ಪಾರ್ಸೆಲ್‌ಗಳನ್ನು ಶ್ವಾನ ದಳದ ಸಹಾಯದಿಂದ ಪರಿಶೀಲನೆಗೊಳಪಡಿಸಲಾಯಿತು. ಈ ಪಾರ್ಸಲ್‌ಗಳ ಪೈಕಿ 606 ಪಾರ್ಸಲ್‌ಗಳಲ್ಲಿ ನಿಷೇಧಿತ ಮಾದಕ ವಸ್ತುಗಳು ಇರುವುದು ಖಚಿತವಾಗಿದ್ದರಿಂದ ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.
ತನಿಖಾ ಕಾಲದಲ್ಲಿ ಈ 606 ಪಾರ್ಸಲ್‌ಗಳಲ್ಲಿದ್ದ ಅಂದಾಜು ಶೇ 21,17,34,000/- (ಇಪ್ಪತ್ತೊಂದು ಕೋಟಿ ಹದಿನೇಳು ಲಕ್ಷದ ಮೂವತ್ತನಾಲ್ಕು ಸಾವಿರ ರೂಪಾಯಿ) ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಷೇಧಿತ ಮಾದಕ ವಸ್ತುವಾದ 1) ಹೈಡೋ ಗಾಂಜಾ: 28 ಕೆ.ಜಿ 06 ಗ್ರಾಂ 2) ಎಲ್.ಎಸ್.ಡಿ: 2,569 ನಂಬರ್ 3) ಎಂ.ಡಿ.ಎಂ.ಎ ಕ್ರಿಸ್ಟೆಲ್: 1 ಕೆ.ಜಿ 618 ಗ್ರಾಂ 4) ಎಕ್ಸ್‌ಟೆಸಿ ಮಾತ್ರೆಗಳು: 11,908 ನಂಬರ್ 5) ಹೆರಾಯಿನ್: 770 ಗ್ರಾಂ 6) ಕೋಕೇನ್: 102 ಗ್ರಾಂ 1) ಆಮ್ ಫೀಟಮೈನ್: 6 ಕೆ.ಜಿ 280 ಗ್ರಾಂ 8) ಚರಸ್: 336 ಗ್ರಾಂ 9) ಗಾಂಜಾ ಎಣ್ಣೆ: 1 ಕೆ.ಜಿ 217 ಗ್ರಾಂ 10) ಮ್ಯಾಥಾಕ್ಷಿನಾ: 445 ಗ್ರಾಂ || ಇ-ಸಿಗರೇಟ್: 11 ನಂಬರ್ 12) ನಿಕೋಟಿನ್: 102 ಎಂ.ಎಲ್ 13) ಟೊಬ್ಯಾಕೋ: 400 ಗ್ರಾಂ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಭಾರತೀಯ ಅಂಚೆ ಮೂಲಕ ಯು.ಎಸ್, ಯು.ಕೆ. ಬೆಲ್ಲಿಯಂ, ಥೈಲ್ಯಾಂಡ್ ಹಾಗೂ ಇತರೆ ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತರಿಸಿಕೊಂಡು ಅವುಗಳನ್ನು ಹೆಚ್ಚಿನ ಬೆಲೆಗೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡಿ ಅಕ್ರಮ ಹಣದ ಸಂಪಾದನೆಯಲ್ಲಿ ತೊಡಗುತ್ತಿದ್ದರೆಂಬ ಮಾಹಿತಿ ಇದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ ಎಂದು ಹೇಳಿದೆ.
ರೈತರಿಗೆ ಗುಡ್ ನ್ಯೂಸ್: ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ
BREAKING : ಕಲಬುರ್ಗಿ ಜೈಲಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ಆರೋಪ ಪ್ರಕರಣ : ‘CCB’ ತನಿಖೆಗೆ ವಹಿಸಿ ಕಮಿಷನರ್ ಆದೇಶ