ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿ ಫಲಿತಾಂಶಗಳನ್ನ ಪ್ರಕಟಿಸಿದೆ. 10ನೇ ತರಗತಿ ಪರೀಕ್ಷೆಯಲ್ಲಿ ಶೇ.93.60, 12ನೇ ತರಗತಿಯಲ್ಲಿ ಶೇ.87.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಬಿಎಸ್ಇ 10 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳನ್ನ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಯಶಸ್ವಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ, “ಪ್ರೀತಿಯ #ExamWarriors, ಸಿಬಿಎಸ್ಇ 12 ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ನಿಮ್ಮೆಲ್ಲರಿಗೂ ಅಭಿನಂದನೆಗಳು! ನಿಮ್ಮ ಸಾಧನೆ ಮತ್ತು ನಿಮ್ಮ ಅವಿರತ ಸಮರ್ಪಣೆಯ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ನಿಮ್ಮ ಬೆಂಬಲಿತ ಕುಟುಂಬಗಳು ಮತ್ತು ಸಮರ್ಪಿತ ಶಿಕ್ಷಕರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ, ಅವರ ಅಚಲ ಬೆಂಬಲವು ಈ ಯಶಸ್ಸಿಗೆ ನಿರ್ಣಾಯಕವಾಗಿದೆ. ಮುಂದಿನ ಪ್ರಯತ್ನಗಳಿಗೆ ಆಲ್ ದಿ ಬೆಸ್ಟ್” ಎಂದಿದ್ದಾರೆ.
To the brilliant students who believe they could have achieved more in their Class XII exams—remember, this is just one milestone in your journey. Your future holds limitless possibilities. Focus on what excites and drives you. Your unique talents will lead you to success and…
— Narendra Modi (@narendramodi) May 13, 2024