ನವದೆಹಲಿ: ಸಿಬಿಎಸ್‍ಸಿ ಪಠ್ಯಪುಸ್ತಕದಲ್ಲಿ ‘ಡೇಟಿಂಗ್ ಮತ್ತು ರಿಲೇಶನ್ಶಿಪ್’ ಅಧ್ಯಾಯವಿದೆ ಎಂದು ತೋರಿಸುವ ಚಿತ್ರವೊಂದು ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಧ್ಯ ಈ ಕುರಿತು ಭಾರತದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸ್ಪಷ್ಟನೆ ನೀಡಿದೆ.
ಸಾಮಾಜಿಕ ಮಾಧ್ಯಮ ವೆಬ್ಸೈಟ್ ಎಕ್ಸ್ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಿಬಿಎಸ್ಇ ಈ ಸುದ್ದಿಯನ್ನು “ಆಧಾರರಹಿತ ಮತ್ತು ತಪ್ಪು” ಎಂದು ಕರೆದಿದೆ.
“ಡೇಟಿಂಗ್ ಮತ್ತು ಸಂಬಂಧಗಳ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನ ಒಳಗೊಂಡಿರುವ ಪುಸ್ತಕವನ್ನ ಸಿಬಿಎಸ್ಇಯ ಪ್ರಕಟಣೆ ಎಂದು ತಪ್ಪಾಗಿ ಆಪಾದಿಸುತ್ತಿದೆ. ಆದ್ರೆ, ಇದು ಸಂಪೂರ್ಣವಾಗಿ ಆಧಾರರಹಿತ ಮತ್ತು ತಪ್ಪು” ಎಂದು ಸಿಬಿಎಸ್ಇ ತನ್ನ ಪೋಸ್ಟ್ನಲ್ಲಿ ತಿಳಿಸಿದೆ.
ಗಗನ್ ದೀಪ್ ಕೌರ್ ಬರೆದ ಮತ್ತು ಜಿ.ರಾಮ್ ಬುಕ್ಸ್ (ಪಿ) ಲಿಮಿಟೆಡ್ ಎಜುಕೇಷನಲ್ ಪಬ್ಲಿಷರ್ಸ್ ಪ್ರಕಟಿಸಿದ ‘ಸ್ವಯಂ ಜಾಗೃತಿ ಮತ್ತು ಸಬಲೀಕರಣಕ್ಕೆ ಮಾರ್ಗದರ್ಶಿ’ ಎಂಬ ಪುಸ್ತಕದಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಷಯಗಳು ಎಂದು ಮಂಡಳಿ ಹೇಳಿದೆ.
ಈ ‘ರೇಷನ್ ಕಾರ್ಡ್’ಯಿದ್ರೆ ಅಗ್ಗದಲ್ಲಿ ಸಿಗುತ್ತೆ ‘ಗೋಧಿ, ಅಕ್ಕಿ, ಸಕ್ಕರೆ’ ; ನೀವೂ ಅಪ್ಲೈ ಮಾಡಿ
BIG NEWS: ಗದಗ ‘ಕಟೌಟ್ ದುರಂತ’: ಗಾಯಾಳುಗಳ ನೆರವಿಗೆ ಧಾವಿಸಿದ ‘ನಟ ಯಶ್’, 1 ಲಕ್ಷ ನೆರವು