ನವದೆಹಲಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪತ್ರಕರ್ತನನ್ನು ಬಂಧಿಸಿದೆ. ಶಂಕಿತನನ್ನು ಜಮಾಲುದ್ದೀನ್ ಎಂದು ಗುರುತಿಸಲಾಗಿದೆ.

ಅವರು ‘ಪ್ರಭಾತ್ ಖಬರ್’ ಎಂಬ ಹಿಂದಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಬಂಧಿಸಲ್ಪಟ್ಟ ಹಜಾರಿ ಬಾಗ್ನ ಒಯಾಸಿಸ್ ಶಾಲೆಯ ಇಬ್ಬರು ಆರೋಪಿಗಳ ಸಹಚರ ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ.

ನಿನ್ನೆಯಷ್ಟೇ ಜಾರ್ಖಂಡ್ ನ ಹಜಾರಿಬಾಗ್ನ ಒಯಾಸಿಸ್ ಶಾಲೆಯ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರನ್ನು ಸಿಬಿಐ ಶುಕ್ರವಾರ ಬಂಧಿಸಿತ್ತು.

ಆರೋಪಿ ಪ್ರಾಂಶುಪಾಲ ಡಾ.ಎಹ್ಸಾನುಲ್ ಹಕ್ ಹಜಾರಿಬಾಗ್ನಲ್ಲಿ ನೀಟ್ ಪರೀಕ್ಷೆಯ ಜಿಲ್ಲಾ ಸಂಯೋಜಕರಾಗಿದ್ದರು ಮತ್ತು ಅವರ ಡೆಪ್ಯೂಟಿ ಇಮ್ತಿಯಾಜ್ ಆಲಂ ಎನ್ಟಿಎ ವೀಕ್ಷಕರಾಗಿರುವುದರ ಜೊತೆಗೆ ಒಯಾಸಿಸ್ ಶಾಲೆಯಲ್ಲಿ ಕೇಂದ್ರದ ಅಧೀಕ್ಷಕರಾಗಿದ್ದರು.

BREAKING : ಶಾಸಕ ವಿನಯ್‌ ಕುಲಕರ್ಣಿಗೆ ಕೋರ್ಟ್ ಶಾಕ್‌ : ಧಾರವಾಡ ಭೇಟಿಗೆ‌ ಮತ್ತೆ ನಿರಾಕರಣೆ

ಭಾರತ-ಅಮೆರಿಕ ನಡುವಿನ ‘ಸಮತೂಕದ ತೆರಿಗೆ ಒಪ್ಪಂದ’ ಜೂನ್ 30ರವರೆಗೆ ವಿಸ್ತರಣೆ

Share.
Exit mobile version