ಮಂಡ್ಯ: ಜಿಲ್ಲೆಯ ಕಾವೇರಿ ನದಿಗೆ ರಾಜ್ಯ ಸರ್ಕಾರದಿಂದ ಗಂಗಾ ಆರತಿ ಮಾದರಿಯಲ್ಲೇ ಕಾವೇರಿ ಆರತಿ ಮಾಡಲು ನಿರ್ಧರಿಸಿತ್ತು. ಈ ವಿಚಾರಕ್ಕಾಗಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವಂತ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ ಎಂದು ಹೇಳಿರುವ ಮಾತು ಅಕ್ಷರಶಃ ಸತ್ಯ. ಕಾವೇರಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೋಟ್ಯಂತರ ಜನರ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಸಹಾಯವನ್ನು ಮಾಡಿದೆ ಎಂದಿದ್ದಾರೆ.
ಪ್ರವಾಸೋದ್ಯಮ ಇರಬಹುದು, ವ್ಯವಸಾಯ ಇರಬಹುದು ಅಥವಾ ನದಿ ದಂಡೆಯ ಮೇಲೆ ಇರುವ ಧಾರ್ಮಿಕ ಕೇಂದ್ರಗಳು ಇರಬಹುದು, ಇದರಿಂದ ಕೋಟ್ಯಂತರ ಜನರ ಬದುಕು ಹಸನಾಗುತ್ತಿದೆ. ಕಾವೇರಿ ನದಿಗೆ ಕಾವೇರಿ ಆರತಿಯನ್ನು ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಹೆಮ್ಮೆಯ ವಿಚಾರವಾಗಿದೆ. ಹಾಗಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಹೇಳಿದ್ದಾರೆ.
BIG NEWS: ವಿಶ್ವವಿಖ್ಯಾತ ‘ಮೈಸೂರು ದಸರಾ’ಗೆ ಪ್ರಾಯೋಗಿಕ ‘ಕಾವೇರಿ ಆರತಿ’ ಆರಂಭ?
ತುಂಗಭದ್ರ ಜಲಾಶಯಕ್ಕೆ ಗೇಟ್ ಅಳವಡಿಸಿ 20 TMC ನೀರು ಉಳಿಸಿದ ತಜ್ಞರಿಗೆ ಧನ್ಯವಾದ ಅರ್ಪಿಸಿದ ಸಿಎಂ ಸಿದ್ಧರಾಮಯ್ಯ
ಇರಾನ್ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 30 ಕಾರ್ಮಿಕರು ಸಾವು, ಹಲವರಿಗೆ ಗಾಯ | Iran coal mine blast