ದಾವಣಗೆರೆ: ರಾಜ್ಯಾಧ್ಯಂತ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಸಿಸ್ಟಮ್ ಬಳಕೆ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಈ ನಿಯಮ ಮೀರಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆಯಲ್ಲಿ ಡಿಜೆ ಬಳಸಿದ್ದಕ್ಕೆ, ಜಪ್ತಿ ಮಾಡಿರುವಂತ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೌದು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಹಿನ್ನಲೆಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಜಪ್ತಿ ಮಾಡಲಾಗಿದೆ. ದಾವಣಗೆರೆ ತಾಲ್ಲೂಕಿನ ಬಸವನಾಳ ಗೊಲ್ಲರಹಟ್ಟಿಯಲ್ಲಿ ಡಿಜೆ ಜಪ್ತಿ ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯಾಧ್ಯಂತ ಗಣೇಶ ಮೆರವಣಿಗೆ ವೇಳೆ ಜಿಡೆ ಸೌಂಡ್ ಸಿಸ್ಟಮ್ ಬಳಕೆ ನಿಷೇಧಿಸಲಾಗಿತ್ತು. ಡಿಸಿ ಜಿ.ಎಂ ಗಂಗಾಧರಸ್ವಾಮಿ ಆದೇಶಿಸಿದ್ದರು. ಈ ನಿಯಮ ಉಲ್ಲಂಘಿಸಿದ್ದರಿಂದ ಡಿಜೆ ಸಿಸ್ಟಮ್ ಜಪ್ತಿ ಮಾಡಲಾಗಿದೆ.
ಇನ್ನೂ ಡಿಜೆಟಿ ಸಿಸ್ಟಂ ಮಾಲೀಕ, ಗಣೇಶ ಉತ್ಸವ ಸಮಿತಿಯವರು ಸೇರಿದಂತೆ ಮೂವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಡಿಜೆ ಸೌಂಡ್ ಸಿಸ್ಟಮ್ ಬಳಸಿ ಗ್ರಾಮಸ್ಥರಿಗೆ ತೊಂದರೆ ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕೆಲಸದಲ್ಲಿ ಸ್ಥಳದಲ್ಲೇ ಭಾರತೀಯ ಮೂಲದ ಮೈಕ್ರೋಸಾಫ್ಟ್ ಟೆಕ್ಕಿ ಶವವಾಗಿ ಪತ್ತೆ: ಓವರ್ ವರ್ಕ್ ಬಗ್ಗೆ ಕುಟುಂಬಸ್ಥರು ಕಳವಳ
ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದ: ಈ ಸ್ಪಷ್ಟನೆ ಕೊಟ್ಟ ಸಿಎಂ ಸಿದ್ಧರಾಮಯ್ಯ