Film – Page 3 – Kannada News Now


Film

Film Sandalwood State

ಸಿನಿಮಾಡೆಸ್ಕ್: ಸ್ಯಾಂಡಲ್‌ವುಡ್‌ನ ಸಿನಿಮಾ ಚಿತ್ರೀಕರಣಗಳನ್ನು ಒಳಗಾಂಣದಲ್ಲಿ ಮಾಡುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೌದು, ಈ ಹಿಂದೆ ಧಾರವಾಹಿಗಳ ಚಿತ್ರೀಕರಣ ಮಾಡುವುದಕ್ಕೆ ಶರತ್ತಿನ ಮೇರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಸ್ಯಾಂಡಲ್‌ವುಡ್‌ನ ಬಹುತೇಕ ಮಂದಿ ಕೂಡ ಇದೇ ತೆರನಾಗಿ ಸಿನಿಮಾಕ್ಕೂ ಕೂಡ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು, ಅದರಂತೆ ಚಿತ್ರರಂಗದ ಮನವಿ ಪರಿಗಣಿಸಿರುವ ಸರ್ಕಾರ ಸಿನಿಮಾದ ಒಳಾಗಂಣ ಕೆಲಸಕ್ಕೆ ಅಸ್ತು ಎಂದಿದಕ್ಕೆ‌, ನಿರ್ಮಾಪಕರ ಸಂಘ ಹಾಗೂ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಇಂದು ಸಚಿವ ಆರ್ ಆಶೋಕ್ ಭೇಟಿಯಾಗಿ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

ಇದೇ ವೇಳೆ ತಮ್ಮನ್ನು ಭೇಟಿಯಾಗಲು ಬಂದ ಸಿನಿಮಾ ಮಂದಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಆರ್.ಅಶೋಕ್ ಅವರು, ಸರ್ಕಾರ ಸಿನಿಮಾಗಳ ಒಳಾಂಗಣ ಕೆಲಸಕ್ಕೆ ಅವಕಾಶ ನೀಡಿದೆ. ಅಂದ್ರೆ ಶೂಟಿಂಗ್ ಬದಲಿಗೆ ಪೋಸ್ಟ್ ಪ್ರೊಡಕ್ಷನ್, ಪ್ರೀ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಎಡಿಟಿಂಗ್, ಮಿಕ್ಸಿಂಗ್, ಗ್ರಾಫಿಕ್ಸ್ ಈ ರೀತಿಯ ಕೆಲಸ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

Film Sandalwood State

ಸಿನಿಮಾಡೆಸ್ಕ್: ಸ್ಯಾಂಡಲ್‌ವುಡ್‌ನ ಸಿನಿಮಾ ಚಿತ್ರೀಕರಣಗಳನ್ನು ಒಳಗಾಂಣದಲ್ಲಿ ಮಾಡುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೌದು, ಈ ಹಿಂದೆ ಧಾರವಾಹಿಗಳ ಚಿತ್ರೀಕರಣ ಮಾಡುವುದಕ್ಕೆ ಶರತ್ತಿನ ಮೇರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಸ್ಯಾಂಡಲ್‌ವುಡ್‌ನ ಬಹುತೇಕ ಮಂದಿ ಕೂಡ ಇದೇ ತೆರನಾಗಿ ಸಿನಿಮಾಕ್ಕೂ ಕೂಡ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು, ಅದರಂತೆ ಚಿತ್ರರಂಗದ ಮನವಿ ಪರಿಗಣಿಸಿರುವ ಸರ್ಕಾರ ಸಿನಿಮಾದ ಒಳಾಗಂಣ ಕೆಲಸಕ್ಕೆ ಅಸ್ತು ಎಂದಿದಕ್ಕೆ‌, ನಿರ್ಮಾಪಕರ ಸಂಘ ಹಾಗೂ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಇಂದು ಸಚಿವ ಆರ್ ಆಶೋಕ್ ಭೇಟಿಯಾಗಿ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

ಇದೇ ವೇಳೆ ತಮ್ಮನ್ನು ಭೇಟಿಯಾಗಲು ಬಂದ ಸಿನಿಮಾ ಮಂದಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಆರ್.ಅಶೋಕ್ ಅವರು, ಸರ್ಕಾರ ಸಿನಿಮಾಗಳ ಒಳಾಂಗಣ ಕೆಲಸಕ್ಕೆ ಅವಕಾಶ ನೀಡಿದೆ. ಅಂದ್ರೆ ಶೂಟಿಂಗ್ ಬದಲಿಗೆ ಪೋಸ್ಟ್ ಪ್ರೊಡಕ್ಷನ್, ಪ್ರೀ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಎಡಿಟಿಂಗ್, ಮಿಕ್ಸಿಂಗ್, ಗ್ರಾಫಿಕ್ಸ್ ಈ ರೀತಿಯ ಕೆಲಸ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

Film Sandalwood

ಬೆಂಗಳೂರು : ಲಾಕ್‌ಡೌನ್‌ ಹೊತ್ತಿನಲ್ಲಿ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಪಿ ಅರ್ಜುನ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಅರ್ಜುನ್ ಹಾಸನ ಮೂಲದ ಬಿ.ಆರ್.ಅನ್ನಪೂರ್ಣ ಜೊತೆ ಸರಳವಾಗಿ ಮದುವೆಯಾಗಿದ್ದಾರೆ. ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್ ನಲ್ಲಿ ಅರ್ಜುನ್ ಮತ್ತು ಅನ್ನಪೂರ್ಣ ಸಪ್ತಪದಿ ತುಳಿದ್ದಾರೆ.

ಮದುವೆಗೆ ನಟ ಧ್ರುವ ಸರ್ಜಾ ಮತ್ತು ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ಸೇರಿದಂತೆ ಕೆಲ ಕಲಾವಿದರು ಮಾತ್ರ ಭಾಗಿಯಾಗಿದ್ದು, ನವ ಜೋಡಿಗೆ ಶುಭಾ ಹಾರೈಸಿದ್ದಾರೆ.ನಿರ್ದೇಶಕ ಎ.ಪಿ.ಅರ್ಜುನ್ ‘ತಂಗಿಗಾಗಿ’ ಸಿನಿಮಾದಲ್ಲಿ ಗೀತರಚನೆಕಾರನಾಗಿ ಚಿತ್ರರಂಗಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅರ್ಜುನ್ ಅವರು ‘ಅಂಬಾರಿ’, ‘ಅದ್ಧೂರಿ’, ‘ಐರಾವತ’, ಮತ್ತು ‘ರಾಟೆ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

Bollywood Film India

 ಸಿನಿಮಾ ಡೆಸ್ಕ್  ಬಿಗ್ ಬಾಸ್ ಖ್ಯಾತಿಯ ನಟಿ ಕಶ್ಮೀರಾ ಶಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೆಲವು ಹಾಟ್  ಫೋಟೋಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಇದರ ಜೊತೆ ತನ್ನ ಹಳೆಯ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳಲು ನನಗೇನು ನಾಚಿಕೆ ಇಲ್ಲ ಎಂದಿರುವ ನಟಿ ಕಾಸ್ಟಿಂಕ್  ಕೌಚ್ ಬಗ್ಗೆ ಕೂಡ ಮಾತನಾಡಿದ್ದಾರೆ.

ಪಾತ್ರಕ್ಕಾಗಿ ಪಲ್ಲಂಗ…?

ಕಾಸ್ಡಿಂಗ್ ಕೌಚ್ ಎಲ್ಲ ಕ್ಷೇತ್ರದಲ್ಲೂ ಇದೆ, ಇದು ಪ್ರತಿ ಕ್ಷೇತ್ರದ ಭಾಗವಾಗಿದೆ, ನನಗೂ ಈ ರೀತಿಯ ಅನುಭವವಾಗಿತ್ತು ಎಂದು ಕಶ್ಮೀರಾ ಹೇಳಿದ್ದಾರೆ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಧೈರ್ಯವಾಗಿ ಎಲ್ಲವನ್ನು ನಿಭಾಯಿಸಿದೆ. ವಿಶೇಷ ಅಂದರೆ ನಿರ್ಮಾಪಕರು ಕೂಡ ನನ್ನ ಪ್ರತಿಭೆಯನ್ನು ನೀಡಿ ನನಗೆ ಅವಕಾಶ ನೀಡಿದರು.  ನನ್ನ ಹಲವು ಸಿನಿಮಾಗಳ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ.

Film State

ಬೆಂಗಳೂರು : ಆಹಾರ ಕಿಟ್ ವಿತರಣೆ ವೇಳೆ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ನಟ, ನಿರ್ಮಾಪಕ ಜೈ ಜಗದೀಶ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ವೇಳೆ ಜೈ ಜಗದೀಶ್ ಸಾರಾ ಗೋವಿಂದು ಅವರಿಗೆ ನಿಂದಿಸಿದ್ದಾರೆ ಎಂದು ಹೇಳಲಾಗಿದ್ದು,, ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಸಾರಾ ಗೋವಿಂದು ಅವರು ಜೈ ಜಗದೀಶ್ ವಿರುದ್ಧ ದೂರು ದಾಖಲಿಸಿದ್ದರು.

ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ  ಎಫ್ ಐ ಆರ್ ದಾಖಲಾಗಿದ್ದು,, ನಟ ಜೈ ಜಗದೀಶ್ ಗೆ ಬಂಧನ ಭೀತಿ ಎದುರಾಗಿದೆ.

Film State

ಬೆಂಗಳೂರು: ಕಿರುತೆರೆ ವೀಕ್ಷಕರಿಗೆ ಸಿಹಿ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಿದ್ದು ಧಾರವಾಹಿಗಳ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್‌.ಆಶೋಕ್‌ ಅವರು ಧಾರವಾಹಿಗಳ  ಒಳಾಂಗಣ ದೃಶ್ಯಗಳ ಚಿತ್ರೀರಣಕ್ಕೆ ಅನುಮತಿ ನೀಡಲಾಗಿದೆ ಅಂತ ಹೇಳಿದರು.

ಇದೇ ವೇಳೆ ಅವರು ಮಾತನಾಡುತ್ತ ಕಡಿಮೆ ಪ್ರಮಾಣದಲ್ಲಿ ಚಿತ್ರೀಕರಣದ ವೇಳೆ ಇರಬೇಕು, ಹೊರಗಡೆ. ರಸ್ತೆಯಲ್ಲಿ ಚಿತ್ರೀಕರಣ ಮಾಡುವಂತಿಲ್ಲ. ಕೇವಲ ಧಾರವಾಹಿಗಳ ಚಿತ್ರೀಕರಣ ಮಾಡುವುಕ್ಕೆ ಮಾತ್ರ ಅವಕಾಶನೀಡಲಾಗಿದ್ದು, ರಿಯಾಲಿಟಿ, ಅಥಾವ ರಿಯಾಲಿಟಿ ಶೋಗಳನ್ನು ಚಿತ್ರೀಕರಣ ಮಾಡುವಂತಿಲ್ಲ ಅಂತ ಎಚ್ಚರಿಸಿದ್ದಾರೆ.

Film Sandalwood State

ನ್ಯೂಸ್‌ಡೆಸ್ಕ್: ಭಾನುವಾರ ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ, ನಿತ್ಯೋತ್ಸವ ಕೆ. ಎಸ್. ನಿಸ್ಸಾರ್ ಅಹ್ಮದ್ ನಿಧನರಾಗಿದ್ದಾರೆ. ಈ ವೇಳೆ ನಿಸ್ಸಾರ್ ಅಹ್ಮದ್ ಅವರ ನಿಧನಕ್ಕೆ ಸುದೀಪ್‌ ಅವರು ಕೂಡ ಸಂತಾಪ ವ್ಯಕ್ತಪಡಿಸುತ್ತಿದ್ದ ವೇಳೆಯಲ್ಲಿ ನಿತ್ಯೋತ್ಸವ ಎನ್ನುವುದರ ಬದಲಿಗೆ ನಿತ್ಯೊತ್ಸವ ಅಂತ ಬರೆದುಕೊಂಡಿದ್ದರು. ಇದನ್ನು ಗಮನಿಸಿದ ದರ್ಶನ್ ಅಭಿಮಾನಿಗಳು ಸುದೀಪ್ ಅವರ ಕಾಲೆಳೆಯಲು ಮುಂದಾದರು. ಇದೇ ವೇಳೆ ಡಿ ಬಾಸ್ ಅಡ್ಡ ಎನ್ನುವ ಹೆಸರಿನ ಟ್ವಿಟರ್‌ ಅಕೌಂಟ್‌ ಹೆಸರಿನ ವ್ಯಕ್ತಿಯೊಬ್ಬರು ಸುದೀಪ್‌ಗೆ ಬುದ್ದಿ ಹೇಳಲು ಹೋಗಿ ತಾವೇ ಯಡವಟ್ಟು ಮಾಡಿಕೊಂಡ ಘಟನೆ ಕೂಡ ನಡೆದಿದೆ.

ಹೌದು, ಸುದೀಪ್‌ ಅವರಿಗೆ ಡಿ ಬಾಸ್ ಅಡ್ಡ ಎನ್ನುವ ಹೆಸರಿನಿಂದ ನಿತ್ಯೋತ್ಸವ ಅದು ಮರಾಯ, ಕನ್ನಡ ಸರಿಯಾಗಿ ಬರೆ ಅಂತ ಸುದೀಪ್‌ಗೆ ಬುದ್ದಿ ಹೇಳಿದ್ದಾರೆ.ಸುದೀಪ್‌ಗೆ ಬುದ್ದಿ ಹೇಳುವ ಅವಸರದಲ್ಲಿ ಡಿ ಬಾಸ್ ಅಡ್ಡ ಎನ್ನುವ ಟ್ವಿಟರ್‌ ಅಕೌಂಟ್‌ ಹೊಂದಿರುವವರು ಮಾರಾಯ ಅನ್ನೋ ಬದಲು ಮರಾಯ ಅಂತ ಬಳಕೆ ಮಾಡಿದ್ದು, ಈಗ ಅದು ಹೊಸ ವಿವಾದವನ್ನು ಪಡೆದುಕೊಂಡಿದ್ದೆ. ಇನ್ನೋಬ್ಬರ ತಪ್ಪನ್ನು ಎತ್ತಿ ಹಿಡಿಯುವ ಮುನ್ನ ತಮ್ಮ ತಪ್ಪನ್ನು ಮೊದಲು ಸರಿ ಮಾಡಿಕೊಳ್ಳಬೇಕು, ಅಲ್ಲದೇ ಮೊದಲು ಕನ್ನಡವನ್ನು ಸರಿಯಾಗಿ ಕಲಿಬೇಕು ಅಂತ ಸುದೀಪ್‌ ಅಭಿಮಾನಿಗಳು ಡಿ ಬಾಸ್ ಅಡ್ಡ ಎನ್ನುವ ಟ್ವಿಟರ್‌ ಅಕೌಂಟ್‌ ಹೊಂದಿರುವ ವ್ಯಕ್ತಿಗೆ ಬುದ್ದಿ ಹೇಳುತ್ತಿದ್ದಾರೆ. ಏನೇ ಆಗಲಿ, ಇನ್ನೋಬ್ಬರಿಗೆ ಬುದ್ದಿಹೇಳುವ ಮುನ್ನ ನಾವೇ ಸರಿಯಾಗಿ ಇರಬೇಕು ಎನ್ನುವುದು ಸುದೀಪ್‌ ಅಭಿಮಾನಿಗಳ ಆಸೆಯಾಗಿದೆ.

Bollywood Film India

ಮುಂಬೈ : ದೇಶಾದ್ಯಂತ ಲಾಕ್ ಡೌನ್ ಮಧ್ಯೆ ಇಂದು ಸಂಜೆ 4 ಗಂಟೆ ಸುಮಾರಿಗೆ ಮುಂಬೈನ ಚಂದನ್ವಾಡಿ ಶವಾಗಾರದಲ್ಲಿ ರಿಷಿ ಕಪೂರ್ ಅವರ ಅಂತ್ಯಕ್ರಿಯೆ ನಡೆ ಯಿತು. ಅವರ ಮಗ ರಣಬೀರ್ ಕಪೂರ್ ದಿವಂಗತ ನಟನ ಅಂತ್ಯಕ್ರಿಯೆ ನೆರವೇರಿಸಿದರು.

ರಿಷಿ ಕಪೂರ್ ಅವರ ಪಾರ್ಥೀವ ಶರೀರವನ್ನು ಎಚ್‌ಎನ್ ರಿಲಯನ್ಸ್ ಆಸ್ಪತ್ರೆಯಿಂದ ಮುಂಬೈನ ಮೆರೈನ್ ಲೈನ್ಸ್‌ನಲ್ಲಿರುವ ಚಂದನ್ವಾಡಿ ಶವಾಗಾರಕ್ಕೆ ತರಲಾಯಿತು, ಅಲ್ಲಿ ಅವರ ಕೆಲವು ಕುಟುಂಬ ಸದಸ್ಯರು ,ಮಾತ್ರ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.

ಇತರ ದಿನಗಳಾಗುತ್ತಿದ್ದರೆ ಮುಂಬೈನವರೆಲ್ಲರೂ ತಮ್ಮ ನೆಚ್ಚಿನ ನಟ ಚಿಂಟು ಕಪೂರ್ ಅವರನ್ನು ಪ್ರೀತಿಯಿಂದ ಬೀಳ್ಕೊಡಲು ಮುಂದಾಗುತ್ತಿದ್ದರು. ಆದರೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇವಲ 20 ಜನರಿ ಮಾತ್ರ ಭಾಗವಹಿಸಿದ್ದರು. ಪುತ್ರಿ ರಿಧಿಮಾ ದೆಹಲಿಯಲ್ಲಿರುವ ಕಾರಣ ಅವರು ಇಂದು ಹೊರಟು ನಾಳೆ ಬೆಳಗ್ಗೆ ತಲುಪುವ ಹಿನ್ನೆಲೆಯಲ್ಲಿ ಇಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಕಪೂರ್ ಕುಟುಂಬದ ಕೆಲವೇ ಸದಸ್ಯರು ಮತ್ತು ಸ್ನೇಹಿತರಿಗೆ ಮಾತ್ರ ಶವಸಂಸ್ಕಾರಕ್ಕೆ ಹಾಜರಾಗಲು ಅವಕಾಶವಿತ್ತು. ಈ ಪಟ್ಟಿಯಲ್ಲಿ ದಿವಂಗತ ನಟರ ಪತ್ನಿ ನೀತು ಕಪೂರ್, ಸಹೋದರಿ ರಿಮಾ ಜೈನ್, ಮನೋಜ್ ಜೈನ್, ಅರ್ಮಾನ್ ಜೈನ್, ಆದರ್ ಜೈನ್, ಅನಿಷಾ ಜೈನ್, ರಾಜೀವ್ ಕಪೂರ್, ರಣಧೀರ್ ಕಪೂರ್, ಸೈಫ್ ಅಲಿ ಖಾನ್, ಕರೀನಾ ಕಪೂರ್, ಅಭಿಷೇಕ್ ಬಚ್ಚನ್, ಅಲಿಯಾ ಭಟ್, ಡಾ. ಜೈ ರಾಮ್, ರೋಹಿತ್ ಧವನ್ ಮತ್ತು ರಾಹುಲ್ ರಾವೈಲ್ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.

Cricket Other Film Sports

ಸ್ಪೆಷಲ್ ಡೆಸ್ಕ್ : ವಿಶ್ವದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನೂ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಸ್ಟಾರ್ ಓಪನರ್‌ ಡೇವಿಡ್‌ ವಾರ್ನರ್‌, ತಮ್ಮ ಟಿಕ್‌ ಟಾಕ್‌ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ಮುದಗೊಳಿಸುತ್ತಿದ್ದಾರೆ.

ಇತ್ತಿಚೆಗಷ್ಟೇ ತಮ್ಮ ಮಗಳಿಗಾಗಿ ಅಧಿಕೃತವಾಗಿ ಟಿಕ್‌ಟಾಕ್‌ ಆಪ್‌ಗೆ ಪದಾರ್ಪಣೆ ಮಾಡಿದ್ದ ಎಡಗೈ ಬ್ಯಾಟ್ಸ್‌ಮನ್ ವಾರ್ನರ್‌, ಹಲವು ಡ್ಯಾನ್ಸ್ ಗಳ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅದರಲ್ಲಿ ಭಾರತೀಯ ಹಾಡುಗಳೂ ಸೇರಿವೆ.

ಐಪಿಎಲ್ ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕರಾಗಿರುವ ವಾರ್ನರ್ ತಮ್ಮ ಅಭಿಮಾನಿಗಳಿವಾಗಿ ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್‌ ಮತ್ತು ಪೂಜಾ ಹೆಗ್ಡೆ ನಟಿಸಿರುವ ಅಲಾ ವೈಕುಂಠಪುರಮುಲೋ ಸಿನಿಮಾದ ‘ಬುಟ್ಟ ಬೊಮ್ಮ’ಗೆ ಸಖತ್‌ ಸ್ಟೆಪ್‌ ಹಾಕಿ ಮಿಂಚಿದ್ದಾರೆ. ಪತ್ನಿ ಕ್ಯಾಂಡೀಸ್‌ ವಾರ್ನರ್‌ ಕೂಡ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಈ ಹಿಂದೆ ವಾರ್ನರ್ ಮುದ್ದಿನ ಮಗಳು ಐವೀ ಜೊತೆ ಕಟ್ರೀನಾ ಕೈಫ್‌ ಅವರ ಸೂಪರ್‌ ಹಿಟ್‌ ‘ಶೀಲಾ ಕಿ ಜವಾನಿ’ ಹಾಡಿಗೆ ಸ್ಟೆಪ್‌ ಹಾಕಿದ್ದರು.

 

View this post on Instagram

Indi stealing the show. #buttabomma #iso

A post shared by Mrs Candice Warner (@candywarner1) on

 

Bollywood Film

ನವದೆಹಲಿ: ನಟ ರಿಷಿ ಕಪೂರ್ ಅವರ ಅಂತ್ಯಕ್ರಿಯೆಗಾಗಿ ಅವರ ಪುತ್ರಿ ರಿಧಿಮಾ ಕಪೂರ್ ಸಾಹ್ನಿಗೆ ಲಾಕ್ ಡೌನ್ ಮಧ್ಯದಲ್ಲೂ ದೆಹಲಿಯಿಂದ ಮುಂಬೈಗೆ ರಸ್ತೆ ಮೂಲಕ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಕೈಗಾರಿಕೋದ್ಯಮಿಯನ್ನು ಮದುವೆಯಾಗಿ ದೆಹಲಿಯಲ್ಲಿ ಉಳಿದುಕೊಂಡಿರುವ 39 ವರ್ಷದ ರಿಧಿಮಾ ಕಪೂರ್ ಅವರು ಚಾರ್ಟರ್ಡ್ ಫ್ಲೈಟ್ ಮೂಲಕ ಮುಂಬೈಗೆ ಹಾರಲು ಅನುಮತಿ ಕೋರಿ ಕಳೆದ ರಾತ್ರಿ ಕೇಂದ್ರ ಗೃಹ ಸಚಿವಾಲಯವನ್ನು ಕೇಳಿದ್ದರು. ಆದರೆ ಗೃಹ ಸಚಿವ ಅಮಿತ್ ಶಾ ಮಾತ್ರ ಅನುಮತಿ ನೀಡಲು ಸಾಧ್ಯ ಎಂದು ತಿಳಿದು ಬಂದಿದೆ.

ಇದೀಗ ರಿಧಿಮಾ ರಸ್ತೆಯ ಮೂಲಕ ಪ್ರಯಾಣಿಸಲಿದ್ದು, 1,400 ಕಿ.ಮೀ ಪ್ರಯಾಣದ ನಂತರ ಮುಂಬೈ ತಲುಪುವ ನಿರೀಕ್ಷೆಯಿದೆ, ಇದು ಸರಿಸುಮಾರು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ರಿಧಿಮಾ ಕಪೂರ್ ಇನ್ಸ್ಟಾಗ್ರಾಮ್ ನಲ್ಲಿ ತಂದೆ ನಿಧನದ ಬಗ್ಗೆ ಕಂಬನಿ ತುಂಬಿದ ಪೋಸ್ಟ್ ಬರೆದಿದ್ದು, “ಪಾಪಾ ಐ ಲವ್ ಯು ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ – ಆರ್ ಐಪಿ ನನ್ನ ಪ್ರಬಲ ಯೋಧ ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ನಿನ್ನ ಫೇಸ್ ಟೈಮ್ ಕರೆಗಳನ್ನು ಮಿಸ್ ಮಾಡುತ್ತೇನೆ. ನಾವು ಮತ್ತೆ ಭೇಟಿಯಾಗುವವರೆಗೂ ಪಾಪಾ ಐ ಲವ್ ಯು.” ಎಂದು ಬರೆದುಕೊಂಡಿದ್ದಾರೆ.