ನವದೆಹಲಿ: ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸುವಾಗ ಮತ್ತು ವಿಚಾರಣೆ ನಡೆಸುವಾಗ ಅರ್ಜಿದಾರರ ಜಾತಿ, ಧರ್ಮ ಪ್ರಸ್ತಾಪ ಮಾಡಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ.
ಈ ಕುರಿತಂತೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ಅಹ್ಸುದ್ದೀನ್ ಅಮಾನುಲ್ಲಾ ಅವರಿದ್ದ ನ್ಯಾಯಪೀಠವು ಸುಪ್ರೀಂ ಕೋರ್ಟ್ ರಿಜಿಸ್ಟಾರ್ ಗೆ ನಿರ್ದೇಶನ ನೀಡಿದೆ.
ಜಾತಿ, ಧರ್ಮ ನಮೂದಿಸೋದು ಅಪ್ರಸ್ತುತವಾಗಿದೆ. ಎಲ್ಲಾ ಹೈಕೋರ್ಟ್ ಗಳು ಮತ್ತು ಕೆಳ ನ್ಯಾಯಾಲಯಗಳೂ ಆ ಪದ್ದತಿಯನ್ನು ಕೂಡಲೇ ನಿಲ್ಲಿಸಬೇಕು ಎಂಬುದಾಗಿ ಪೀಠ ಖಡಕ್ ಸೂಚನೆ ನೀಡಿದೆ.
ವೈವಾಹಿಕ ವಿವಾದದ ಪ್ರಕರಣದಲ್ಲಿ ಜಾತಿ ನಮೂದಿಸಿದ್ದಕ್ಕೆ ಸಂಬಂಧಿಸಿದಂತೆ ಈ ನಿರ್ದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ.