ಕಲಬುರಗಿ : ಇಡಿ 300 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇದರರ್ಥ ಸಿಎಂ ಅವರು ಕುಟುಂಬಕ್ಕೆ14 ಸೈಟು ಪಡೆದುಕೊಂಡಿದ್ದಾರೆ, ಮುಡಾಗೆ ಕೋಟಿ ಕೋಟಿ ನಷ್ಟ ಆಗಿದೆ ಅಕ್ರಮವಾಗಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ, ಇದರಿಂದಲೂ ಭಾರೀ ನಷ್ಟ ಆಗಿದೆ ಅಂತ ಮಾಜಿ ಶಾಸಕ ರಾಜಕುಮಾರ ಪಾಟೀಲ್ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಆರ್ ಟಿ ಐ ಕಾರ್ಯಕರ್ತ ಹಾಗು ಮೂಡ ಅಕ್ರಮದ ವಿರುದ್ದ ಹೋರಾಟ ಮಾಡುತ್ತಿರುವ ಸ್ನೇಹಮಹಿ ಕೃಷ್ಣ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು ಸ್ನೇಹಮಯಿ ಕೃಷ್ಣಾ ಅವರ ಮೇಲೆಯೇ ಸರ್ಕಾರ ಆರೋಪ ಮಾಡಿ ಅವರನ್ನು ಬಂಧಿಸಲು ಹೋಗಿತ್ತು ಇಡಿ ಮುಟ್ಟುಗೋಲು ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆರೋಪಿ ಸ್ಥಾನದಲ್ಲಿ ಮತ್ತೆ ನಿಲ್ಲುವಂತಾಗಿದೆ ತತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಂತ ಹೇಳಿದರು .
ಬಿಜೆಪಿಯವ್ರು ಅನುದಾನ ವಾಪಸ್ ಕೊಡಲಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ, ರಾಜ್ಯ ಸರ್ಕಾರ ನಮಗೇನು ಉಪಕಾರ ಮಾಡ್ತಿದ್ದಾರಾ? ಅಂತ ಪ್ರಶ್ನೆ ಮಾಡಿದ ಅವರು ಸರ್ಕಾರ ಬಂದು ಎರಡು ವರ್ಷ ಆದರೂ ಅನುದಾನ ಇಲ್ಲ. ಶಾಸಕರು ಹತಾಷರಾಗಿದ್ದಾರೆ? ಎರಡು ವರ್ಷ ಆದರೂ ಅನುದಾನ ಕೊಟ್ಟಿಲ್ಲ ಇವರ ಯೋಗ್ಯತೆಗೆ ಯಾವ ರೀತಿ ಸರ್ಕಾರ ನಡೆಸ್ತಿದ್ದಾರೆ ನಮಗೇನು ಅನುದಾನ ಕೊಟ್ಟು ಉಪಕಾರ ಮಾಡ್ತಿದ್ದಾರಾ? ಕ್ಷೇತ್ರಗಳಿಗೆ ಹಣ ಕೊಡೋದು ಕರ್ತವ್ಯ, ಉಪಕಾರ ಅಲ್ಲ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲಿ ಅಂತ ಹೇಳಿದರು
ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿ ಮುನ್ನಲೆಗೆ
ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿಯನ್ನು ಮುನ್ನಲೆಗೆ ತಂದಿದ್ದಾರೆ. ವಾಲ್ಮೀಕಿ ನಿಗಮದಲ್ಲಿ, ಮುಡಾದಲ್ಲಿ ಹಗರಣ ಆಗಿದೆ. ಕಿಯೋನಿಕ್ಸ್ ನಲ್ಲಿ ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಇನ್ನೊಂದು ಕಡೆ ಆತ್ಮಹತ್ಯೆಗಳು ಆಗುತ್ತಿವೆ. ಜಾತಿ ಗಣತಿ ಹಿಂದೆ ಒಳ್ಳೇ ಉದ್ದೇಶ ಇದೆಯೋ, ದುರುದ್ದೇಶ ಇದೆಯೋ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ 2016 ರಲ್ಲೇ ವರದಿ ಕೈಸೇರಿದ್ದಾಗಲೇ ಜಾರಿ ಮಾಡಬೇಕಿತ್ತು. ಇಷ್ಟು ವರ್ಷ ಕಾರಣಗಳನ್ನು ಮುಂದೊಡ್ಡಿದ್ರು. ಇದು ರಾಜಕೀಯ ಷಢ್ಯಂತ್ರ, ಜಾತಿ ಜನಗಣತಿಯನ್ನು ರಾಜಕೀಯ ಚದುರಂಗ ಅನ್ಕೊಂಡಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಜನಗಣತಿ ಅಸ್ತ್ರ ಬಿಟ್ಟು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರೋದು ಅಕ್ಷಮ್ಯ ಅಪರಾಧ ಅಂತ ಹೇಳಿದರು.
ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ, ನಾನು ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ: DKS
ಟ್ರಂಪ್ ಹೊಸ ಕ್ರಿಪ್ಟೋಕರೆನ್ಸಿಯ ನಂತರ ಮೆಲಾನಿಯಾ ಮೆಮೆ ನಾಣ್ಯ ಬಿಡುಗಡೆ | Melania Meme Coin