ಬೆಂಗಳೂರು: ನಗರದಲ್ಲಿ ಇಂದಿನಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭಗೊಂಡಿತ್ತು. ರಾಜ್ಯಾಧ್ಯಂತ ಆರಂಭಗೊಂಡಾಗ ಎದುಗಾರಿದ್ದಂತ ವಿಘ್ನದಂತೆ ಬೆಂಗಳೂರಲ್ಲಿ ಮೊದಲ ದಿನವೇ ವಿಘ್ನ ಉಂಟಾಗಿದೆ. ಗೊಂದಲ ನಿವಾರಿಸುವಂತೆ ಗಣತಿದಾರರು ಪ್ರತಿಭಟನೆ ಕೂಡ ನಡೆಸಿದ್ದಾರೆ.
ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಇರುವಂತ ಜಿಬಿಎ ಕಚೇರಿಯಲ್ಲಿ ಗೊಂದಲ ನಿವಾರಣೆಗೆ ಆಗ್ರಹಿಸಿ ನೂರಾರು ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದಂತ ಗಣತಿದಾರರು ಪ್ರತಿಭಟನೆ ನಡೆಸಿದರು. ವಾರ್ಡ್ ಗಳ ಹಂಚಿಕೆಯಲ್ಲಿ ಗಣತಿದಾರರಿಗೆ ಗೊಂದಲ ಉಂಟಾಗಿದೆ. ಇದನ್ನು ನಿವಾರಿಸುವಂತೆ ಒತ್ತಾಯಿಸಿದರು.
ಇದಷ್ಟೇ ಅಲ್ಲದೇ ರೋಗಿಗಳನ್ನೂ ಗಣತಿಗೆ ನೇಮಕ ಮಾಡಲಾಗಿದೆ. ಆಪ್ ನಲ್ಲಿ ತಾಂತ್ರಿಕ ಸಮಸ್ಯೆ ಸೇರಿ ಹತ್ತಾರು ಗೊಂದಲಗಳಿದ್ದಾವೆ. ಇವುಗಳನ್ನು ಬಗೆ ಹರಿಸುವಂತೆ ಆಗ್ರಹಿಸಿ ಗಣತಿದಾರರು ಜಿಬಿಎ ಅಧಿಕಾರಿಗಳಿಗೆ ಆಗ್ರಹಿಸಿದರು.
ಇದಲ್ಲದೇ ತಮ್ಮ ಕ್ಷೇತ್ರವನ್ನು ಬಿಟ್ಟು 30 ರಿಂದ 40 ಕಿಲೋಮೀಟರ್ ದೂರದವರೆಗೂ ಸಮೀಕ್ಷೆಗೆ ನಿಯೋಜಿಸಲಾಗಿದೆ. ಸಮಸ್ಯೆ ಎದುರಾದರೇ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದಾಗಿ ಗಣತಿದಾರರು ಬೇಸರವನ್ನು ಹೊರ ಹಾಕಿದರು.
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಬೆಂಬಲ ಬೆಲೆ ಯೋಜನೆಯಡಿ ‘ರಾಗಿ ಖರೀದಿ’ಗೆ ನೋಂದಣಿ ಪ್ರಾರಂಭ
ಗಮನಿಸಿ : ನಿಮ್ಮ ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ?