ಬೆಂಗಳೂರು : ರಾಜ್ಯದಲ್ಲಿ ಜಾತಿ ಗಣತಿಗೆ ತುಸು ವೇಗ ಸಿಕ್ಕಿದ್ದು, ಬುಧವಾರ ಒಂದೇ ದಿನ ಒಂದೂವರೆ ಲಕ್ಷ ಮಂದಿಯ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ 6 ಗಂಟೆ ವೇಳೆಗೆ ಒಟ್ಟು 84,180 ಕುಟುಂಬಗಳ 3,19,829 ಜನಸಂಖ್ಯೆಯ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಮೂರು ದಿನ ಪೂರೈಸಿದೆ. ಮೊದಲ ದಿನವಾದ ಸೋಮವಾರ 2,765 ಕುಟುಂಬಗಳ 10,642 ಮಂದಿಯ ಸಮೀಕ್ಷೆ ಮಾತ್ರ ನಡೆಸಲಾಗಿತ್ತು. ಎರಡನೇ ದಿನ ತುಸು ಪ್ರಗತಿ ಕಾಣಿಸಿಕೊಂಡಿತ್ತು. 3ನೇ ದಿನ ಸಂಜೆ 6 ಗಂಟೆ ವೇಳೆಗೆ ಬುಧವಾರ ಒಂದೇ ದಿನ 1.5 ಲಕ್ಷದಷ್ಟು ಜನಸಂಖ್ಯೆಯ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ.
ಮಂಡ್ಯದಲ್ಲಿ 4,865 ಕುಟುಂಬಗಳ 17,465 ಮಂದಿಯ ಸಮೀಕ್ಷೆ, ಹಾವೇರಿಯಲ್ಲಿ 7,942 ಕುಟುಂಬಗಳ 30,791 ಜನಸಂಖ್ಯೆ, ಬಾಗಲಕೋಟೆಯಲ್ಲಿ 5,873 ಕುಟುಂಬಗಳ 23,593 ಜನಸಂಖ್ಯೆಯ ಗಣತಿ ನಡೆಸಲಾಗಿದೆ. ಬೆಳಗಾವಿಯಲ್ಲಿ 7146 ಕುಟುಂಬಗಳ 26,494 ಮಂದಿ, ರಾಯಚೂರಲ್ಲಿ 2,723 ಕುಟುಂಬಗಳ 10,728 ಜನರ ಸಮೀಕ್ಷೆ ನಡೆಸಲಾಗಿದೆ ಎಂದು ವರದಿಯಾಗಿದೆ.