ಬೆಂಗಳೂರು: ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟದಲ್ಲಿ ಜಾತಿ ಗಣತಿ ವರದಿಯ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸಲಾಗಿದೆ. ಈ ಬೆನ್ನಲ್ಲೆ ರಾಜ್ಯದಲ್ಲಿ ನಡೆದಿದ್ದಂತ ಜಾತಿಗಣತಿಯ ಅಂಕಿ-ಅಂಶಗಳು ಬಹಿರಂಗಗೊಂಡಿದ್ದಾವೆ.
ಹೌದು ರಾಜ್ಯದಲ್ಲಿ ನಡೆದಿದ್ದಂತ ಜಾತಿಗಣತಿಯ ಅಂಕಿ-ಅಂಶಗಳ ಮಾಹಿತಿ ಈಗ ಬಹಿರಂಗಗೊಂಡಿದೆ. ರಾಜ್ಯದಲ್ಲಿ ಪ್ರವರ್ಗ-1ರ ಒಟ್ಟು ಜನಸಂಖ್ಯೆ 34,96,638 ಆಗಿದೆ. ಇವರ ಶೇಕಡಾ ಪ್ರಮಾಣ 8.40 ಆದರೇ ಅನುಪಾತ ಶೇ.4ರಷ್ಟು ಆಗಿದೆ.ಇನ್ನು ಪ್ರವರ್ಗ-1ಬಿಯವರು 73,92,313 ಆಗಿದೆ. ಪ್ರವರ್ಗ-1ಎ ಮತ್ತು 1ಬಿ ಒಟ್ಟು ಜನಸಂಖ್ಯೆ 1,08,88,951 ಆಗಿದೆ.
ಇನ್ನೂ 11ಎ ವರ್ಗದವರು 77,78,209 ಆಗಿದ್ದರೇ 2ಬಿ ವರ್ಗದವರು 75,25,880 ಆಗಿದೆ. ಈ ಎರಡು ವರ್ಗದವರ ಒಟ್ಟು ಜನಸಂಖ್ಯೆ 1.53,04,089 ಆಗಿದೆ. ಪ್ರವರ್ಗ 3ಎ ಜನಸಂಖ್ಯೆ 72,99,577 ಆಗಿದ್ದರೇ, 3ಬಿ ವರ್ಗದ ಜನಸಂಖ್ಯೆ 81,37,536 ಆಗಿದೆ. ಈ ಎರಡು ವರ್ಗದ ಜನಸಂಖ್ಯೆ 1,54,37,133 ಆಗಿದೆ.
ಒಟ್ಟಾರೆ ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆಯ ಪ್ರಕಾರ 4,16,30,153 ಜನಸಂಖ್ಯೆ ಇದೆ. ಪ್ರವರ್ಗ-1ಎ ಶೇ.4 ರಷ್ಟಿದ್ದರೇ, ಪ್ರವರ್ಗ-1ಬಿ ಜನಸಂಖ್ಯೆ ಶೇ.6ರಷ್ಟಿದೆ ಪ್ರವರ್ಗ-2ಎ ಜನಸಂಖ್ಯೆ ಶೇ.10ರಷ್ಟಿದ್ದರೇ, 2ಬಿ ವರ್ಗದ ಜನಸಂಖ್ಯೆ ಶೇ.8, 3ಎ ಜನಸಂಖ್ಯೆ ಶೇ.7, 3ಬಿ ಜನಸಂಖ್ಯೆ ಶಏ.8ರಷ್ಟು ರಾಜ್ಯದಲ್ಲಿ ಇರುವುದಾಗಿ ವರದಿಯ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.
ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾತಿ ಗಣತಿ ನಾಟಕ ಮಾಡುತ್ತಿದ್ದಾರೆ: HD ಕುಮಾರಸ್ವಾಮಿ ಆರೋಪ
BREAKING: ಖ್ಯಾತ ಕಥಕ್ ನೃತ್ಯಗಾರ್ತಿ ಕುಮುದಿನಿ ಲಖಿಯಾ ನಿಧನ | Kumudini Lakhia No More
BREAKING : ಪಾಕಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ 5.8 ತೀವ್ರತೆಯ ಪ್ರಬಲ ಭೂಕಂಪ | Earthquake in Pakistan