ನವದೆಹಲಿ: ದೇಶಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. 2026ರ ಏಪ್ರಿಲ್ 10 ರಿಂದ ಯಾವುದೇ ಟೋಲ್ ಬೂತ್‌ಗಳಲ್ಲಿ ನಗದು ಸ್ವೀಕರಿಸಲಾಗುವುದಿಲ್ಲ. ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಪಾರದರ್ಶಕತೆ ತರಲು ಈ ಕ್ರಾಂತಿಕಾರಿ ಕ್ರಮ ಕೈಗೊಳ್ಳಲಾಗಿದೆ.
ಎಂದಿನಂತೆ ಫಾಸ್ಟ್ಯಾಗ್ ಮೂಲಕ ಸ್ವಯಂಚಾಲಿತವಾಗಿ ಹಣ ಕಡಿತವಾಗಲಿದೆ. ಇದು ಅತ್ಯಂತ ಸುಲಭ ಮತ್ತು ವೇಗದ ವಿಧಾನವಾಗಿದೆ.ಒಂದು ವೇಳೆ ನಿಮ್ಮ ಫಾಸ್ಟ್ಯಾಗ್ ಕೆಲಸ ಮಾಡದಿದ್ದರೆ ಅಥವಾ ಬ್ಯಾಲೆನ್ಸ್ ಇಲ್ಲದಿದ್ದರೆ, ಟೋಲ್ ಬೂತ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ UPI ಮೂಲಕ ಹಣ ಪಾವತಿಸಬಹುದು.
ಫಾಸ್ಟ್ಯಾಗ್ ಇಲ್ಲದೆ ಕೇವಲ UPI ಮೂಲಕ ಪಾವತಿಸುವವರಿಗೆ ಸಾಮಾನ್ಯ ಟೋಲ್ ದರಕ್ಕಿಂತ 1.25 ಪಟ್ಟು ಹೆಚ್ಚು ಹಣ ವಿಧಿಸಲಾಗುತ್ತದೆ.
ಒಂದು ವೇಳೆ ನೀವು ಡಿಜಿಟಲ್ ಪಾವತಿ ಮಾಡದೆ ಟೋಲ್ ದಾಟಿದರೆ, ನಿಮ್ಮ ವಾಹನ ಸಂಖ್ಯೆಗೆ ಇ-ನೋಟಿಸ್ ಜಾರಿಯಾಗಲಿದೆ. ನೋಟಿಸ್ ಬಂದ 72 ಗಂಟೆಗಳ ಒಳಗಾಗಿ ನೀವು ಬಾಕಿ ಇರುವ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿದರೆ ಯಾವುದೇ ದಂಡವಿರುವುದಿಲ್ಲ.
72 ಗಂಟೆಗಳ ನಂತರವೂ ಹಣ ಪಾವತಿಸದಿದ್ದರೆ, ಸಾಮಾನ್ಯ ಟೋಲ್ ದರದ ಎರಡು ಪಟ್ಟು (Double) ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಡಿಜಿಟಲ್ ಪಾವತಿ ಮಾಡದ ವಾಹನಗಳನ್ನು ಹೆದ್ದಾರಿಯಿಂದ ಹೊರಹಾಕಲು ಅಥವಾ ಪ್ರವೇಶ ನಿರಾಕರಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.








