ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ನಂತ್ರ, ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮವನ್ನು ಆಯೋಗವು ಕೈಗೊಂಡಿದೆ. ಇದರ ನಡುವೆ ಭಾನುವಾರ ಒಂದೇ ದಿನ ಬರೋಬ್ಬರಿ 2.84 ಕೋಟಿ ಮೌಲ್ಯದ ಹಣ, ವಸ್ತು, ಮದ್ಯವನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ.
ಈ ಕುರಿತಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಭಾನುವಾರ ಕ್ಷಿಪ್ರಪಡೆ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ರೂ.1,87,81,820 ಹಣವನ್ನು ಜಪ್ತಿ ಮಾಡಿರೋದಾಗಿ ತಿಳಿಸಿದ್ದಾರೆ.
ಇನ್ನೂ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡ, ಪೊಲೀಸರು ಸೇರಿ 133 ಕ್ವಿಂಚಾಲ್ ಪಿಡಿಎಸ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಅದರ ಬೆಲೆ ರೂ.3,33,000 ಆಗಿದೆ. ಇದಲ್ಲದೇ 764.55 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
ಒಟ್ಟಾರೆಯಾಗಿ 5.04 ಕೆಜಿ ಮಾದಕ ದ್ರವ್ಯ, ಅಬಕಾರಿ ಇಲಾಖೆಯಿಂದ 3.65 ಕೆಜಿ ಸೇರಿದಂತೆ 8.69 ಕೆಜಿ ಮಾದಕ ದ್ರವ್ಯ ಸೇರಿದಂತೆ ರೂ.2,84,21,200 ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯಗಳನ್ನು ಜಪ್ತಿ ಮಾಡಿರೋದಾಗಿ ತಿಳಿಸಿದೆ.