ಬೆಂಗಳೂರು: ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳ ಕ್ಯಾಷ್ ಕೌಂಟರ್ ಗಳನ್ನು ಸಾರ್ವತ್ರಿಕ ರಜಾ ದಿನವಾದ ಮಾರ್ಚ್ 29 (ಗುಡ್ ಪ್ರೈಡೆ) ಹಾಗೂ ಮಾರ್ಚ್ 31 (ಭಾನುವಾರ) ತೆರೆಯಲು ನಿರ್ಧರಿಸಲಾಗಿದೆ.
ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಸಲುವಾಗಿ ಮಾರ್ಚ್ 10 ರಿಂದ 19ರವರೆಗೆ ಆನ್ ಲೈನ್ ವಿದ್ಯುತ್ ಸೇವೆಗಳು ಸ್ಥಗಿತಗೊಂಡಿದ್ದವು. ಈ ಅವಧಿಯಲ್ಲಿ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿ ಸಾಧ್ಯವಾಗಿರಲಿಲ್ಲ. ಹಾಗೆಯೇ ತಂತ್ರಾಂಶ ಕಾರ್ಯಾರಂಭಗೊಂಡ ನಂತರ ಸರ್ವರ್ ಓವರ್‌ಲೋಡ್ ಆಗಿ ಆನ್ ಲೈನ್ ವಿದ್ಯುತ್ ಸಂಬಂಧಿತ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ತಂತ್ರಾಂಶ ಉನ್ನತೀಕರಣದ ಹಿನ್ನೆಲೆಯಲ್ಲಿ ಗ್ರಾಹಕರು ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಾರ್ಚ್ 29 ಮತ್ತು 31 ರಂದು ಬೆಸ್ಕಾಂನ ಎಲ್ಲಾ ಉಪ ವಿಭಾಗಗಳ ಕ್ಯಾಶ್ ಕೌಂಟರುಗಳು ಕಾರ್ಯ ನಿರ್ವಹಿಸಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಕ್ಯಾಶ್ ಕೌಂಟರುಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರುಗಳಿಗೆ ಪರಿಹಾರ ರಜೆಯನ್ನು ತೆಗೆದುಕೊಳ್ಳಲು ಅನುಮತಿಯನ್ನು ನೀಡಲಾಗಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಂತ್ರಾಂಶ ಉನ್ನತೀಕರಣದ ಅವಧಿಯಲ್ಲಿ ಬಿಲ್ ಪಾವತಿಸಲು ಅಥವಾ ಇತರ ವಿದ್ಯುತ್ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಸಾಧ್ಯವಾಗಿಲ್ಲ, ಹಾಗಾಗಿ ವಿಳಂಬ ವಿದ್ಯುತ್ ಬಿಲ್ ಪಾವತಿಗೆ ಯಾವುದೇ ದಂಡ ಅಥವಾ ಬಡ್ಡಿ ವಿಧಿಸಲ್ಲ ಎಂದು ಬೆಸ್ಕಾಂ ಈಗಾಗಲೇ ತಿಳಿಸಿದೆ.