ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಸ್ಥಿ ಪಂಜರಗಳ ಶೋಧ ಕಾರ್ಯದ ವೇಳೆಯಲ್ಲಿ 6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಸಿಕ್ಕಿದ್ದವು. ಹೀಗೆ ಸಿಕ್ಕಿರುವಂತ ಮೂಳೆಗಳು 40 ರಿಂದ 50 ವರ್ಷ ಹಳೆಯದ್ದು ಎಂಬುದಾಗಿ ಹೇಳಲಾಗುತ್ತಿದೆ.
ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ ಎನ್ನುವಂತೆ ಅಸ್ಥಿ ಪಂಜರಗಳ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಪಾಯಿಂಟ್ ನಂ.6ರಲ್ಲಿ ಮೂಳೆಗಳು ದೊರೆತಿದ್ದವು. ಕೈ, ತಲೆ ಬುರುಡೆಯ ಮೂಳೆಗಳ ಶೂರುಗಳು ಸೇರಿದಂತೆ 12 ದೊರೆತಿದ್ದವು ಎನ್ನಲಾಗಿತ್ತು.
ಈ ರೀತಿಯಾಗಿ ದೊರೆತಿದ್ದಂತ ಮೂಳೆಗಳನ್ನು ಪರೀಕ್ಷೆಗಾಗಿ ಎಫ್ಎಸ್ಎಲ್ ಗೆ ರವಾನಿಸಲಾಗಿದೆ. ಎಫ್ಎಸ್ಎಲ್ ತಂಡವು ಪರೀಕ್ಷೆಯಿಂದ ಅಸ್ಥಿ ಪಂಜರದ ಮೂಳೆಗಳು 40-50 ವರ್ಷ ಹಿಂದಿನದ್ದು ಎಂದು ಹೇಳಲಾಗುತ್ತಿದೆ. ಅಲ್ಲದೇ 40 ವರ್ಷಗಳ ಹಿಂದೆಯೇ ಶವ ಹೂತಿಟ್ಟಿರುವಂತ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರವಾಗಿ ಇದು ಪುರುಷನ ಅಸ್ಥಿಪಂಜರ ಎಂಬುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಎಫ್ಎಸ್ಎಲ್ ವರದಿಯ ಅಧಿಕೃತ ಮಾಹಿತಿ ಇನ್ನೊಂದು ವಾರದಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.
ಅಂದಹಾಗೇ ಇದುವರೆಗೆ 10 ಪಾಯಿಂಟ್ ಗಳಲ್ಲಿ ಅಸ್ಥಿ ಪಂಜರ ಶೋಧ ಕಾರ್ಯ ಮಾಡಲಾಗಿದೆ. ಈ ಎಲ್ಲದರಲ್ಲಿ 6ನೇ ಪಾಯಿಂಟ್ ನಲ್ಲಿ ಮಾತ್ರ ಮೂಳೆ ಸಿಕ್ಕಿವೆ. ಮತ್ತೆ ನಾಳೆ ಪಾಯಿಂಟ್ ನಂ.11, 12, 13ರಲ್ಲಿ ಶೋಧ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಸ್ತ್ರ ಸಜ್ಜಿತ ಪೊಲೀಸರನ್ನು ಕಾವಲಿರಿಸಲಾಗಿದೆ.
ಶಿವಮೊಗ್ಗ: ಸಾಗರದ ಜಂಬಗಾರುವಿನಲ್ಲಿ ಯಶಸ್ವಿಯಾಗಿ ನಡೆದ ಪೋಕ್ಸೋ, ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ