ಬೆಂಗಳೂರು: ನಾನು ನಿಜವಾಗಿಯೂ ಹೇಳ್ತೀನಿ ಆ ವೀಡಿಯೋ ನೋಡೋಕಾಗಲ್ಲ. ವಯಸ್ಸಾದ ತಾಯಿಯನ್ನು ಆ ರೀತಿ ಬಳಸಿಕೊಂಡಿದ್ದಾರೆ ಎಂಬುದಾಗಿ ಸಂಸದ ಡಿ.ಕೆ ಸುರೇಶ್, ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇದೊಂದು ಇಡೀ ದೇಶವೇ ಅಸಹ್ಯಪಡುವಂತ ಘಟನೆಯಾಗಿದೆ. ಈ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಬೇಕು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಮಾಡಿದ್ರೆ ಅದು ಕುಮಾರಸ್ವಾಮಿನೇ ಮಾಡಿರಬೇಕು ಎಂದರು.
ಹಾಸನ ಪೆನ್ ಡ್ರೈವ್ ಕೇಸಲ್ಲಿ ಯಾವ ರಾಜಕೀಯ ಕೂಡ ಇಲ್ಲ. ನಾನು ಸರ್ಕಾರಕ್ಕೆ ಹೇಳ್ತೀನಿ ಇದರಲ್ಲಿರೋ ಸಂತ್ರಸ್ತರ ಪರವಾಗಿ ನಿಲ್ಲಬೇಕು. ಅವರಿಗೆ ರಕ್ಷಣೆ ನೀಡಬೇಕು ಎಂದು ತಿಳಿಸಿದರು.
ಕುಮಾರಸ್ವಾಮಿ, ದೇವೇಗೌಡ್ರೆ ಬೇರೆಯವರು ಯಾರಾದ್ರೂ ಹೀಗೆ ಮಾಡಿದ್ರೆ ಸುಮ್ನೆ ಇರ್ತಿದ್ರಾ? ತಾಯಂದಿರ ರಕ್ಷಣೆ ಮಾಡಬೇಕು. ಇದು ಅತ್ಯಂತ ಅಸಹ್ಯಕರ ವಿಚಾರವಾಗಿದೆ ಎಂದರು.
1.50 ಲಕ್ಷ ಲಂಚ ಪಡೆಯುವಾಗ ತಾಲೂಕು ಪಂಚಾಯ್ತಿ EO ಲೋಕಾಯುಕ್ತ ಬಲೆಗೆ, ಬಂಧನ