ಬೆಂಗಳೂರು: ನೀಟ್ ಪರೀಕ್ಷೆ ಬರೆದು, ಅರ್ಹತೆ ಪಡೆದಿದ್ದಂತ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಎನ್ನುವಂತೆ 2024-25ನೇ ಸಾಲಿನ PG/ Diploma ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಆನ್ ಲೈನ್ ಮೂಲಕ KEA ಅರ್ಜಿ ಆಹ್ವಾನಿಸಿದೆ. ಅ.5ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು NEET-PG 2024 ರಲ್ಲಿ ಅರ್ಹತೆಯನ್ನು ಪಡೆದಿರುವ ಹಾಗು ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಹ ಅಭ್ಯರ್ಥಿಗಳಿಂದ 2024-25 ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿನ ಸ್ನಾತಕೋತ್ತರ ಪದವಿ / ಡಿಪ್ಲೊಮ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಅಂದರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸೀಟುಗಳು, ಖಾಸಗಿ ಮತ್ತು ಅಲ್ಪ ಸಂಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಾಗುವ ಸರ್ಕಾರಿ ಕೋಟದ ಸೀಟುಗಳು ಮತ್ತು ಖಾಸಗಿ ಮತ್ತು ಅಲ್ಪ ಸಂಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿ ಖಾಸಗಿ ಸೀಟುಗಳ (KPCF, KRLMPCA, AMPCK and Private Universities) ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ ಎಂದು ತಿಳಿಸಿದೆ.
ಸರ್ಕಾರದ ಆದೇಶ ಸಂಖ್ಯೆ ಆಕುಕ 882 ಹೆಚ್.ಎಸ್.ಹೆಚ್. 2021 ಬೆಂಗಳೂರು ದಿನಾಂಕ 10-01-2022ರ ಅನ್ವಯ NEET-PG 2024 ರಲ್ಲಿ ಅರ್ಹತೆಯನ್ನು ಪಡೆದಿರುವ ಹಾಗು ಅರ್ಹತಾ ಮಾನದಂಡಗಳನ್ನು ಪೂರೈಸುವ ಕರ್ನಾಟಕ ಸೇವಾನಿರತ ಅರ್ಹ ಅಭ್ಯರ್ಥಿಗಳಿಂದ 2024-25 ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿನ ಸ್ನಾತಕೋತ್ತರ ಡಿಎನ್‌ಬಿ ಹಾಗು ಡಿಪ್ಲೊಮ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿಯೂ ಸಹ ಪ್ರಾಧಿಕಾರವು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
PGNEET 2024 ರಲ್ಲಿ ನಿಗದಿಪಡಿಸಿರುವ ಕನಿಷ್ಠ ಪರ್ಸೆಂಟೈಲ್ ಅಂಕಗಳನ್ನು ಅಥವಾ ಅದಕ್ಕಿಂತ ಹೆಚ್ಚು ಪರ್ಸೆಂಟೈಲ್ ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಮಾತ್ರ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ನೊಂದಣಿ ಮಾಡಿಕೊಳ್ಳಲು ಅರ್ಹರಿರುತ್ತಾರೆ ಎಂದು ಹೇಳಿದೆ.
ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳು ಅನ್ವಯಿಸುವುದಿಲ್ಲ. ಆದ್ದರಿಂದ NEET-PG 2024 ರಲ್ಲಿ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ ಕನಿಷ್ಠ ಪರ್ಸೆಂಟೈಲ್ ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ (50th Percentile) ಅರ್ಹತೆಯನ್ನು ಪಡೆಯಬಹುದಾಗಿದೆ ಹಾಗು ಪ್ರವೇಶಕ್ಕಾಗಿ ನೊಂದಣಿಯನ್ನು ಮಾಡಿ ಕೊಳ್ಳಬಹುದಾಗಿದೆ. SC/ST/OBC ಅರ್ಹತಾ ಮಾನದಂಡಗಳು ಕರ್ನಾಟಕ SC/ST/OBC ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
5. ಆಸಕ್ತ ಅರ್ಹ ಅಭ್ಯರ್ಥಿಗಳು NEET-PG 2024 ಕರ್ನಾಟಕ ರಾಜ್ಯದಲ್ಲಿನ ಪಿಜಿ ವೈದ್ಯಕೀಯ ಪದವಿ / ಡಿಪ್ಲೊಮ ಕೋರ್ಸುಗಳ ಪ್ರವೇಶಾತಿಗೆ ಪಿಜಿಇಟಿ ಕೈ, ದಿನಾಂಕ 01-10-2024 ರ ಬೆ.11.00 ರಿಂದ 05-10-2024 ರ ಸಂಜೆ 5.30 ರ ವರೆಗೆ ಆನ್‌ಲೈನ್ ಮೂಲಕ ನೊಂದಣಿ ಮಾಡಿ, ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಬಹುದಾಗಿರುತ್ತದೆ.
ನೊಂದಣಿ ಶುಲ್ಕ, ದಾಖಲಾತಿ ಪರಿಶೀಲನೆಯ ವೇಳಾಪಟ್ಟಿ, ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲಾತಿಗಳು, ಹಾಗು ಇತರೆ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿಕೊಂಡು ನೊಂದಣಿ ಮಾಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದು.
ವಿವರವಾದ ಅರ್ಹತಾ ಮಾನದಂಡಗಳನ್ನೊಳಗೊಂಡ PGNEET-2024 ಮಾಹಿತಿ ಪುಸ್ತಕ ಅನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿರುತ್ತದೆ. ನೊಂದಣಿ ಮಾಡಿಕೊಳ್ಳುವ ಮೊದಲು ಶೈಕ್ಷಣಿಕ ಅರ್ಹತೆ, ವಿವಿಧ ವರ್ಗಗಳ ಸೀಟುಗಳಿಗೆ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ಮತ್ತು ಅಂತಹ ಸೀಟುಗಳಿಗೆ ನಿಗದಿಪಡಿಸಿರುವ ಅಭ್ಯರ್ಥಿಯ ಅರ್ಹತೆ ಹಾಗು ಇತ್ಯಾದಿ ಮಾನದಂಡಗಳನ್ನು ಓದಿಕೊಂಡು ನೊಂದಣಿ ಮಾಡಿಕೊಳ್ಳಲು ಸೂಚಿಸಿದೆ.
PGNEET 2024 ರಲ್ಲಿ ಅರ್ಹತೆಯನ್ನು ಪಡೆದ ಮಾತ್ರಕ್ಕೆ, ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದಲ್ಲಿ | ನಿಗದಿತ ಪ್ರಮಾಣ ಪತ್ರಗಳನ್ನು ದಾಖಲಾತಿ ಪರಿಶೀಲನೆಗೆ ಹಾಜರು ಪಡಿಸದಿದ್ದಲ್ಲಿ ಅಭ್ಯರ್ಥಿಯು ಪ್ರವೇಶಾತಿಗಾಗಿ ಯಾವುದೇ ಹಕ್ಕನ್ನು ಹೊಂದುವುದಿಲ್ಲ. ಮುಂದುವರಿದು, ನೊಂದಣಿ ಮಾಡಿಕೊಂಡು ದಾಖಲಾತಿ ಪರೀಶೀಲನೆಯನ್ನು ಯಶಸ್ವಿಯಾಗಿ ಪೂರೈಸುವ ಅಭ್ಯರ್ಥಿಗಳು ಮಾತ್ರ ಕರ್ನಾಟಕದಲ್ಲಿನ ಸರ್ಕಾರಿ / ಖಾಸಗಿ ಕಾಲೇಜುಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ / ದಂತ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ.
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ಅನ್ನು ನೋಡಲು ಕೋರಿದೆ. ಸೂಚನೆ: ಎನ್‌ಎಮ್‌ಸಿ ಅವರ ಸೂಚನೆ ದಿನಾಂಕ 24-07-2023 ರ ಅನ್ವಯ ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಸೇರಿದಂತೆ ಎಲ್ಲಾ ಸುತ್ತಿನ ಸೀಟು ಹಂಚಿಕೆಯನ್ನು ಆನ್‌ಲೈನ್ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದಲೇ ನಡೆಸಲಾಗುವುದರಿಂದ, ಪಿಜಿ ನೀಟ್ 2024 ರಲ್ಲಿ ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ಕರ್ನಾಟಕ ರಾಜ್ಯದಲ್ಲಿನ ಪಿಜಿ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗಲು ಕೆಇಎ ನಲ್ಲಿ ಆನ್‌ಲೈನ್ ಮೂಲಕ ನೊಂದಾಯಿಸಿ, ದಾಖಲೆಗಳ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದೆ.