ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಸತ್ಯಾಗ್ರಹಕ್ಕೆ ಮುಂದಾಗಿದ್ದು, ಈ ಮೂಲಕ ಸರ್ಕಾರವನ್ನು ತಮ್ಮತ್ತ ಗಮನ ಸೆಳೆಯಲು ಮುಂದಾಗಿದೆ. ಈ ನಡುವೆ ಅನುಮತಿಗಾಗಿ ಪೊಲೀಸ್ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ.
JEE Main 2024: ನಾಳೆ ಸೆಷನ್ 2 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ,!
ಪತ್ರದಲ್ಲಿ ಉಲ್ಲೇಖ ಮಾಡಿರುವಂತೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ 1242 ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ: 03.03.2023 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಈ ಆಯ್ಕೆಪಟ್ಟಿಯಲ್ಲಿ ಒಟ್ಟು 1208 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ಹೀಗೆ ವರ್ಷಾನುಟ್ಟಲೆ ನೆನಗುದಿಗೆ ಬಿದ್ದಿದ್ದ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯು ದಿನಾಂಕ: 04/11/2023 ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ. ಇದಾದ ತರುವಾಯದಲ್ಲಿ ತಮ್ಮಿಂದ ಪ್ರಜಾಸತ್ತಾತ್ಮಕ ಸತ್ಯಾಗ್ರಹ ಕೈಗೊಳ್ಳಲು ಅನುಮತಿ ಕೋರಿ, ದಿನಾಂಕ: 20-02-2024 ರಂದು ಅನುಮತಿಯನ್ನೂ ಪಡೆದಿದ್ದೆವು. ಆದರೆ ಉನ್ನತ ಶಿಕ್ಷಣ ಸಚಿವರು ಆದೇಶ ಪತ್ರಿ ನೀಡುವ ಬಗ್ಗೆ ಮಾಡಿದ ವಾಗ್ದಾನದಂತೆ ಸತ್ಯಾಗ್ರಹ ಹಿಂಪಡೆದಿದ್ದೆವು.
ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭೂಕುಸಿತ, 2 ತಿಂಗಳ ಮಗು ಸೇರಿದಂತೆ ನಾಲ್ವರು ಜೀವಂತ ಸಮಾಧಿ!
ಉನ್ನತ ಶಿಕ್ಷಣ ಇಲಾಖೆಯು ಸಹ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿಗೊಳಿಸುವ ಸಂಬಂಧ ದಿನಾಂಕ 26-02-2024 ರಂದು ಹೊರಡಿಸಿದ (ಪತ್ರ ಸಂಖ್ಯೆ: ಕಾಶಿಇ/10/ವರ್ಗಾವಣೆ/2023-2024) ಅಧಿಕೃತ ಜ್ಞಾಪನ ಪತ್ರವನ್ನೂ ಒಂದೇ ದಿನದಲ್ಲಿ ಹಿಂಪಡೆದಿದೆ. ಮರುದಿವಸ ಅಂದರೆ, ದಿನಾಂಕ 27-02-2024 ರಂದು ಪ್ರಕಟಿಸಿದ ಇಲಾಖೆಯ ಅಧಿಕೃತ ಜ್ಞಾಪನ ಪತ್ರದಲ್ಲಿ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕರುಗಳ ಸ್ಥಳನಿಯುಕ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ವೇಳಾಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಸೂಚಿಸಲಾಗಿದೆ.
2024ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತಿ ಯಾವಾಗ ಬರಲಿದೆ ಎನ್ನುವುದು ಇನ್ನೂ ಅಧಿಕೃತವಾಗಿಲ್ಲ, ಒಂದು ವೇಳೆ ಮಾದರಿ ನೀತಿ ಸಂಹಿತಿ ಜಾರಿ ಬಂದರೆ ನೇಮಕಾತಿ ಪತ್ರಕ್ಕಾಗಿ ಕಾಯುತ್ತಿರುವವ ಪರಿಸ್ಥಿತಿ ಡೋಲಾಯಮಾನವಾಗುತ್ತದೆ ಎಂಬ ಆತಂಕ ಅಭ್ಯರ್ಥಿಗಳಲ್ಲಿ ಮನೆ ಮಾಡಿದೆ.
2021 ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಗೆಜೆಟ್ ಹೊರಡಿಸುವಂತೆ 1208 ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ದಿನಾಂಕ:05-03- 2024 ರಿಂದ ಅನಿರ್ಧಿಷ್ಟಾವಧಿ ಪ್ರಜಾಸತ್ತಾತ್ಮಕವಾದ ಸತ್ಯಾಗ್ರಹವನ್ನು ಕೈಗೊಳ್ಳಲು ತೀರ್ಮಾನಿಸಿರುತ್ತೇವೆ. ಈ ಪ್ರಜಾಸತ್ತಾತ್ಮಕ ಸತ್ಯಾಗ್ರಹದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ, ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯುಂಟು ಮಾಡದಂತೆ, ಸರ್ಕಾರದ ವಿರುದ್ಧವಾಗಲಿ, ಅಧಿಕಾರಿಗಳ ವಿರುದ್ಧವಾಗಲಿ ಘೋಷಣೆ ಕೂಗದಂತೆ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ಶಾಂತಿಯುತವಾಗಿ, ನಮ್ಮ ನ್ಯಾಯಯುತ ಬೇಡಿಕೆಯನ್ನು ಸರ್ಕಾರದ ಗಮನಸೆಳೆಯುವ ಮೂಲಕ ಈ ಸತ್ಯಾಗ್ರಹವನ್ನು ಕೈಗೊಳ್ಳಲಿದ್ದೇವೆ. ಆದ್ದರಿಂದಾಗಿ ದಯವಿಟ್ಟು ಈ ಸತ್ಯಾಗ್ರಹಕ್ಕೆ ಅನುಮತಿಯನ್ನು ಮತ್ತು ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಗೌರವಪೂರ್ವಕವಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇವೆ ಅಂತ ಅನುಮತಿಗಾಗಿ ಪತ್ರವನ್ನು ಬರೆದಿದ್ದಾರೆ.ಇದಕ್ಕೆ ಅನುಮತಿ ನೀಡಲಾಗಿದೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಚಿವ ಸಂಪುಟ ಸಭೆ: ಕಾರ್ಯಸೂಚಿಯಲ್ಲಿ ಏನಿದೆ?