ಸುಭಾಷಿತ :

Wednesday, April 1 , 2020 1:33 AM

390 ಕ್ಯಾನ್ಸರ್ ಔಷಧಗಳ ದರ ಇಳಿಕೆ : 22 ಲಕ್ಷ ಕ್ಯಾನ್ಸರ್‌ ರೋಗಿಗಳಿಗೆ ಪ್ರಯೋಜನ


Saturday, March 9th, 2019 9:58 am

ನವದೆಹಲಿ : ದರ ನಿಯಂತ್ರಣ ಪಟ್ಟಿಗೆ ಒಳಪಡದ 390 ಕ್ಯಾನ್ಸರ್‌ ಔಷಧಗಳ ಗರಿಷ್ಠ ಮಾರಾಟ ದರವನ್ನು ಶೇ.87ರ ವರೆಗೂ ಇಳಿಕೆ ಮಾಡಿರುವುದರಿಂದ ಸುಮಾರು 22 ಲಕ್ಷ ಕ್ಯಾನ್ಸರ್‌ ರೋಗಿಗಳಿಗೆ ಬಹು ದೊಡ್ಡ ಪ್ರಮಾಣದಲ್ಲಿ ಪ್ರಯೋಜನ ಉಂಟಾಗಿದೆ.

ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ಫೆ.27ರಂದು ದರ ನಿಯಂತ್ರಣಕ್ಕೆ ಒಳಪಡದ 42 ಕ್ಯಾನ್ಸರ್‌ ಔಷಧಗಳನ್ನು ದರ ನಿಯಂತ್ರಣಕ್ಕೆ ಒಳಪಡಿಸಿ, ವ್ಯಾಪಾರ ಅಂತರ ಶೇ.30ಕ್ಕೆ ಮಿತಿಗೊಳಿಸಿತ್ತು.

ಪರಿಷ್ಕೃತ ದರ ಮಾ.8ರಿಂದ ಜಾರಿಯಾಗಿದೆ. ಒಟ್ಟಾರೆಯಾಗಿ ಕ್ಯಾನ್ಸರ್‌ ನಿವಾರಕ 426 ಔಷಧಗಳ ಪೈಕಿ 390 ಔಷಧಗಳ ದರ ಇಳಿಕೆ ಯಾಗಿದ್ದು, 22 ಲಕ್ಷ ಕ್ಯಾನ್ಸರ್‌ ರೋಗಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಅಲ್ಲದೇ ವಾರ್ಷಿಕವಾಗಿ ಕ್ಯಾನ್ಸರ್‌ ರೋಗಿಗಳಿಗೆ 800 ಕೋಟಿ ರು. ಉಳಿತಾಯವಾಗಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions