Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾಟ್ನಾದಲ್ಲಿ ಖಾನ್ ಸರ್ ಕೋಚಿಂಗ್ ಕೇಂದ್ರದ ಮೇಲೆ ದಾಳಿ: ಪ್ರತಿಸ್ಪರ್ಧಿ ಕೋಚಿಂಗ್ ಸಂಸ್ಥೆಯ ನಿರ್ದೇಶಕ ಸೇರಿ ಮೂವರ ಬಂಧನ!

​’ನಾಗರಿಕರ ಮೇಲೆ ದಾಳಿ ನಿಲ್ಲಿಸಿ’: ಕುವೈತ್ ವಿಮಾನ ನಿಲ್ದಾಣ ದಾಳಿಯಲ್ಲಿ ಭಾರತೀಯನ ಸಾವು, ಇರಾನ್‌ಗೆ ಭಾರತದ ಖಡಕ್ ಎಚ್ಚರಿಕೆ!

​ಭಾರತೀಯ ವಾಯುಪಡೆಯ ಶಕ್ತಿ ವೃದ್ಧಿ: ರಷ್ಯಾದಿಂದ ಆಗಮಿಸಿತು ನಾಲ್ಕನೇ ‘ಎಸ್-400’ ಕ್ಷಿಪಣಿ ತಂತ್ರಜ್ಞಾನ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ: ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್
KARNATAKA

ರಾಜ್ಯದಲ್ಲಿ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ: ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

By ವಸಂತ ಬಿ ಈಶ್ವರಗೆರೆ

ಬೆಳಗಾವಿ ಸುವರ್ಣಸೌಧ : ರಾಜ್ಯದಲ್ಲಿ ಜನ ಸಾಮಾನ್ಯರಿಗೆ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ವಿವಿಧ ಬಗೆಯ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರದ ವಿವಿಧ ಯೋಜನೆಯಡಿ, ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಕೈಗೆಟುಕುವ ಬೆಲೆಯಲ್ಲಿ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣ ಪ್ರಕಾಶ್ ಆರ್ ಪಾಟೀಲ್ ಹೇಳಿದರು.

ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಂ. ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ಬಡತನ ರೇಖೆಗಿಂತ ಕಡಿಮೆ (BPL) ಇರುವ ಕುಟುಂಬಗಳಿಗೆ Ab-Ark (ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ) ಯೋಜನೆಯಡಿಯಲ್ಲಿ ರೂ.5.00 ಲಕ್ಷದವರೆಗೂ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಹಾಗೂ ಬಡತನ ರೇಖೆಗಿಂತ ಮೇಲಿರುವ (APL) ಕುಟುಂಬಗಳಿಗೆ ರಿಯಾಯಿತಿ ಅಂದರೆ 30% ಸರ್ಕಾರದ ಅಡಿಯಿಂದ ಮತ್ತು 70% ರೋಗಿಗಳಿಂದ ಪಡೆದು ಚಿಕಿತ್ಸೆಗಾಗಿ ಭರಿಸಲಾಗುತ್ತದೆ.

ಇದಲ್ಲದೇ SCP and TSP ಯೋಜನೆ ಅಡಿಯಲ್ಲಿ ಉಚಿತ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡಲಾಗುತ್ತದೆ (Rare Disease) ಯೋಜನೆಯಡಿಯಲ್ಲಿ ದುಬಾರಿ ಚಿಕಿತ್ಸೆಗಳಾದ ರೋಬೋಟಿಕ್ ಶಸ್ತ್ರಚಿಕಿತ್ಸೆ, ಅಸ್ಥಿಮಜ್ಜೆ (Bone Marrow) ಹಾಗೂ ಬಡತನ ರೇಖೆಗಿಂತ ಕಡಿಮೆ (BPL) ಇರುವ ಕುಟುಂಬಗಳಿಗೆ ಕ್ಯಾನ್ಸರ್ ತಪಾಸಣೆಗೆ PET-SCANಅನ್ನು ಸಂಪೂರ್ಣ ಉಚಿತವಾಗಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ನೀಡಲಾಗುತ್ತಿದೆ.

ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ರಾಜ್ಯದಾದ್ಯಂತ 31 ಜಿಲ್ಲಾ ಆಸ್ಪತ್ರೆಗಳಲ್ಲಿ ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಲು ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.

ಶ್ರೀ ಪುನೀತ್ ಹೃದಯಜ್ಯೋತಿ ಯೋಜನೆಯಡಿ Hub and Spoke ಮಾದರಿಯಲ್ಲಿ 16 ಜಿಲ್ಲಾ ಆಸ್ಪತ್ರೆಗಳು ಮತ್ತು 70 ತಾಲ್ಲೂಕು ಆಸ್ಪತ್ರೆಗಳಲಿ ಹಠಾತ್ ಹೃದಯಾಘಾತ ಚಿಕಿತ್ಸೆಗೆ ಒಟ್ಟು 86 ಉಪಕರಣಗಳು ಲಭ್ಯವಿದೆ.

ರಾಜ್ಯದಾದ್ಯಂತ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರಿಗೆ 193 ಕೇಂದ್ರಗಳಲ್ಲಿ ಒಟ್ಟು 763 ಡಯಾಲಿಸಿಸ್ ಯಂತ್ರಗಳು ಲಭ್ಯವಿದೆ ಎಂದು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ವಿಭಾಗದಿಂದ ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 2024-25ನೇ ಸಾಲಿನಲ್ಲಿ ಲೆಕ್ಕಶೀರ್ಷಿಕೆವಾರು ಆಸ್ಪತ್ರೆಗಳ ನಿರ್ಮಾಣ ಹಾಗೂ ದುರಸ್ತಿಗೆ 67084.35 ಲಕ್ಷ ರೂ ಅನುದಾನ ನಿಗದಿಪಡಿಸಿದ್ದು, ಈ ಅನುದಾನವನ್ನು ಆದ್ಯತೆ ಮೇರೆಗೆ ಅವಶ್ಯವಿರುವ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಾದ ಕಟ್ಟಡ, ವಸತಿ, ನೀರು ಹಾಗೂ ಶೌಚಾಲಯ ಮತ್ತಿತರ ಅಭಿವೃದ್ಧಿ ಮತ್ತು ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

BREAKING: ವಿಧಾನಸಭೆಯಲ್ಲಿ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ

SHOCKING : ಡಾಬಾದಲ್ಲಿ ಊಟ ಮಾಡುವಾಗಲೇ `ಹೃದಯಾಘಾತ’ : ಕುಸಿದು ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು.! ಆಘಾತಕಾರಿ ವಿಡಿಯೋ ವೈರಲ್

Share. Facebook Twitter LinkedIn WhatsApp Email

Related Posts

ಸಿಎಂ ಡಿಕೆಶಿ ಅಪರ ಮುಖ್ಯ ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್, ಕಾರ್ಯದರ್ಶಿಯಾಗಿ ರಾಜೇಂದ್ರ ಚೋಳನ್ ನೇಮಕ

2 Mins Read
BK Hariprasad

ವಿಧಾನಪರಿಷತ್ ಚುನಾವಣೆ : ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

3 Mins Read

ರಾಮಾಯಣದ ನಂತರ ಹನುಮಂತನು ಎಲ್ಲಿಗೆ ಹೋದನು?

2 Mins Read
Recent News

ಪಾಟ್ನಾದಲ್ಲಿ ಖಾನ್ ಸರ್ ಕೋಚಿಂಗ್ ಕೇಂದ್ರದ ಮೇಲೆ ದಾಳಿ: ಪ್ರತಿಸ್ಪರ್ಧಿ ಕೋಚಿಂಗ್ ಸಂಸ್ಥೆಯ ನಿರ್ದೇಶಕ ಸೇರಿ ಮೂವರ ಬಂಧನ!

​’ನಾಗರಿಕರ ಮೇಲೆ ದಾಳಿ ನಿಲ್ಲಿಸಿ’: ಕುವೈತ್ ವಿಮಾನ ನಿಲ್ದಾಣ ದಾಳಿಯಲ್ಲಿ ಭಾರತೀಯನ ಸಾವು, ಇರಾನ್‌ಗೆ ಭಾರತದ ಖಡಕ್ ಎಚ್ಚರಿಕೆ!

​ಭಾರತೀಯ ವಾಯುಪಡೆಯ ಶಕ್ತಿ ವೃದ್ಧಿ: ರಷ್ಯಾದಿಂದ ಆಗಮಿಸಿತು ನಾಲ್ಕನೇ ‘ಎಸ್-400’ ಕ್ಷಿಪಣಿ ತಂತ್ರಜ್ಞಾನ!

ಇಂಧನ ಬೆಲೆ ಏರಿಕೆ ಬಿಸಿ: ವಿಮಾನಯಾನ ಸಂಸ್ಥೆಗಳಿಗೆ ₹1 ಬಿಲಿಯನ್ ಪರಿಹಾರ ಪ್ಯಾಕೇಜ್ ಘೋಷಿಸಿದ ಭಾರತ ಸರ್ಕಾರ!

State News
KARNATAKA

ಸಿಎಂ ಡಿಕೆಶಿ ಅಪರ ಮುಖ್ಯ ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್, ಕಾರ್ಯದರ್ಶಿಯಾಗಿ ರಾಜೇಂದ್ರ ಚೋಳನ್ ನೇಮಕ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳು ಆರಂಭವಾಗಿವೆ. ಮುಖ್ಯಮಂತ್ರಿ ಶ್ರೀ ಡಿ.ಕೆ.…

BK Hariprasad

ವಿಧಾನಪರಿಷತ್ ಚುನಾವಣೆ : ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ರಾಮಾಯಣದ ನಂತರ ಹನುಮಂತನು ಎಲ್ಲಿಗೆ ಹೋದನು?

Karnataka Weather Update : ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ನಾಳೆ ಆರೆಂಜ್ ಅಲರ್ಟ್ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.