ಮೈಸೂರು: ಮೈಸೂರು ನೈರುತ್ಯ ರೈಲ್ವೆ ವಿಭಾಗದಿಂದ ಈ ರೈಲು ಸೇವೆಗಳ ರದ್ದು, ನಿಯಂತ್ರಣ ಹಾಗೂ ಮರುನಿಗದಿ ಮಾಡಲಾಗಿದೆ.
ಸೊಮಲಾಪುರಂ– ರಾಯದುರ್ಗ ರೈಲು ನಿಲ್ದಾಣಗಳ ನಡುವೆ ಬದನಹಲ್ಲುಯಲ್ಲಿ ಹೊಸ ಕ್ರಾಸಿಂಗ್ ನಿಲ್ದಾಣ ನಿರ್ಮಾಣ ಕಾರ್ಯಕ್ಕಾಗಿ ಕಟ್ ಹಾಗೂ ಕನೆಕ್ಷನ್ ಕೆಲಸಗಳನ್ನು ನಡೆಸಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ ಕೆಳಗಿನ ರೈಲು ಸೇವೆಗಳು ಎರಡು ದಿನಗಳ ಕಾಲ ರದ್ದುಗೊಳ್ಳುತ್ತವೆ, ನಿಯಂತ್ರಣಕ್ಕೊಳಪಡುತ್ತವೆ ಮತ್ತು ಮರುನಿಗದಿಗೊಳ್ಳುತ್ತವೆ.
ರದ್ದುಪಡಿಸಲಾದ ರೈಲುಗಳು
ರೈಲು ಸಂಖ್ಯೆ 57415 ಗುಂತಕಲ್ – ಚಿಕ್ಕಜಾಜೂರು ಪ್ಯಾಸೆಂಜರ್ ದಿನಾಂಕ 02.09.2025 ಮತ್ತು 09.09.2025 ರಂದು ರದ್ದುಗೊಳ್ಳುತ್ತದೆ.
ರೈಲು ಸಂಖ್ಯೆ 57416 ಚಿಕ್ಕಜಾಜೂರು – ಗುಂತಕಲ್ ಪ್ಯಾಸೆಂಜರ್ ದಿನಾಂಕ 02.09.2025 ಮತ್ತು 09.09.2025 ರಂದು ರದ್ದುಗೊಳ್ಳುತ್ತದೆ.
ನಿಯಂತ್ರಿತ ಮತ್ತು ಮರುನಿಗದಿಪಡಿಸಲಾದ ರೈಲುಗಳು
ರೈಲು ಸಂಖ್ಯೆ 57405 ತಿರುಪತಿ – ಕದಿರಿದೇವರಪಳ್ಳಿ ಪ್ಯಾಸೆಂಜರ್ ದಿನಾಂಕ 01.09.2025 ಮತ್ತು 08.09.2025 ರಂದು ಮಾರ್ಗಮಧ್ಯದಲ್ಲಿ 60 ನಿಮಿಷ ನಿಯಂತ್ರಿಸಲಾಗುವುದು.
ರೈಲು ಸಂಖ್ಯೆ 57406 ಕದಿರಿದೇವರಪಳ್ಳಿ – ತಿರುಪತಿ ಪ್ಯಾಸೆಂಜರ್ ದಿನಾಂಕ 02.09.2025 ಮತ್ತು 09.09.2025 ರಂದು ಕದಿರಿದೇವರಪಳ್ಳಿಯಿಂದ 60 ನಿಮಿಷ ಮರುನೀಗದಿಗೊಳಿಸಲಾಗುತ್ತದೆ.
ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಕಳ್ಳತನ ಮಾಡಲು ಬಂದವನಿಂದಲೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ
ಸೆ.2ರಿಂದ ಗ್ರೇಟರ್ ಬೆಂಗಳೂರು ಆಡಳಿತ: ಐದು ಪಾಲಿಕೆಗಳ ರಚಿಸಿ ಸರ್ಕಾರ ಆದೇಶ